Home Archive by category Fresh News (Page 258)

ಮತ ಚಲಾಯಿಸಿದ ಗುರುರಾಜ ಗಂಟಿಹೊಳೆ

ಬೈಂದೂರು: ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಬುಧವಾರ ಬೆಳಗ್ಗೆ ಕಂಚಿಕಾನ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದರು.ಚುನಾವಣೆಗೆ ಟಿಕೆಟ್ ಘೋಷಣೆಯಾದ ದಿನದಿಂದಲೂ ಪ್ರಚಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದ ಗುರುರಾಜ್ ಗಂಟಿಹೊಳೆಯವರು ಬುಧವಾರ ಬೆಳಗ್ಗೆ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿಸುವ ಮೂಲಕ ಪ್ರಾಥಮಿಕ

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತದಾನ 

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಬೆಳ್ಳಗ್ಗೆ ತನ್ನ ಪತ್ನಿ ಹಾಗೂ ಸಹೋದರಿ ಜೊತೆಗೆ ಅಗಮಿಸಿ ಬಡಾನಿಡಿಯೂರು ಸನ್ಯಾಸಿ ಮಠದ ಬಳಿಯಿರುವ ಬೂತ್ ನಂಬರ್ 97 ರಲ್ಲಿ ಮತ ಚಾಲಾಯಿಸಿದ್ದಾರೆ.

ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಂದ ಮತದಾನ

ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆಯಿಂದ ಮತದಾನ ಆರಂಭಗೊಂಡಿತು. ಮತದಾರರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹೆಚ್ಚಿನ ಮತಗಟ್ಟೆಗಳ ಮುಂದೆ ಮತದಾರರ ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಯಾವುದೇ ಆಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಉಡುಪಿಯ ಬಾಲಕಿಯರ ಪದವಿ ಪೂರ್ವ

ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಮತದಾನ

ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಇಂದು ಬೆಳಗ್ಗೆ ಅರಂಭಗೊಂಡಿತು.ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ನಗರದ ಬೆಂದೂರ್‍ನ ಸಂತ ಸಬೆಸ್ಟಿಯನ್ ಹಿ.ಪ್ರಾ.ಶಾಲೆಯಲ್ಲಿ ಮತದಾನಗೈದರು.

ಉಡುಪಿ ಬಾಲಕಿಯರ ಸರಕಾರಿ ಶಾಲೆಯಲ್ಲಿ ಯಶ್ ಪಾಲ್ ಸುವರ್ಣ ಮತದಾನ

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಉಡುಪಿ ಬಾಲಕಿಯರ ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.  ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಆಗಮಿಸಿರುವ ಯಶ್ ಪಾಲ್ ಸುವರ್ಣ ಅವರು ಮೊದಲ ಮತಚಲಾವಣೆ ಮಾಡಿದ್ದಾರೆ. ಮತ ಚಲಾಯಿಸಿ ಮಾತನಾಡಿದ ಯಶ್ಪಾಲ್ ಸುವರ್ಣ, ಗೆಲ್ಲುವ ವಿಶ್ವಾಸ ಇದೆ ಮುಂದಿನ 5 ವರ್ಷಗಳಲ್ಲಿ ಜನರ ಸೇವೆ ಮಾಡುವ ಅವಕಾಶ ಲಭಿಸಲಿದೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಮತದಾನ ಪ್ರಾರಂಭ

 ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಪ್ರಾರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಕೆಲವು ಮತಗಟ್ಟೆಗಳ ಮುಂದೆ ಬೆಳಗ್ಗೆಯೇ ಮತದಾರರು ಸಾಲುಗಟ್ಟಿರುವುದು ಕಂಡು ಬಂದಿದ್ದು, ಈ ಬಾರಿಯ ಮಾದರಿ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಸೆಳೆಯುವಂತಿದೆ. ಇನ್ನು ರಾಜ್ಯದ ಒಟ್ಟು

ಬಹರೈನ್‍ : ಮೇ 19ರಂದು “ಗಿರಿಜಾ ಕಲ್ಯಾಣ” ಯಕ್ಷಗಾನ ಪ್ರದರ್ಶನ

ಬಹರೈನ್ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಯಕ್ಷೋಪಾಸನ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ “ಗಿರಿಜಾ ಕಲ್ಯಾಣ ” ಎನ್ನುವ ಯಕ್ಷಗಾನ ಪ್ರದರ್ಶನವನ್ನು ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಕನ್ನಡ ಭವನದ ಶ್ರೀಮತಿ ಆಶಾ ಶೆಟ್ಟಿ ಸಭಾಂಗಣದಲ್ಲಿ ಇದೇ ಮೇ ತಿಂಗಳ 19ನೇ ತಾರೀಖಿನ ಶುಕ್ರವಾರದಂದು ಸಂಜೆ 5:30 ಗೆ ಸರಿಯಾಗಿ ಆಯೋಜಿಸಲಾಗಿದೆ ಬಹರೈನ್ ಕನ್ನಡ ಸಂಘಕ್ಕೂ ಯಕ್ಷಗಾನಕ್ಕೂ ಸುಮಾರು ನಾಲ್ಕು ದಶಕಗಳ ಅವಿನಾಭಾವ ಸಂಭಂದವಿದ್ದು

ಮೇ 10ರ ಮತದಾನ, ಮತಗಟ್ಟೆಗಳಿಗೆ ಚುನಾವಣಾ ಅಧಿಕಾರಿ, ಸಿಬ್ಬಂದಿ ನಿಯೋಜನೆ

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,9061 ಮತದಾರರಿದ್ದು, ನಾಳೆ ಜರಗಲಿರುವ 29 ಮತಗಟ್ಟೆಗಳಿಗೆ ಚುನಾವಣೆ ಕರ್ತವ್ಯಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಸಿಬ್ಬಂದಿಗಳನ್ನು ಕಳಿಸಲು ಕಾರ್ಕಳ ಮಂಜುನಾಥ ಪೈ ಕಾಲೇಜಿನಿಂದ ವ್ಯವಸ್ಥೆ ಮಾಡಲಾಗಿದ್ದು ಬೆಳಗಿನಿಂದಲೇ ಪೆÇಲೀಸ್, ಅರೆ ಸೈನಿಕ ಪಡೆ, ಸ್ಥಳದಲ್ಲಿ ಹಾಜರಿದ್ದು, ಬೀಗು ಭದ್ರತೆಯೊಂದಿಗೆ ಚುನಾವಣೆ ಯಂತ್ರಗಳನ್ನು ಚುನಾವಣೆ ಕೇಂದ್ರಗಳಿಗೆ ಕಳುಹಿಸುವ ಕೆಲಸ

ವಿಠ್ಠಲ್ ಜೇಸೀಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ ; 2023-24 ನೇ ಸಾಲಿನ ದಾಖಲಾತಿ ಪ್ರಾರಂಭ

ವಿಟ್ಲದ ವಿಠ್ಠಲ್ ಜೇಸೀಸ್ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ. 2023-24 ನೇ ಸಾಲಿನ ನರ್ಸರಿ, ಶಿಶುವಿಹಾರ, ಪ್ರಾಥಮಿಕ ವಿಭಾಗ, ಪ್ರೌಢ ವಿಭಾಗದ ದಾಖಲು ಪ್ರಾರಂಭವಾಗಿದೆ. ಗುಣಾತ್ಮಕ ಶಿಕ್ಷಣ , ಸೃಜನಾತ್ಮಕ ಕ್ರೀಯಾಶೀಲ ಕಲಿಕೆ, ಆರೋಗ್ಯಕರ ವಾತಾವರಣ, ಸುಸಜ್ಜಿತ ಸಭಾಭವನ, ಹೊರ ಮತ್ತು ಒಳಾಂಗಣ ಕ್ರೀಡಾ ಚಟುವಟಿಕೆಗಳು, ಸುಸಜ್ಜಿತ ವಿಜ್ಞಾನ ಮತ್ತು ಗಣಕಶಾಸ್ತ್ರ ಪ್ರಯೋಗಾಲಯಗಳು, ಪೌಷ್ಟಿಕಾಂಶಯುಕ್ತ ಮಧ್ಯಾಹ್ನ ಊಟ