HomeFresh Newsಫಲಾನುಭವಿಗಳಿಗೆ ಮಂಜೂರಾದ ಹೊಲಿಗೆ ಯಂತ್ರ ವಿತರಣೆ

ಫಲಾನುಭವಿಗಳಿಗೆ ಮಂಜೂರಾದ ಹೊಲಿಗೆ ಯಂತ್ರ ವಿತರಣೆ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ (ನಿ.) ಉಡುಪಿ ಜಿಲ್ಲೆ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 2024-25ನೇ ಸಾಲಿನಲ್ಲಿ ಕಾಪು ವಿಧಾನಸಭಾ ಕ್ಷೇತ್ರದ 8 ಫಲಾನುಭವಿಗಳಿಗೆ ಮಂಜೂರಾದ ಹೊಲಿಗೆ ಯಂತ್ರವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ದಿನಾಂಕ 28-02-4-2026 ರಂದು ಕಾಪು ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಮಜೂರು ಗ್ರಾಮದ ಪ್ರಭಾವತಿ, ಪೆರ್ಡೂರು ಗ್ರಾಮದ ಶಿಲ್ಪ, ಬಡಾ ಗ್ರಾಮದ ಕುಮಾರಿ ಸುರಕ್ಷಾ, ಸಮೀಕ್ಷಾ ಪ್ರಭಾಕರ್, ಅಂಜಾರು ಗ್ರಾಮದ ಆಶಾ ಕೃಷ್ಣ ಕುಲಾಲ್, ಬೊಮ್ಮರಬೆಟ್ಟು ಗ್ರಾಮದ ಭಾರತಿ ನಾಯಕ್, ಬೈರಂಪಳ್ಳಿ ಗ್ರಾಮದ ಸುಮನ, ಕುಕ್ಕೆಹಳ್ಳಿ ಗ್ರಾಮದ ರಕ್ಷಿತಾ ಸೇರಿದಂತೆ ಒಟ್ಟು 8 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಜಿಲ್ಲಾ ವ್ಯವಸ್ಥಾಪಕರ ಮಂಜು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments