ವಿ4 ನ್ಯೂಸ್‍ಗೆ 18ರ ಸಂಭ್ರಮ: ಯೆಯ್ಯಾಡಿಯ ಕಚೇರಿಯಲ್ಲಿ ಸಂಭ್ರಮಾಚರಣೆ
ಕರಾವಳಿ ಕರ್ನಾಟಕದಲ್ಲಿ ಮನೆಮಾತಾದ ವಿ4 ನ್ಯೂಸ್‍ಗೆ 18ರ ಸಂಭ್ರಮ. ಕಳೆದ 18 ವರ್ಷಗಳಿಂದ ಸುದ್ದಿ, ಮನೋರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಚಾಪುನ್ನು ಮೂಡಿಸಿ ಎಲ್ಲರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ಸನ್ನು ಕಂಡಿದೆ. ಪ್ರತೀ ವರ್ಷ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯೂ ಕೂಡ ಕರಾವಳಿ ಭಾಗದ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಯೆಯ್ಯಾಡಿಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಆರ್ಗನ್ ಡೋನೇಶನ್ ಇಂಡಿಯಾ ಫೌಂಡೇಶನ್‍ನ ಚೇರ್‍ಮೆನ್ ಲಾಲ್ ಗೋಯಲ್, ಪಿಲಿಕುಳ ರೆಸಾರ್ಟ್‍ನ ಮಾಲಕರಾದ ಎಲೆನ್ ಅಲ್ವಾರಿಸ್, ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ವಿ4 ನ್ಯೂಸ್‍ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಉಪಾಧ್ಯಕ್ಷರಾದ ರೋಸ್ಲಿನ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ದುರಂತವನ್ನು ತಡೆದ ಮಂದಾರ ನಿವಾಸಿಯಾದ ಚಂದ್ರಾವತಿ ವಿಮಾನ ಚಲಾಯಿಸುವ ಪೈಲೆಟ್ ಹುದ್ದೆಗೇರಿದ ಹನಿಯಾ ಹನೀಫ್‍ಗೆ, ಕಲಾ ಕ್ಷೇತ್ರದ ಸಾಧನೆಗಾಗಿ ಮಾನಸಿ ಸುಧೀರ್,
ಬಹುಮುಖ ಪ್ರತಿಭೆ ಧನ್ವಿ ಮರವಂತೆ, ಉದಯೋನ್ಮುಖ ಸಾಹಿತ್ಯ ಸೇವೆ ಶೀಲಾಲಕ್ಷ್ಮೀ ಕಾಸರಗೋಡು, ಶೈಕ್ಷಣಿಕ ಸಮುದಾಯದ ಸಬಲೀಕರಣದ ಕಸ್ತೂರಿ ಬೊಳುವಾರು, ಪ್ರಾಣಿಗಳ ಕಲ್ಯಾಣ ಕಾರ್ಯದ ಅನನ್ಯ ಸಾಧಕಿ ಸುಮಾ ಆರ್. ನಾಯಕ್, ಅನಾಥ ಮಕ್ಕಳ ಪಾಲನೆ ಮತ್ತು ರಕ್ಷಣೆಯ ಸಾಧಕಿ ಜಯಲತಾ ಎಸ್. ಅಮೀನ್, ಜಾನಪದ ಸಂಧಿ-ಪಾಡ್ದನ ಕಲೆಯನ್ನು ಮೈಗೊಂಡಿಸಿಕೊಂಡಿರುವ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಮುತ್ತಮ್ಮ.ಬಿ ಅವರನ್ನು ವಿ4 ನ್ಯೂಸ್ 18ನೇ ವರ್ಷಾಚರಣೆಯ ಸಂಭ್ರಮದಲ್ಲಿ ಕೊಡಮಾಡುವ “ವಿ4 ನ್ಯೂಸ್ ಅವಾರ್ಡ್”ನ್ನು ನೀಡಿ ಸನ್ಮಾನಿಸಲಾಯಿತು.