ಬೆಳ್ಳಾರೆ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಘ ಸಂಸ್ಥೆ, ಗುಂಪು, ಪಂಗಡಗಳ, ವಿರುದ್ಧ ತಕರಾರು ಎತ್ತಿ ದ್ವೇಷ ಹರಡಿ ನಿರಂತರ ತೊಡಕುಂಟು ಮಾಡುತ್ತಿರುವ. ಅಲ್ಲದೆ ಬೆಳ್ಳಾರೆ ಝಕರಿಯ ಜುಮ್ಮ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ಹಾಕಿರುವುದಾಗಿ ಬೆಳ್ಳಾರೆ ಝಕರಿಯ ಜುಮ್ಮ ಮಸೀದಿಯ ಆಡಳಿತ
ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕಡಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ನಡೆದಿದೆ. ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35) ಹತ್ಯೆಯಾದವರು. ರಾತ್ರಿ 10ರ ಸುಮಾರಿಗೆ ತಾಯಿ ಜೊತೆಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಹಿಂಬದಿಯಿಂದ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ಸಮೀರ್ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ.
ಮಂಗಳೂರು: ಮಂಗಳೂರು ನಗರದಲ್ಲಿರುವ ಜೈಲಿಗೆ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮಾಡಿದ ದಾಳಿ ನಡೆಸಿ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೈಲಿಗೆ ಸುಮಾರು 150 ಸಿಬಂದಿಗಳ ಜೊತೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ ವೇಳೆ ಖೈದಿಗಳಿಂದ 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್ ಸಾಧನ, 5 ಇಯರ್‌ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, 1 ಜೊತೆ ಕತ್ತರಿ, 3ಕೇಬಲ್‌ಗಳು ಸೇರಿದಂತೆ ಗಾಂಜಾ ಅಮಲು ಪದಾರ್ಥಗಳು
ಎರಡನೆಯ ಅತ್ಯಾಚಾರ ಪ್ರಕರಣದಲ್ಲಿ ಮಾಜೀ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತು. ಪ್ರಜ್ವಲ್ ರೇವಣ್ಣ ಮೇಲೆ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಮೊದಲ ಅತ್ಯಾಚಾರ ಪ್ರಕರಣ ಮತ್ತು ಒಟ್ಟು ಅಸಹ್ಯ ವೀಡಿಯೋಗಳಿಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಇದ್ದಾರೆ. ಎರಡನೆಯ ಪ್ರಕರಣ ಸಂಬಂಧ ವಿಚಾರಣೆಗೆ ಕರೆತರಲಾಗಿತ್ತು.
ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಡಿವೈಡರ್ ಗೆ ಬಿದ್ದ ಘಟನೆ ರಾ.ಹೆ.75ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಯಾವುದೇ ಲಿಕೇಜ್ ಇಲ್ಲದೇ ಇರುವುದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ. ಬಂಟ್ವಾಳ ಅಗ್ನಿಶಾಮಕ ದಳದವರು, ಸಂಚಾರ ಪೆÇಲೀಸರು, ಸ್ಥಳೀಯ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಬಹಳ ಸಂಚಲನ ಹುಟ್ಟಿದ್ದ ವಾಸುದೇವ ಭಟ್ ಎಂಬವರ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಸರಿ ಸುಮಾರು 12 ಲಕ್ಷಕ್ಕೂ ಹೆಚ್ಚು ಒಡವೆ ಹಾಗೂ ಆಭರಣ ದೋಚಿದ್ದರು. ಇದನ್ನು ಬೆನ್ನಟ್ಟಿದ ಧರ್ಮಸ್ಥಳ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳು ಮುಂಡಾಜೆ ಗ್ರಾಮ ನಿವಾಸಿಗಳಾದ ನವಾಝ್ (38) ರಿಯಾಝ್ ಹಾಗೂ ಬೆಂಗಳೂರಿನ ಕೃಷ್ಣ ಎಂದು ತಿಳಿದುಬಂದಿದೆ. ಈ ಬಗ್ಗೆ
ಇಂದು ನಸುಕಿನ ವೇಳೆ ಅತೀ ವೇಗವಾಗಿ ಬಂದ ಕಾರೊಂದು ಹೆದ್ದಾರಿ ಪಕ್ಕದ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಕಾರು ತೀವೃ ಜಖಂ ಗೊಂಡಿದ್ದು ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾದರೆ ಮತ್ತಿಬ್ಬರಿಗೆ ತೀವೃ ಸ್ವರೂಪದ ಗಾಯಗಳಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ನಾಲ್ವರು ಯುವಕರು ಪ್ರಯಾಣಿಸುತ್ತಿದ್ದ ಕಾರು ಕಾಪುವಿನ ಕೊಪ್ಪಲಂಗಡಿಯಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಬಹುತೇಕ
ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತ ಪಡಿಸಿಕೊಂಡ ಕದೀಮರು ಮನೆಯ ಬಾಗಿಲು ಹೊಡೆದು ಲಕ್ಷಾಂತರ ಮೌಲ್ಯದ ನಗ ಹಾಗೂ ಸಹಸ್ರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಹೆಜಮಾಡಿಯ ಕನ್ನಾಂಗಾರಿನ ಅಶ್ರಫ್ ಎಂಬರ ಮನೆಯಲ್ಲಿ ಅವರ ಪತ್ನಿ ಇದ್ದು, ಭಾನುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೂಗಳತೆ ದೂರದಲ್ಲಿರುವ ತನ್ನ ತಾಯಿಮನೆಗೆ ಹೋಗಿದ್ದು ರಾತ್ರಿ ಅಲ್ಲಿಯೆ ಉಳಿದಿದ್ದರು. ಸೋಮವಾರ ಸಂಜೆ ಸಮಯ ಆರ್ಡರ್ ಮಾಡಲಾದ “ಎಸಿ”ಯನ್ನು ಮನೆಗೆ ತಂದ ವ್ಯಕ್ತಿ ಮನೆಮಂದಿ
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ಸಿ ಫಲಿತಾಂಶ ಹೊರ ಬಿದ್ದ ಮೇ 09ರಂದು ಆರೋಪಿ ಬಾಲಕಿಯ ರುಂಡ ಕತ್ತರಿಸಿ ಎಸ್ಕೇಪ್ ಆಗಿದ್ದ. ಪೊಲೀಸರು ಹಲವು ತಂಡಗಳನ್ನು ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಸದ್ಯ ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಅಡಗಿದ್ದ ಆರೋಪಿ ಪ್ರಕಾಶ್ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದುದ್ದನ್ನು ಶಿರೂರ್ ಟೋಲ್ ಗೇಟ್ ಬಳಿ ಆಂಬ್ಯುಲೆನ್ಸ್ ಚಾಲಕ ತಡೆದು ನಿಲ್ಲಿಸಿದ ಘಟನೆ ನಡೆದಿದೆ.ಸ್ವಿಫ್ಟ್ ಡಿಜೈರ್ ಕಾರಿನ ಢಿಕ್ಕಿಯಲ್ಲಿ ಮೃತದೇಹವನ್ನು ಇರಿಸಿ ರವಾನೆ ಮಾಡುತ್ತಿದ್ದ. ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದ ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಆಂಬ್ಯುಲೆನ್ಸ್ನಲ್ಲಿ ಜಾಸ್ತಿ ಹಣ ಕೇಳಿದ್ದಕ್ಕಾಗಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ವಾರೀಸುದಾರರು