ಮಂಗಳೂರು: ಎಪ್ರಿಲ್ 9ರಂದು ಮಂಗಳೂರಿನ ಬಲ್ಲಾಳ್ ಭಾಗ್ನಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಮಹಿಳೆಯ ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಲಿವರ್ ಅನ್ನು ಬೆಂಗಳೂರಿನ ಆಸ್ಟರ್ ಸಿಎಂಐ
ಉಳ್ಳಾಲ:ಅಪರಿಚಿತ ಮೃತದೇಹವೊಂದು ನೇತ್ರಾವತಿ ನದಿ ತಟದಲ್ಲಿ ಕೊಳೆತ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮೃತದೇಹ ನೋಡಲು ವಾಹನ ಸವಾರರು ಸೇತುವೆ ಮೇಲೆ ಜಮಾಯಿಸಿದ ಹಿನ್ನೆಲೆ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.ಸುಮಾರು 30-40 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ನೇತ್ರಾವತಿ ಸೇತುವೆ ಕೆಳಗಿನ ಭಾಗದಲ್ಲಿ ಪತ್ತೆಯಾಗಿದೆ. ವಾಹನ ಸವಾರರೊಬ್ಬರು ಮೃತದೇಹ ಗಮನಿಸಿ, ಬಳಿಕ ಕಂಕನಾಡಿ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗಿನ ಸಮಯವಾಗಿದ್ದುದರಿಂದ
ಎಮ್ಎಸ್ಇಝಡ್ ನ ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದಲ್ಲಿ ದುರಂತ ನಡೆಯಲು ಸತತವಾಗಿ ನಡೆಯುತ್ತಿರುವ ನಿರ್ಲಕ್ಷ್ಯವೆ ಕಾರಣ. ವಲಸೆ ಕಾರ್ಮಿಕರ ನಿರ್ಲಜ್ಜ ಶೋಷಣೆ, ಎಸ್ಇಝಡ್ ಅಧಿಕಾರಿಗಳು, ಹಾಗೂ ಜಿಲ್ಲಾಡಳಿತದ ಸತತ ನಿರ್ಲಕ್ಷ್ಯಗಳಿದಾಗಿ ಇಂದು ಐದು ಬಡ ಕಾರ್ಮಿಕರು ಪ್ರಾಣಕಳೆದುಕೊಳ್ಳುವಂತಾಗಿದೆ. ಬಲಿಪಶು ಕುಟುಂಬಗಳಿಗೆ ತಲಾ ಐವತ್ತು ಲಕ್ಷ ಪರಿಹಾರ ಒದಗಿಸಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಸತತ ದೂರುಗಳ ಹೊರತಾಗಿಯೂ ಕ್ರಮ
ಮಂಗಳೂರು: ಯುವಕನೋರ್ವ ಪ್ರೀತಿಸಿದ ಯುವತಿ ಕೇಸ್ ಕೊಟ್ಟಳು ಎಂದು ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಅಡ್ಯಾರ್ ಬಳಿ ನಡೆದಿದೆ.ಸ್ಥಳೀಯ ನಿವಾಸಿ ಯುವಕ ಅಡ್ಯಾರ್ ನಲ್ಲಿಯೇ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಈತನ ವಿರುದ್ಧ ಬಂಟ್ವಾಳ ಪೆÇಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು. ಇದರಿಂದ ಮನನೊಂದು ಈತ ಟವರ್ ಹತ್ತಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು
ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಬಂದಿದ್ದ ಬೆಂಗಳೂರಿನ ವಿದ್ಯಾರ್ಥಿಗಳ ಪೈಕಿ ಇಬ್ಬರು ಸಮುದ್ರಪಾಲಾಗಿದ್ದು, ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಬೆಂಗಳೂರಿನ ಯಲಹಂಕ ಜಿ.ಕೆ.ವಿ.ಕೆ. ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಹಾವೇರಿಯ ಸತೀಶ್ ಎಂ.ನಂದಿಹಳ್ಳಿ ಮತ್ತು ಬಾಗಲ ಕೋಟೆಯ ಸತೀಶ್ ಎಸ್.ಕಲ್ಯಾಣ್ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರಲ್ಲಿ ಸತೀಶ್ ನಂದಿಹಳ್ಳಿಯ ಮೃತದೇಹವು ಪತ್ತೆಯಾಗಿದೆ. ಇನ್ನೊಬ್ಬರಿಗೆ ಹುಡುಕಾಟ ಮುಂದುವರೆದಿದೆ.
ಪತ್ನಿ ಇದ್ದು ಹರೆಯಕ್ಕೆ ಬಂದಿರುವ ಮೂರು ಹೆಣ್ಣು ಮಕ್ಕಳ ತಂದೆಯಾಗಿರುವ ಪಡುಬಿದ್ರಿ ಗ್ರಾ.ಪಂ. ಸದಸ್ಯನಿಂದಾಗಿ ತನ್ನ ಸಂಸಾರವನ್ನು ಕಳೆದುಕೊಂಡ ಯುವಕನೋರ್ವ ತನ್ನ ನೋವನ್ನು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾದ್ಯಮಗಳ ಮುಂದೆ ತೋಡಿಕೊಂಡಿದ್ದಾರೆ. ಪಡುಬಿದ್ರಿಯ ದೀನ್ ಸ್ಟೀನ್ ನಿವಾಸಿಯಾಗಿರುವ ನಾನು ಮೊಹಮ್ಮದ್ ಇಲ್ಯಾಸ್, ನನಗೆ ಜೀನತ್ ಎಂಬಾಕೆಯೊಂದಿಗೆ 2018ರಲ್ಲಿ ಮದುವೆಯಾಗಿತ್ತು ನಮಗೆ ಒರ್ವ ಪುತ್ರನಿದ್ದಾನೆ. ಚೆನ್ನಾಗಿಯೇ ಇದ್ದ
ಮಂಜೇಶ್ವರ : ದೇಶ ವ್ಯಾಪಕವಾಗಿ ಆರ್ಎಸ್ಎಸ್ನ ಭಯೋತ್ಪಾದನೆಯನ್ನು ಸಂವಿಧಾನ ಬದ್ಧವಾಗಿ ತಡೆಯ ಬೇಕಿದೆಯೆಂದು ಎಸ್.ಡಿ.ಪಿ.ಐ. ರಾಮನವಮಿ ಹಬ್ಬದ ಹೆಸರಲ್ಲಿ ಸುಮಾರು 14 ರಾಜ್ಯಗಳಲ್ಲಿ ನಡೆದ ಹಿಂಸಾಚಾರಗಳು ಆಕಸ್ಮಿಕವೋ ಕಾಕತಾಳಿಯವೋ ಅಲ್ಲ. ಪೂರ್ವನಿಯೋಜಿತ ಷಡ್ಯಂತ್ರವಾಗಿದೆ ಎಂದು ಎಸ್.ಡಿ.ಪಿ.ಐ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ಆರೋಪಿಸಿದರು. “ಆರ್ಎಸ್ ಎಸ್ ನ ಮುಸ್ಲಿಂ ಜನಾಂಗೀಯ ಆಕ್ರಮಣಗಳನ್ನು ತಡೆಯಿರಿ ಹಾಗೂ ದೇಶವನ್ನು
ಬೈಂದೂರಿನ ಅರೆಹೊಳೆ ಸಮೀಪದಲ್ಲಿ ಅಲೋಪತಿಯ ನಕಲಿ ವೈದ್ಯರನ್ನು ಬೈಂದೂರಿನ ಪತ್ರಕರ್ತರ ತಂಡ ಪತ್ತೆ ಹಚ್ಚಿದ್ದಾರೆ. ಡಾ.ಪ್ರಜಿತ್ ನಂಬಿಯಾರ್ ಆಯುರ್ವೇದ ವೈದ್ಯರಾಗಿದ್ದು, ಮೊದಲು ಯರುಕೋಣೆಯಲ್ಲಿ ಕ್ಲಿನಿಕ್ ಇಟ್ಟು ಕೊಂಡಿದ್ದು, ಇತ್ತೀಚೆಗೆ ಯರುಕೋಣೆಯಿಂದ ಸ್ಥಳಾಂತರ ಮಾಡಿ ಅರೆಹೊಳೆ ಕ್ರಾಸ್ ಬಳಿ ಕ್ಲಿನಿಕ್ ನ್ನು ತೆರೆದಿದ್ದರು. ನಾಡಾ-ಗುಡ್ಡೆ ಅಂಗಡಿ ಆಯುರ್ವೇದ ವೈದ್ಯರ ಮೇಲೆ ದಾಳಿ ನಡೆಸಿದ ದಿನವೇ ಆರೋಗ್ಯ ಇಲಾಖೆ ಅಧಿಕಾರಿಗಳು, ಅದೇ ದಿನ ರಾತ್ರಿ ವೇಳೆ ಖಚಿತ
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ಸಂಬಂಧಿಕರು ನೀಡಿದ ದೂರಿನನ್ವಯ ಕೆ.ಎಸ್.ಈಶ್ವರಪ್ಪ ಮತ್ತು ಇಬ್ಬರು ಆಪ್ತರ ಮೇಲೆ ಎಫ್.ಐ.ಆರ್. ದಾಖಲು ಮಾಡಿದ್ದೇವೆ. ಪಂಚನಾಮೆ ಪ್ರಕ್ರಿಯೆ ಕೆಲಕ್ಷಣಗಳ ಹಿಂದೆ ಆರಂಭವಾಗಿದೆ. ಹತ್ತಿರದ ಸಂಬಂಧಿಕರ ಮುಂಭಾಗದಲ್ಲೆ ಎಲ್ಲಾ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ
ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಡೆತ್ ನೋಟ್ ಬರೆದಿದ್ದ ಸಂತೋಷ್ ಪಾಟೀಲ್ ಅವರು ಉಡುಪಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಶೇ. 40ರಷ್ಟು ಕಮಿಷನ್ ಆರೋಪ ಮಾಡಿ ಸುದ್ದಿಯಾಗಿದ್ದ ಮತ್ತು ಬಿಜೆಪಿ ಕಾರ್ಯಕರ್ತರೂ ಆಗಿರುವ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ