ಮನಪಾ ವ್ಯಾಪ್ತಿಯ ಚಿಲಿಂಬಿ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಚಿಲಿಂಬಿಯ ೩ನೇ ಕ್ರಾಸ್ ರಸ್ತೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಬೃಹತ್ತಾಕಾರದ ಮರಗಳು ಧರೆಗುರುಳು ಭೀತಿ ಹೆಚ್ಚಾಗಿದ್ದು, ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.
ಮಳೆಗಾಲದ ಈ ಸಂದರ್ಭದಲ್ಲಿ ಮಂಗಳೂರಿನ ವಿವಿಧೆಡೆಯ ಪ್ರದೇಶಗಳು ಅಪಾಯದ ಭೀತಿಯಲ್ಲಿದೆ
.

ನಗರದ ಚಿಲಿಂಬಿ ಪ್ರದೇಶದ ೩ನೇ ಅಡ್ಡ ರಸ್ತೆಯಲ್ಲಿ ಗುಡ್ಡ ಕುಸಿತದ ಆತಂಕ ಎದುರಾಗಿದ್ದು, ಅಲ್ಲಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಮಾತ್ರವಲ್ಲದೆ ಬೃಹತ್ತಾಕಾರದ ಮರಗಳು ಅಲ್ಲಿದ್ದು, ಅಪಾಯದ ಮುನ್ಸೂಚನೆಯನ್ನು ನೀಡುವಂತಿದೆ.ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳೂ ಕೂಡ ಅಪಾಯದ ಮುನ್ಸೂಚನೆ ನೀಡುತ್ತಿದೆ. ವಿದ್ಯುತ್ ಲೈನ್‌ಗಳು ಜೋತಾಡುತ್ತಿದ್ದು, ಅಲ್ಲಿನ ಜನರು ಭಯದಲ್ಲೇ ಸಂಚಾರ ಮಾಡುವಂತಾಗಿದೆ. ರಾತ್ರಿಯ ಸಮಯದಲ್ಲಿ ಸ್ಟ್ರೀಲ್ ಲೈಟ್‌ಗಳು ಉರಿಯುತ್ತಿಲ್ಲ. ಇಲ್ಲಿನ ಸ್ಟ್ರೀಟ್ ಲೈಟ್‌ಗಳು ಉರಿಯದೇ ವರುಷಗಳೇ ಕಳೆದಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲದಿರುವುದು ವಿಪರ್ಯಾಸ.
ಒಟ್ಟಿನಲ್ಲಿ ಚಿಲಿಂಬಿ ಪ್ರದೇಶದ ೩ನೇ ಅಡ್ಡ ರಸ್ತೆಯಲ್ಲಿ ಗುಡ್ಡ ಕುಸಿತ ಮರಗಳು ಮತ್ತು ವಿದ್ಯುತ್ ಕಂಬಗಳು ಬೀಳುವ ಅತಂಕವಿದ್ದು, ಸಂಬಂಧಪಟ್ಟವರು ಅಪಾಯ ಸಂಭವಿಸುವ ಮೊದಲೇ ಎಚ್ಚೆತ್ತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ.

Related Posts

Leave a Reply

Your email address will not be published.