ಸರಕಾರದಿಂದ ಚಿತ್ರಾಪುರ ಕ್ಷೇತ್ರದ ಜೀರ್ಣೋದ್ಧಾರಕ್ಕೆ 2ಕೋಟಿ ರೂ.ಬಿಡುಗಡೆ
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಪ್ರಯುಕ್ತ ಸರಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಲು ಮಾನ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಇವರ ನೇತೃತ್ವದಲ್ಲಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ನಿಯೋಗ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿತು.
ಇದಕ್ಕೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು 2 ಕೋಟಿ ರೂಪಾಯಿ ಮಂಜೂರಾತಿಗೆ ಅನುಮತಿ ನೀಡಿದರು.
ಈ ಸಂದರ್ಭ ಸಮಿತಿ ಸಂಚಾಲಕರಾದ ಮತ್ಸ್ಯರಾಜ್ ಉಮೇಶ್ ಟಿ.ಕರ್ಕೇರ, ಪ್ರ.ಕಾ ಗಣೇಶ್ ಹೊಸಬೆಟ್ಟು, ಕೃಷ್ಣಶೆಟ್ಟಿ, ಪುರುಷೋತ್ತಮ್ ಎನ್.ಆರ್ ಮತ್ತಿತರ ಪದಾಧಿಕಾರಿಗಳು ನಿಯೋಗದಲ್ಲಿದ್ದರು.ಸರಕಾರದಿಂದ ಅನುದಾನ ಒದಗಿಸಿದ ಮುಖ್ಯಮಂತ್ರಿಗಳಿಗೆ, ಸಂಸದರಿಗೆ ,ಶಾಸಕರಿಗೆ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಕೃತಜ್ಞತೆ ಅರ್ಪಿಸಲಾಯಿತು.