ವಡೋದರ ಬೇಡ ಎಂದ ಹಾಲಿ ಸಂಸದೆ ರಂಜನಾ ಭಟ್
ಗಜರಾತಿನ ವಡೋದರದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದ ಹಾಲಿ ಸಂಸದೆ ರಂಜನಾ ಭಟ್ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
2014ರಲ್ಲಿ ಪ್ರಧಾನಿ ಮೋದಿಯವರು ಎರಡು ಕಡೆ ಸ್ಪರ್ಧಿಸಿದ್ದರಿಂದ ವಡೋದರಕ್ಕೆ ಮರು ಚುನಾವಣೆ ನಡೆದಿತ್ತು. ಆಗ ಗೆದ್ದಿದ್ದ ರಂಜನಾ ಭಟ್ 2019ರಲ್ಲೂ ಗೆದ್ದಿದ್ದರು ಮತ್ತು ಈ ಬಾರಿಯೂ ಟಿಕೆಟ್ ಪಡೆದಿದ್ದರು. ಆದರೆ ಅವರನ್ನು ವಿರೋಧಿಸಿ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಮಹಿಳಾ ವಿಭಾಗದ ಜ್ಯೋತಿ ಬೆನ್ ಪಾಂಡ್ಯರು ರಂಜನಾಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ರಾಜೀನಾಮೆ ನೀಡಿದ್ದರು. ಈಗ ರಂಜನಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.