ಬರ ಪರಿಹಾರ ನೀಡದ ಕೇಂದ್ರ ಸರಕಾರ: ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ಅರ್ಜಿ

ಬರಗಾಲದಿಂದಾಗಿ 48 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಆದರೆ ಕೆಂದ್ರ ಸರಕಾರವು ತಾರತಮ್ಯ ನೀತಿ ಅನುಸರಿಸುತ್ತ ಪರಿಹಾರ ನೀಡುತ್ತಿಲ್ಲ ಎಂದು ರಾಜ್ಯ ಸರಕಾರದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಅವರು ಈ ನಿಟ್ಟಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೊಟ್ಟಿ ನಡೆಸಿ ಮಾಹಿತಿ ನೀಡಿದರು. ಬರಗಾಲದಲ್ಲಿ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಎಷ್ಟು ಪರಿಹಾರ ನೀಡಬೇಕು ಎಂದು ಕ್ರಮ ನಿಯಮ ಇದೆ. ಮೋದಿಯವರ ಸರಕಾರವು ಯಾವುದೇ ನಿಯಮವನ್ನು ಅನುಸರಿಸುತ್ತಿಲ್ಲ. ಸಂವಿಧಾನದ ರೀತ್ಯಾ ಎನ್‌ಡಿಆರ್‌ಎಫ್‌ನಿಂದ ಪರಿಹಾರ ಕೊಡಿಸಲು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆರ್ಟಿಕಲ್ 32ರ ಅಡಿ ಅನಿವಾರ್ಯವಾಗಿ ನಾವು ಕೇಂದ್ರ ಸರಕಾರದ ವಿರುದ್ಧ ಈ ಕೋರ್ಟು ಯುದ್ಧ ನಡೆಸಬೇಕಾಗಿ ಬಂದಿದೆ ಎಂದು ಅವರು ತಿಳಿಸಿದರು.

Related Posts

Leave a Reply

Your email address will not be published.