Home ಕರಾವಳಿ Archive by category ಮೂಡಬಿದರೆ

ಮೂಡುಬಿದಿರೆ: ಅಪಘಾತದಲ್ಲಿ ಗಾಯಗೊಂಡಿದ್ದ ಯುವ ಕ್ರಿಕೆಟ್ ಆಟಗಾರ ಸಾವು

ಮೂಡುಬಿದಿರೆ: ಎರಡು ವಾರಗಳ ಹಿಂದೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ ಶಿರ್ತಾಡಿ ಯುವಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಶಿರ್ತಾಡಿ ಕಜೆ ನಿವಾಸಿ ವಿಕೇಶ್ (22) ಮೃತಪಟ್ಟ ಯುವಕ. ಎರಡು ವಾರಗಳ ಹಿಂದೆ ಪಡುಕೊಣಾಜೆ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ

ನಾಗರಕಟ್ಟೆ ದೇರಾಡಿ ಬ್ರಹ್ಮಮುಗೇರ ದೈವಸ್ಥಾನದ ಶಿಲಾನ್ಯಾಸ

ಮೂಡುಬಿದಿರೆ: ನಾಗರಕಟ್ಟೆ ದೇರಾಡಿ ಬ್ರಹ್ಮಮುಗೇರ ಶ್ರೀಮಹಾಂಕಾಳಿ ದೈವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕರ ಪ್ರಯತ್ನದಿಂದ 7 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನದ ಅಭಿವೃದ್ಧಿಗೆ ಶಿಲಾನ್ಯಾಸ ಮಾಡಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ

ಮೂಡುಬಿದಿರೆ: ಹಿರಿಯ ನಾಗರಿಕರಿಂದ “ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ”

ಮೂಡುಬಿದಿರೆ: `ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಪರಿಕಲ್ಪನೆಯಡಿಯಲ್ಲಿ ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದ ಹಿರಿಯ ನಾಗರಿಕರ ಪ್ರಕೋಷ್ಠದ ವತಿಯಿಂದ ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಕಾರ್ಯಕ್ರಮವು ಬೆಳುವಾಯಿಯ ಎಸ್.ಬಿ ಪಾರ್ಟಿ ಹಾಲ್‍ನಲ್ಲಿ ನಡೆಯಿತು.  ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂದು ಜನ ಸಂಘದ ಮೂಲಕ ಪಕ್ಷವನ್ನು ಸಂಘಟಿಸಿದವರು ಹಿರಿಯರು. ಅಂತಹ ಹಿರಿಯರನ್ನು ಕಡೆಗಣಿಸಬಾರದೆಂಬ

ಯಕ್ಷಗಾನ ಕಲಾವಿದ ವಾಮನ ಕುಮಾರ್ ಅಪಘಾತದಲ್ಲಿ ನಿಧನ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದಲ್ಲಿ ಒಮ್ನಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಯಕ್ಷಗಾನ ಕಲಾವಿದ ವೇಣೂರು ಸಮೀಪದ ವಾಮನ ಕುಮಾರ್ (47ವ) ಮೃತಪಟ್ಟಿದ್ದಾರೆ. ಇವರು ಬಡಗು ತಿಟ್ಟಿನ ಯಕ್ಷಗಾನ ಮೇಳದಲ್ಲಿ ಹಾಗೂ ಚಿಕ್ಕಮೇಳದಲ್ಲಿ ಯಕ್ಷ ಕಲಾವಿದರಾಗಿದ್ದರು.

ನಾರಾಯಣಗುರುವಿಗೆ ಕೇಂದ್ರ ಸರ್ಕಾರದಿಂದ ಅಪಮಾನ : ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪ

ಮೂಡುಬಿದಿರೆ: ಗಣರಾಜ್ಯೋತ್ಸವ ಪರೇಡ್ನಲ್ಲಿ ಕೇರಳ ಸರ್ಕಾರವು ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಮುಂದಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವು ನಿರ್ಬಂಧ ಹೇರುವ ಮೂಲಕ ನಾರಾಯಣಗುರುಗಳಿಗೆ ಅಪಮಾನ ಮಾಡಿದೆ. ಹಿಂದುಳಿದ ವರ್ಗಗಳ ಮೇಲೆ ಕೇಂದ್ರ ಸರ್ಕಾರವು ಯಾವ ರೀತಿ ಪ್ರೀತಿ ತೋರಿಸುತ್ತಿದೆ ಎನ್ನುವುದು ಈ ಮೂಲಕ ಸ್ಪಷ್ಟವಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು

ಮೂಡುಬಿದಿರೆ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ವರ್ಗಾವಣೆ

ಮೂಡುಬಿದಿರೆ: ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್ ದಿನೇಶ್ ಕುಮಾರ್ ಕರಾವಳಿ ರಕ್ಷಣಾ ಪಡೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ಮೂಡುಬಿದಿರೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವರು ದಕ್ಷ ಅಧಿಕಾರಿಯಾಗಿ ಹೆಸರು ಗಳಿಸಿದರು. ಸದ್ದಿಲ್ಲದೆ ಸಮಾಜಸೇವೆಯನ್ನು ಮಾಡುತ್ತಿದ್ದ ದಿನೇಶ್ ಕುಮಾರ್ ಸಿಬ್ಬಂದಿಗಳಿಗೂ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು. ಸಧ್ಯ ಮೂಡುಬಿದಿರೆಯಲ್ಲಿ ಬಜ್ಪೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅವರು ಪ್ರಭಾರ ಇನ್ಸ್‌ಪೆಕ್ಟರ್ ಆಗಿ

ಗೋವಿನ ರುಂಡ ಪತ್ತೆ ಪ್ರಕರಣ : ಮೂಡುಬಿದರೆಯಲ್ಲಿ ಹಿಂಜಾವೇಯಿಂದ ಮುತ್ತಿಗೆ

ಮೂಡುಬಿದಿರೆ- ಗೋವಿನ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಿಂದು ಜಾಗರಣ ವೇದಿಕೆಯಿಂದ ಮುತ್ತಿಗೆ ಹಾಕಿದ್ದರು.ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಠಾಣೆಯ ಮುಂಭಾಗ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಪತ್ತೆ ಹಚ್ಚುವುದು ನಮ್ಮ ಕರ್ತವ್ಯ.ಸಣ್ಣ ಪುಟ್ಟ ಕುರುಹು ಸಿಕ್ಕಿರುವುದನ್ನು ಪರಿಗಣನೆಗೆ

ಮೂಡುಬಿದರೆಯ ಡಾ. ಕೃಷ್ಣ ಮೋಹನ್ ಪ್ರಭು ನಿಧನ

ಮೂಡುಬಿದಿರೆ: ಪ್ರಭು ಹಾಸ್ಪಿಟಲ್ ಸ್ಥಾಪಕ, ಸಿಇಒ ಡಾ. ಕೃಷ್ಣ ಮೋಹನ ಪ್ರಭು ಅವರು ಎಲುಬು ಕ್ಯಾನ್ಸರ್ ನಿಂದ ಮಂಗಳವಾರ ನಿಧನರಾಗಿದ್ದಾರೆ. ಕ್ಯಾಮರ, ಫೋಟೋಗ್ರಾಫಿ, ವನ್ಯಜೀವಿ ಸಹಿತ ಹಲವು ವಿಷಯಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದ ಅವರು, ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಚಾರಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ನೆನೆಗುದಿಗೆ ಬಿದ್ದ ಹೈವೇ ವಿಸ್ತರಣೆ: ಮೂಡುಬಿದಿರೆಯಿಂದ ಮಂಗಳೂರಿಗೆ ಪಾದಯಾತ್ರೆ: ಅಭಯಚಂದ್ರ ಜೈನ್

ಮೂಡುಬಿದಿರೆ: ದ.ಕ ಜಿಲ್ಲೆಯಲ್ಲಿ ಇತ್ತೀಚಿಗೆ ಚಾಲನೆ ಪಡೆದ ಬಿ.ಸಿ.ರೋಡ್ ಚಿಕ್ಕ ಮಗಳೂರು ಹೈವೇ ವಿಸ್ತರಣೆ ಕಾಮಗಾರಿಯೂ ವೇಗವಾಗಿ ನಡೆದಿದೆ. ಆದರೆ ಮೂಡುಬಿದಿರೆ ಮಂಗಳೂರು ಹೈವೇ ವಿಸ್ತರಣೆ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕೃಷಿ ಭೂಮಿ ಸಂತ್ರಸ್ತರಿಗೂ ಸೂಕ್ತವಾದ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಅನಗತ್ಯವಾಗಿ ಸತಾಯಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು, ಸಂತ್ರಸ್ತರು, ವಾಹನ ಸವಾರರು ಎಲ್ಲರೂ ವರ್ಷಗಳಿಂದ ಕಷ್ಟಪಡುವಂತಾಗಿದೆ. ಇದಕ್ಕೆ

ಸುಪ್ರೀಂ ಕೋಟ್೯ ನ್ಯಾಯಮೂರ್ತಿಗಳಿಂದ ಮೂಡಬಿದ್ರೆಯಲ್ಲಿ ಕಾನೂನು ಸೇವಾ ಶಿಬಿರ ಉದ್ಘಾಟನೆ

ಮೂಡಬಿದ್ರೆ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಭವನದಲ್ಲಿ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ  ಕಾನೂನು ಸೇವಾ ಶಿಬಿರವನ್ನು  ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ
How Can We Help You?