Home ಕರಾವಳಿ Archive by category ಮಂಗಳೂರು (Page 72)

ಮೂಲ್ಕಿಯ ಕೊಳ್ನಾಡಿನಲ್ಲಿ ನವ ಕರ್ನಾಟಕ ಸಂಕಲ್ಪ ಸಮಾವೇಶ : ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ

ಮೂಲ್ಕಿಯ ಕೋಳ್ನಾಡುವಿನಲ್ಲಿ ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ಮೂಲ್ಕಿಯ ಕಾರ್ನಾಡಿನ ಗುಂಡಾಲು ಪ್ರದೇಶದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪರಶುರಾಮ ಸೃಷ್ಟಿ ಎಂದು ತುಳುವಿನಲ್ಲಿ ಮಾತನಾಡಿದರು. ಹಿಂದಿನ

ಅತ್ಯಾಚಾರಿಗಳನ್ನು ಪೋಷಿಸುತ್ತಿರುವ ಬಿಜೆಪಿಯನ್ನು ಧಿಕ್ಕರಿಸಿ : ದಲಿತ ಮುಖಂಡ ಶೇಖರ್ ಹೆಜಮಾಡಿ

ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದಲಿತರ ನಿರ್ಲಕ್ಷ್ಯ ನಡೆಸುವ ಮೂಲಕ ನಮ್ಮನ್ನು ಮತ್ತೆ ಗತ ಕಾಲ ದತ್ತ ತಳ್ಳುವ ಪ್ರಕ್ರಿಯೆ, ಜನಿವಾರ ಶಾಹಿ ಬಿಜೆಪಿ ಪಕ್ಷದಿಂದ ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸಂಘಟನೆಗಳ ಅನತಿಯಂತೆ ಕಾಪು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ದಲಿತ ಮುಖಂಡ ಶೇಖರ್ ಹೆಜಮಾಡಿ ತಮ್ಮ ಸಮಾಜಕ್ಕೆ ಕರೆ ನೀಡಿದ್ದಾರೆ. ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ

ಸುರತ್ಕಲ್‍ನಲ್ಲಿ ಕಾಂಗ್ರೆಸ್ ವತಿಯಿಂದ ಭರ್ಜರಿ ರೋಡ್ ಶೋ

ಸುರತ್ಕಲ್: “ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಪಡೆಯಲಿದೆ. ಇನಾಯತ್ ಅಲಿ ಅವರಂತಹ ಸಮರ್ಥ ಅಭ್ಯರ್ಥಿಯನ್ನು ಪಕ್ಷವು ಕಣಕ್ಕಿಳಿಸಿದೆ. ಮತದಾರ ಬಾಂಧವರು ಜಾತಿ ಮತ ಬೇಧ ಮರೆತು ಎಲ್ಲರನ್ನೂ ಸಮಾನವಾಗಿ ಕಾಣುವ ಇನಾಯತ್ ಅಲಿ ಅವರನ್ನು ಬೆಂಬಲಿಸಿ” ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹೇಳಿದರು. ಅವರು ಸುರತ್ಕಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿಯವರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತಾಡಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲರವರ ಪರ ಮತಯಾಚನೆ

ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಸಾಂಬಾರ ತೋಟ 109 ವಾರ್ಡಿನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲರವರ ಪರ ಮನೆ ಮನೆ ಭೇಟಿ ನೀಡಿ ಮತಯಾಚನೆ ನಡೆಸಲಾಯಿತು.

ಬಜರಂಗದಳ ನಿಷೇಧ ಕುರಿತು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಕಿಡಿ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಬಜರಂಗದಳ ನಿಷೇಧ ಕುರಿತು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು ಕಿಡಿ ಕಾರಿದ್ದು, ನಿಷೇಧಿತ ಪಿಎಫ್ಐ ಜೊತೆ ಬಜರಂಗದಳವನ್ನು ಹೋಲಿಕೆಗೆ ತಕ್ಕ ಪ್ರತಿಫಲ ಅನುಭವಿಸಲಿದೆ ಎಂದು ಹೇಳಿದ್ದಾರೆ. ಜನರಿಂದ ತಿರಸ್ಕಾರಗೊಂಡಿರುವ‌ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಓಲೈಕೆ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ದೇಶಪ್ರೇಮ ಹಾಗೂ ದೇಶದ್ರೋಹಿಗಳ ನಡುವೆ ವ್ಯತ್ಯಾಸ ತಿಳಿಯದ ಕಾಂಗ್ರೆಸ್

ಬಜರಂಗದಳ ನಿಷೇಧ ಪ್ರಸ್ತಾವ : ಹಿಂದೂಗಳಿಗೆ ಮಾಡಿದ ಅವಮಾನ : ವಿ.ಎಚ್.ಪಿ

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ಪ್ರಸ್ತಾಪಿಸಿದನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸಿದೆ. ಬಜರಂಗದಳ ರಾಷ್ಟ್ರಭಕ್ತ ಸಂಘಟನೆ ದೇಶದಾದ್ಯಂತ 60 ಸಾವಿರ ಗ್ರಾಮಗಳಲ್ಲಿ ಬಜರಂಗದಳದ ಕಾರ್ಯ ನಡೆಯುತ್ತಿದೆ. ಶ್ರೀರಾಮ ಮಂದಿರ ಹೋರಾಟದಿಂದ ಪ್ರಾರಂಭಗೊಂಡು ಹಿಂದು ಶ್ರದ್ದಾ ಬಿಂದುಗಳ ರಕ್ಷಣೆ, ಗೋರಕ್ಷಣೆ, ಲವಜಿಹಾದ್‌ಗೆ ಬಲಿಯಾದ ಹೆಣ್ಣುಮಕ್ಕಳ ರಕ್ಷಣೆ,ಸಾವಿರಾರು ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಬಜರಂಗದಳ ಸಂಘಟನೆಯನ್ನು ನಿಷೇಧ

ಬಜರಂಗದಳ ಮುಟ್ಟಿದರೆ ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ : ಡಾ.ಭರತ್ ಶೆಟ್ಟಿ ವೈ

ಹಿಂದೂ ಸಮಾಜದ ಶಕ್ತಿಯಾಗಿರುವ ಬಜರಂಗದಳವನ್ನು ಕನಸಿನಲ್ಲೂ ನಿಷೇಧಿಸುವ ಬಗ್ಗೆ ಯೋಚಿಸಬೇಡಿ, ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ. ಮಾತ್ರವಲ್ಲ ಈಗಿನ ಅಳಿದುಳಿದ ನಿಮ್ಮ ಕಾಂಗ್ರೆಸ್ ಪಕ್ಷದ ಕುರುಹನ್ನು ಜನರೇ ಸಮೀಪದ ಅರಬೀ ಸಮುದ್ರದಲ್ಲಿ ವಿಸರ್ಜಿಸಲಿದ್ದಾರೆ. ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ,ಹಾಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ದೇಶ ಭಕ್ತ ,ಹಿಂದೂ ಸಮಾಜದ ಒಳಿತಿಗಾಗಿ ಹಾಗೂ ಸಾಮಾಜಿಕವಾಗಿ

ಬಜಪೆ : ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಭೇಟಿ

ಸುಂಕದಕಟ್ಟೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡ ಅವರು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳಿಗೆ ಶಕ್ತಿ ತುಂಬಿದರು.. ಹೆಚ್.ಡಿ.ದೇವೇಗೌಡರು ಸುಂಕದಕಟ್ಟೆ ಬಜಪೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಜೊತೆಗೆ ಮಂಗಳೂರು ಉತ್ತರ ಅಭ್ಯರ್ಥಿ ಮೊಯ್ದೀನ್ ಭಾವ ಮತ್ತು ಮಂಗಳೂರು ಕೇಂದ್ರ ಅಭ್ಯರ್ಥಿ ಸುಮತಿ ಹೆಗ್ಡೆ, ಗಣೇಶ್ ಉಡುಪ, ಫರಾಕ್ ಅಬ್ದುಲ್ಲಾ ಸೇರಿದಂತೆ ಹಲವರು

ಅಧಿಕಾರ ನಡೆಸುವುದು ಬಿಡಿ,ವಿರೋಧ ಪಕ್ಷದ ಸ್ಥಾನದಲ್ಲೂ ಕೂರಲು BJP ನಾಲಾಯಕ್ಕು – ಜಿ ಎನ್ ನಾಗರಾಜ್

ರಾಜ್ಯದ ಜನತೆ ನೀಡಿದ ಜನಾದೇಶಕ್ಕೆ ವಿರುದ್ಧವಾಗಿ ಅಕ್ರಮ ಸರಕಾರ ರಚಿಸಿ ಜನತೆಯ ಬದುಕನ್ನು ಮೂರಾಬಟ್ಟೆಯನ್ನಾಗಿಸಿ ರಾಜ್ಯದ ಖಜಾನೆಯನ್ನು ಲೂಟಿ ಮಾಡಿದೆ.40% ಕಮಿಷನ್ ಸರಕಾರವೆಂದು ತನ್ನವರಿಂದಲೇ ಕರೆಸಿಕೊಂಡ BJP,ನಾಡಿನ ಸೌಹಾರ್ದತೆಯನ್ನು ನಾಶ ಮಾಡಿದೆ.ಇಂತಹ BJP,ಸರಕಾರ ನಡೆಸುವುದು ಬಿಡಿ ವಿರೋಧ ಪಕ್ಷದ ಸ್ಥಾನದಲ್ಲೂ ಕೂರಲು ನಾಲಾಯಕ್ಕು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಸ್ಥಾಪಕಾಧ್ಯಕ್ಷರಾದ ಜಿ ಎನ್ ನಾಗರಾಜ್ ರವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಸುಸ್ಥಿರ, ಸುವ್ಯಸ್ಥಿತ ಸಮನ್ವಯದ ಅಭಿವೃದ್ಧಿಗಾಗಿ ಬಿಜೆಪಿಗೆ ಜನಾದೇಶ ಖಚಿತ: ಗೋಪಾಲಕೃಷ್ಣ ಅಗರ್ವಾಲ್

ಮಂಗಳೂರು: ಸುಸ್ಥಿರ, ಸುವ್ಯವಸ್ಥಿತ ಮತ್ತು ಸಮನ್ವಯದ ಅಭಿವೃದ್ಧಿ ಕಾರ್ಯಗಳಿಗಾಗಿ ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರಕಾರವನ್ನು ಪುನರಾಯ್ಕೆ ಮಾಡುವುದು ನಿಶ್ಚಿತವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್ವಾಲ್ ಪ್ರತಿಪಾದಿಸಿದರು. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವನ್ನು 5 ಟ್ರಿಲಿಯನ್‌ ಡಾಲರ್ ಗಾತ್ರದ ಅರ್ಥವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ