ಖಿನ್ನತೆ-ಕಾರಣ ಮತ್ತು ಪರಿಹಾರ ಕುರಿತಾಗಿ ವಿಚಾರ ಸಂಕಿರಣ

ಸಮಾಜದ ಹಿರಿಯ ನಾಗರಿಕರ ಸೇವೆಗಾಗಿ ಕೆಲಸ ಮಾಡುತ್ತಿರುವ ಸೇವಾಭಾರತಿ ಪ್ರಕಲ್ಪ್ಪವಾದ`ಅನಂತ ಸೌಖ್ಯ”ದ ವತಿಯಿಂದಖಿನ್ನತೆ-ಕಾರಣ ಮತ್ತು ಪರಿಹಾರ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ವಿ.ಟಿ.ರಸ್ತೆಯ ಚೇತನಾ ಶಾಲಾ ವಠಾರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಡಾ.ಸತೀಶ್‍ರಾವ್, ಪ್ರೊಫೆಸರ್, ಮನಃಶಾಸ್ತ್ರ ವಿಭಾಗ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ, ದೇರಳಕಟ್ಟೆ, ಮಂಗಳೂರು ಇವರು, ಉದ್ಘಾಟಿಸಿದರು. ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಡಾ.ಅರುಣ ಯಡಿಯಾಲ್, ಪ್ರೊಫೆಸರ್ ಹಾಗೂ ಮನೋವೈದ್ಯರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು ಇವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಖಿನ್ನತೆಯು ಒಂದು ಗಂಭೀರ ಸಮಸ್ಯೆಯಾಗಿದ್ದು, ಇದು ಈಗ ಹಿರಿಯ ನಾಗರಿಕಲ್ಲದೆ ಯುವಜನರಲ್ಲಿಯೂ ಅಧಿಕವಾಗಿ ಕಾಣಿಸಿಕೊಳ್ಳತೊಡಗಿದೆ ಎಂದರು.

ಖಿನ್ನತೆಯ ವಿವಿಧ ಆಯಾಮಗಳನ್ನು ವಿವರಿಸುತ್ತಾ ಇದರಿಂದ ಪಾರಾಗಲು ಹೇಗೆ ಅವರಿಗೆಆಪ್ತ ಸಮಾಲೋಚನೆ ನೀಡಬೇಕು ಹಾಗೂ ಇತರ ಪರಿಹಾರೋಪಾಯಗಳನ್ನು ಪ್ರಾತ್ಯಕ್ಷಿಕೆಯ ಮುಖಾಂತರ ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಭಿüಕರ ಪ್ರಶ್ನೆಗಳಿಗೆ ಸೂಕ್ತ ಉತ್ತರ ಮತ್ತು ಉಪಯುಕ್ತ ಮಾಹಿತಿ ನೀಡಿದರು.


ಸೇವಾಭಾರತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುಮತಿ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥರಾದ ಶ್ರೀ ಗಜಾನನ ಪೈ ಅವರು ಸ್ವಾಗತಿಸಿ, ಶ್ರೀ ಪ್ರಕಾಶ್‍ಪೈ ಅವರು ವಂದಿಸಿದರು. “ಅನಂತ ಸೌಖ್ಯ”ದ ಸಂಚಾಲಕರಾದ ಶ್ರೀ ಉಮೇಶ್ ಶೆಣೈ ಉಸ್ತುವಾರಿ ವಹಿಸಿದ್ದ ಕಾರ್ಯಕ್ರಮದಲ್ಲಿ, ಸೇವಾಭಾರತಿ ಸಂಸ್ಥೆಯ ವಿಶ್ವಸ್ಥರು, ಪದಾಧಿಕಾರಿಗಳು, ಸ್ವಯಂಸೇವಕರು, ಸಿಬ್ಬಂದಿ ವರ್ಗ, ಚೇತನಾ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಸಹಕರಿಸಿದರು. ಒಟ್ಟು 95ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

Related Posts

Leave a Reply

Your email address will not be published.