ಬಂಟ್ವಾಳ : ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರಥಮ ಮಾಸಿಕ ಸಭೆ ಸಂಘದ ನೂತನ ಅಧ್ಯಕ್ಷ ಸುಧೀರ್ ಪೂಜಾರಿ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಆಟೋಲೈನ್ಸ್ ಗ್ಯಾರೇಜಿನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ ಅವರು ಮಾತನಾಡಿ ಸದಸ್ಯರ ಸಹಕಾರವಿದ್ದಾಗ ಸಂಘಟನೆ ಅಭಿವೃದ್ಧಿಯಾಗುವುದರ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಲು ಸಾಧ್ಯವಿದೆ. ಮನಸ್ತಾಪ ಬಂದಾಗ ನಮ್ಮೊಳಗೆ ಪರಿಹರಿಸಿ ಅವರು ನಮ್ಮವರೇ ಎನ್ನುವ ಭಾವದೊಂದಿಗೆ ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗೋಣ ಎಂದರು. ಜಿಲ್ಲೆಯಲ್ಲಿಯೇ ಬಂಟ್ವಾಳ ವಲಯ ಅತ್ಯಂತ ಪ್ರತಿಷ್ಠಿತ ಸಂಘಟನೆಯಾಗಿದ್ದು ವಿಶಿಷ್ಠ ಕಾರ್ಯಕ್ರಮಗಳೊಂದಿಗೆ ಗುರುತಿಸಿಕೊಂಡಿದೆ. ಆದಷ್ಟು ಶೀಘ್ರ ಸಂಘದ ಕಟ್ಟಡ ನಿರ್ಮಾಣಗೊಳ್ಳಲಿ ಎಂದು ಆಶಿಸಿದ ಅವರು ಅದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಕೋರಿದರು. ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಜಿಲಾ ಕೋಶಾಧಿಕಾರಿ ರಾಜಗೋಪಲ್ ಮಾತನಾಡಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಘಟನೆಯನ್ನು ಮುನ್ನಡೆಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ ಸಿಂಚನ ಪಿ., ಹಾಗೂ ಮಾಡೆಲಿಂಗ್ ಕ್ಷೇತ್ರದ ಸಾಧಕ ಮಿಸ್ಟರ್ ಮಂಗಳೂರು ಮನಿಷ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಅಮೆರಾನ್ ಸಂಸ್ಥೆ ಕೊಡುಗೆಯಾಗಿ ನೀಡಿದ ಟೀಶರ್ಟ್ ಬಿಡುಗಡೆಗೊಳಿಸಲಾಯಿತು. ಲಕ್ಕಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸದಸ್ಯರ ಹುಟ್ಟುಹಬ್ಬ ಆಚರಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ರಾಜೇಶ್ ಕುಲಾಲ್, ಕೋಶಾಧಿಕಾರಿ ಭಾಸ್ಕರ್ ಕುಲಾಲ್ ಉಪಸ್ಥಿತರಿದ್ದರು.

ಸಿದ್ದೀಕ್ ಮೆಲ್ಕಾರ್ ಸ್ವಾಗತಿಸಿದರು, ನವಿನ್ ಪೂಜಾರಿ ವಂದಿಸಿದರು, ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.