Home ಕರಾವಳಿ Archive by category ಮಂಗಳೂರು (Page 127)

ಉಚ್ಚಿಲ ಬಡಾ ಗ್ರಾ.ಪಂ. ಪ್ರಥಮ ಗ್ರಾಮ ಸಭೆ

ಕೇವಲ ಬೆರಳೆಣಿಕೆಯ ಗ್ರಾಮಸ್ಥರ ಮಧ್ಯೆಯೇ 56ನೇ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದಿದೆ. ಆರಂಭದಲ್ಲೇ ಸಭಾಭವನದಲ್ಲಿ ಸೂಕ್ತ ಧ್ವನಿವರ್ಧಕದ ವ್ಯವಸ್ಥೆ ಇಲ್ಲದೆ ಸಭೆ ಮಾತುಗಳು ಉಪಸ್ಥಿತರಿದ್ದ ಬೆರಳೆಣಿಕೆ ಮಂದಿಗೂ ಕೇಳದೆ ಸಭೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.15 ಮಂದಿ ಗ್ರಾಮಸ್ಥರು, ಆಶಾ

ಕಾಪುವಿನಲ್ಲಿ ಡಿ.16, 18 ಮತ್ತು 19ರಂದು ಕಡಲ ಐಸಿರ ಬೀಚ್ ಫೆಸ್ಟ್

ಕಾಪು ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್, ಕಲ್ಚರಲ್ ಕ್ಲಬ್ ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು ಮತ್ತು ದಿ. ಆರ್.ಡಿ. ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 16, 17 ಮತ್ತು 18 ರಂದು ಕಾಪು ಬೀಚ್ ನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ -2022 ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದರು. ಕಾಪು ಬೀಚ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಹಲವಾರು ಪ್ರತಿಭಟನೆಗಳ ನಂತರ ಸುರತ್ಕಲ್ ಟೋಲ್‍ಗೆ ಮುಕ್ತಿ

ಹಲವಾರು ಪ್ರತಿಭಟನೆಗಳ ನಂತರ ಇಲ್ಲಿನ ಟೋಲ್ ಗೇಟಿಗೆ ಕೊನೆಗೂ ಮುಕ್ತಿ ದೊರಕಿದ್ದು, ಶುಕ್ರವಾರದಿಂದ ವಾಹನಗಳು ಉಚಿತವಾಗಿ ಸಂಚರಿಸುತ್ತಿವೆ. ಈ ನಡುವೆ ಈ ಶುಲ್ಕ ಕೇಂದ್ರದಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದ 50ಕ್ಕೂ ಅಧಿಕ ಮಂದಿ ಉದ್ಯೋಗ ವಂಚಿತರಾಗಿದ್ದಾರೆ. ಗುರುವಾರ ಮುಂಜಾನೆ ಶುಲ್ಕ ಕೇಂದ್ರದ ಕೆಲ ಸಿಬ್ಬಂದಿಗಳು ಆಗಮಿಸಿ ಕುರ್ಚಿಗಳಲ್ಲಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.ಹೆಜಮಾಡಿಯ ನವಯುಗ ಟೋಲ್ ಗೇಟ್ ಗೆ ಕೇಂದ್ರ ಸರ್ಕಾರ

ಸುರತ್ಕಲ್ : ಟೋಲ್ ಗು ಟೋಲ್ ಗು ಮದುವೆಯಂತೆ …!

ಮಂಗಳೂರು: ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಗೇಟ್ ಗೆ ಬಿಜೆಪಿ ಸರ್ಕಾರದ ಕೃಪೆಯಿಂದ ಶುಭ ವಿವಾಹ. ಇಂತಹದ್ದೊಂದು ವಿವಾಹ ಆಮಂತ್ರಣದ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸುರತ್ಕಲ್ ನ ಎನ್ ಐಟಿಕೆ ಬಳಿಯಿದ್ದ ಅಕ್ರಮ ಟೋಲ್ ಗೇಟ್ ಇತ್ತೀಚೆಗೆ ಸಾರ್ವಜನಿಕರ ಭಾರೀ ಆಕ್ರೋಶದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ, ಇದಾದ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಗೇಟ್ ನ ಟೋಲ್ ಅನ್ನೂ ಸೇರಿಸಿ ದುಪ್ಪಟ್ಟು ಟೋಲ್ ಸಂಗ್ರಹ

ಮಂಗಳೂರು ಅಟೋದಲ್ಲಿ ಬಾಂಬ್ ಸ್ಪೋಟ ಪ್ರಕರಣ NIA ಗೆ ಹಸ್ತಾಂತರ

ನ.19ರಂದು ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ಮುಹಮ್ಮದ್‌ ಶಾರಿಕ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ಕೆಲಕಾಲ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಫೋಟದಿಂದ ಆರೋಪಿಗೆ ಭಾಗಶಃ ಸುಟ್ಟಗಾಯಗಳಾಗಿದ್ದವು. ನಗರದ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲು ವೈದ್ಯರ ತಂಡ

ಮಂಗಳೂರು ಪಾಲಿಕೆಯ ಸಾಮಾನ್ಯ ಸಭೆ : `ನನ್ನ ವಾರ್ಡ್‍ನಲ್ಲಿಯೂ ಸಮಸ್ಯೆ ಇದೆ’ ಎಂದ ಮೇಯರ್!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುಂಬೆಯಿಂದ ಸರಬರಾಜಾಗುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯ ಕುರಿತಂತೆ ವಿಪಕ್ಷ ನಾಯಕ, ಸದಸ್ಯರಿಂದ ಹಿಡಿದು ಆಡಳಿತ ಪಕ್ಷದ ಸದಸ್ಯರನೇಕರು ಕೂಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖುದ್ದು ಮೇಯರ್ ಕೂಡಾ ತಮ್ಮ ವಾರ್ಡ್‍ನಲ್ಲಿಯೂ ಸಮಸ್ಯೆ ಇದೆ ಎಂದು ಹೇಳುವ ಮೂಲಕ ಸಮಸ್ಯೆಯ

Kumble Sundar Rao : ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾವ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಸುರತ್ಕಲ್ ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ ಪ್ರಾಸಬದ್ಧ , ನಿರರ್ಗಳ ಅರ್ಥಗಾರಿಕೆಯಿಂದ ಮನೆಂತಾಗಿದ್ದರು. ಶಾಸಕರಾಗಿ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅವರ ಸೇವೆ ಸ್ಮರಣೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ,

ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತ

ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತರಾಗಿದ್ದಾರೆ.ಯಕ್ಷಗಾ‌ನ ಕಲಾವಿದರೂ ಮಾಜಿ ಶಾಸಕರೂ ಆಗಿದ್ದ ಕುಂಬ್ಳೆ ಸುಂದರ್ ರಾವ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರೂ ಆಗಿದ್ದ ಸುಂದರ್ ರಾವ್, ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಸುರತ್ಕಲ್,

ಮಸಣ ಸೇರಿದ್ದು ಅಭಿನಂದನೆಯ ಫ್ಲೆಕ್ಸಲ್ಲ ಬಿಜೆಪಿಯ ರಾಜಕಾರಣ. ಮುನೀರ್ ಕಾಟಿಪಳ್ಳ

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟ ಯಶಸ್ವಿಯ ಹಂತಕ್ಕೆ ತಲುಪಿದೆ. ದ.ಕ ಜಿಲ್ಲಾಧಿಕಾರಿ ಡಿಸೆಂಬರ್ ಒಂದರಿಂದ ಟೋಲ್ ಸಂಗ್ರಹ ಸ್ಥಗಿತಕ್ಕೆ ಲಿಖಿತ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಪಕ್ಷ ಮಾತ್ರ ತನ್ನದೇ ಸಾಧನೆಯಂತೆ ಬಿಂಬಿಸಲು ಹೊರಟು ಮುಜುಗರಗೊಳಗಾಗಿ ಇನ್ನು ಈಗಾಗಲೇ ತಯಾರಿಸಿದ ಅಭಿನಂದನೆಯ ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಸಲು ಸಾಧ್ಯವಾಗದೆ ಅವುಗಳೆಲ್ಲಾ ಸುರತ್ಕಲ್ ಸ್ಮಶಾನದ ಮೂಲೆ ಸೇರಿದೆ. ನಿಜವಾಗಿ ಸ್ಮಶಾನ ಸೇರಿದ್ದು ಅಭಿನಂದನೆಯ ಪ್ಲೆಕ್ಸ್

ಸರಕಾರದ ವೈಫಲ್ಯದಿಂದ ಇಂದು ಸಮಾಜದಲ್ಲಿ ಗೊಂದಲ ಸೃಷ್ಟಿ : ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪ

ಮಂಗಳೂರು : ಗೂಂಡಾ ಕಾಯ್ದೆ, ಭಯೋತ್ಪಾದನಾ ನಿಗ್ರಹ ಮೊದಲಾದ ಕಾನೂನು ಜಾರಿಯಲ್ಲಿದ್ದರೂ, ಗೋಡೆ ಬರಹದಂತಹ ಪ್ರಕರಣಗಳು ನಡೆದಾಗ ಸರಕಾರ, ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ, ಜಿಲ್ಲೆಯಲ್ಲಿ ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ. ಸರಕಾರದ ವೈಫಲ್ಯದಿಂದ ಇಂದು ಸಮಾಜದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ