Home ಕರಾವಳಿ Archive by category ಮಂಗಳೂರು (Page 16)

ಛಾಯಾಚಿತ್ರಗಳ ಮೂಲಕ ಇತಿಹಾಸಕಟ್ಟುವ ಕೆಲಸ : ಡಾ.ತುಕರಾಮ ಪೂಜಾರಿ

ಮಂಗಳೂರು : ಛಾಯಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸವನ್ನು ಮಾಡಲು ಸಾಧ್ಯವಿದೆ ,ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಹೇಳಿದರು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಆಶ್ರಯದಲ್ಲಿ ನಡೆದ ‘ಛಾಯಾ

ಸಂಗಮ ತುಳು ದ್ರಾವಿಡಕ್ಕೆ ಸಾಕ್ಷಿಯಲ್ಲ

ಸಂಗಮ ಮತ್ತು ಮಂಗಲ ಬೆರೆತ ಊರುಗಳೆಲ್ಲ ನದಿ ತೊರೆಗಳ ಕೂಡು ಸ್ಥಳಗಳಾಗಿವೆ. ಕೋರಮಂಗಲ, ಪಾಣೆಮಂಗಳೂರು, ನೆಲಮಂಗಲಗಳೂ ಅದಕ್ಕೆ ಹೊರತಲ್ಲ. ಆದರೆ ಕೂಡಲ ದ್ರಾವಿಡ ನುಡಿ ಎನಿಸಿದವುಗಳಲ್ಲ. ಕುಡಲ ಕುಡ್ಲ ಯಾವುದು ಸರಿ ಎಂಬ ಪ್ರಶ್ನೆ ಸಹಜ. ಇವು ಎರಡೂ ಸರಿಯಾದರೂ ಅವು ಮೂಲ ಅಲ್ಲ.ಕೂಡು ಅಲ> ಕೂಡಾಲ> ಕೂಡಲ> ಕುಡಲ> ಕುಡ್ಲ > ಎಂಬ ದಾರಿಯಲ್ಲಿ ಇದು ಬಂದಿದೆ. ಇಲ್ಲಿ ಅಲ ಎಂದರೆ ನೀರಿನ ಹೆಜ್ಜೆ. ಎರಡು ನೀರಿನ ಹೆಜ್ಜೆಗಳು ಸೇರುವ ಸ್ಥಳವೇ ಕೂಡಲ.ತೆಂಕಣ

ಮಂಗಳೂರು: ‘ಸುರತ್ಕಲ್ ವೃತ್ತ, ಗಣೇಶಪುರ ರಸ್ತೆಗೆ ಕ್ಯಾ | ಪ್ರಾಂಜಲ್ ನಾಮಕರಣಕ್ಕೆ ಸತ್ಯಜಿತ್ ಸುರತ್ಕಲ್ ಆಗ್ರಹ

ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಕ್ಯಾ | ಪ್ರಾಂಜಲ್ ಹೆಸರು ಚಿರಸ್ಥಾಯಿಯಾಗಲು ಸುರತ್ಕಲ್ ವೃತ್ತ ಹಾಗೂ ಗಣೇಶಪುರ – ಸುರತ್ಕಲ್ ರಸ್ತೆಗೆ ಅವರ ಹೆಸರಿಡಬೇಕು ಮತ್ತು ಅವರ ಪುತ್ತಳಿ ಸ್ಥಾಪಿಸಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸತ್ಯಜಿತ್ ಸುರತ್ಕಲ್ ಸರಕಾರವನ್ನು ಆಗ್ರಹಿಸಿದರು. ಕಾಶ್ಮೀರದ ರಜರಿಯಲ್ಲಿ ಸೇನಾಪಡೆಗಳು ಉಗ್ರರ ವಿರುದ್ಧ ಕಾರ್ಯ ಚರಣೆಯಲ್ಲಿ ಹುತಾತ್ಮರಾದ ಐವರು ಯೋಧರಿಗೆ ಸುರತ್ಕಲ್ ಜಂಕ್ಷನ್‍ನಲ್ಲಿ ಆಯೋಜಿಸಲಾದ

ಡಿ.17ರಂದು ಬೆಂಗ್ರೆಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ಬೆಂಗ್ರೆ ಪರಿಸದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಡಿಸೆಂಬರ್ 17ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಹಾಜನ ಸಂಘ ಬೆಂಗ್ರೆಯ ಅಧ್ಯಕ್ಷರು ಮತ್ತು ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಧ್ಯಕ್ಷರಾದ ಚೇತನ್ ಬೆಂಗ್ರೆ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಬಳಿಕ ವಿ4 ನ್ಯೂಸ್‍ಗೆ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ನದಿಗಳಿಗೆ ಕಸ

ಕ್ಯಾಪ್ಟನ್ ಪ್ರಾಂಜಲ್ ಬಲಿದಾನ ವ್ಯರ್ಥ ವಾಗದಿರಲಿ….ಡಾ ಚೂಂತಾರು

ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ಶ್ರೀ ಕ್ಯಾಪ್ಟನ್ ಪ್ರಾಂಜಲ್ ಅವರು ನಮ್ಮ ಯುವ ಪೀಳಿಗೆಗೆ ಮಾದರಿ. ಅವರ ತ್ಯಾಗ ಮತ್ತು ಬಲಿದಾನ ವ್ಯರ್ಥ ವಾಗದಿರಲಿ. ಭಯೋತ್ಪಾದನೆ ಮತ್ತು ಹಿಂಸಾಚಾರ ವನ್ನು ಬೇರು ಸಮೇತ ಕಿತ್ತು ಹಾಕಿ ಅಗಲಿದ ಕ್ಯಾಪ್ಟನ್ ಪ್ರಾಂಜಲ್ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲಾ ನಮ್ಮ ಜಾತಿ ಮತ ಧರ್ಮ ಎಂದು ಕಚ್ಚಾಡದೆ, ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಹಾಗೂ

ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ, ಮಹಿಳೆಗೆ ಗಂಭೀರ ಗಾಯ

ಮಂಗಳೂರಿನ ಅತ್ತಾವರದ ಐವರಿ ಟವರ್‌ನಲ್ಲಿ ಶಾರ್ಟ್ ಸರ್ಕೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಹಲವು ಮಂದಿಯಿದ್ದು, ಘಟನೆ ಸಂಭವಿಸಿದ ತಕ್ಷಣ ಹೊರಗೆ ಬಂದು ಅಪಾಯದಿಂದ ಪಾರಾಗಿದ್ದಾರೆ. ಆದರೆ ಮಹಿಳೆಯೊಬ್ಬರು ಬಾತ್ ರೂಮ್‌ನಲ್ಲಿದ್ದ ಕಾರಣ ಹೊರಗೆ ಬರಲಾಗದೆ ಸಿಲುಕಿದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಬೆಂಕಿ ಅನಾಹುತದಿಂದ

ವಿಚಿತ್ರ ತಿರುವು ಪಡೆಯುವ ಊರಿನ ಹೆಸರುಗಳು

ಭತ್ತ ಅನ್ನಕ್ಕೆಂದು ಪಿಡಿದರೆ ಬಾಳೆ ಹಣ್ಣದು ಆಯ್ತು ದೈವವೆ! ಮಂಗಳೂರಿನಲ್ಲಿ ಒಂದು ಬಾಳೆ ಬಯ್ಲು (ಬಯಲು) ಇದೆ. ಈ ಭತ್ತ ಬೆಳೆಯುವ ತುಳು ಜಾಗದ ನೆಲದ ಹೆಸರು ಬದಲಾದುದು ಬರೇ ಶತಮಾನದ ಕತೆ. ಬಾರ ಬಯ್ಲ್ ಎಂದರೆ ಭತ್ತದ ಬಯಲು. ರಾಷ್ಟ್ರೀಯ ಹೆದ್ದಾರಿ ಮಾಜೀ 17 ಹಾಲಿ 66 ಇದರ ನಡುವೆ ಹೋಗಿ, ಈಗ ಇಲ್ಲಿ ಕಟ್ಟಡಗಳು ಬೆಳೆದಿವೆ. ತುಳು ಕನ್ನಡದಲ್ಲಿ ರ ಳ ಲ ಬದಲಾವಣೆ ಬಹಳ ಇವೆ. ತುಳು ಶಬ್ದಗಳಾದ ಕೋರಿ, ಕೆರು, ತರೆ, […]

ಮಂಗಳೂರಿನಲ್ಲಿ `ಕ್ರಿಸ್ತ ಜಯಂತಿ ಜುಬಿಲಿ ಸಂಭ್ರಮಾಚರಣೆ

ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥ `ಕ್ರಿಸ್ತ ಜಯಂತಿ ಜುಬಿಲಿ2025′ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕೆಥೊಲಿಕ್ ಧರ್ಮಕ್ಷೇತ್ರದಲ್ಲೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ಚಾಲನೆ ನೀಡಿದರು. ನಗರದ ಹೋಲಿ ರೋಜರಿ ಕೆಥೆಡ್ರಲ್‍ನಲ್ಲಿ `ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ

ಕೊಟ್ಟಾರಚೌಕಿ ಸರ್ಕಲ್‍ಗೆ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಹೆಸರು

ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್‍ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ. ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್

33 ವರುಷಗಳ ಬಳಿಕ ಮಂಗಳೂರು ವಿವಿಗೆ ಕಬಡ್ಡಿ ಕಿರೀಟ

ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣ ಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರಗಳು ಜಂಟಿಯಾಗಿ ನಡೆಸಿದ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು 33 ವರುಷಗಳ ಬಳಿಕ ಮತ್ತೆ ಚಾಂಪಿಯನ್ ಅಯಿತು. ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿಯ ಫೈನಲಿನಲ್ಲಿ 45- 15 ಅಂಕಗಳಿಂದ ಮಂಗಳೂರು ವಿವಿಗೆ ಸೋತ ಚೆನ್ನೈನ ವೇಲ್ ಸಯನ್ಸ್ ಆಂಡ್