ದುಬಾಯಿ : ಯುಎಇ ಗಮ್ಮತ್ ಕಲಾವಿದೆರ್ ಪ್ರಸ್ತುತ “ಕುಟುಂಬ” ನಾಟಕ ಪ್ರದರ್ಶನ

ಯುಎಇ ಯ ಗಮ್ಮತ್ ಕಲಾವಿದೆರ್ ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟಟೈನ್ಮೆಂಟ್ ಸಹಯೋಗದಲ್ಲಿ ಹವ್ಯಾಸಿ ತುಳು ರಂಗ ನಾಟಕ ತಂಡವು ಪ್ರಸಿದ್ಧ ಬರಹಗಾರ, ಚಲನಚಿತ್ರ ಮತ್ತು ತುಳು ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಖ್ಯಾತ ಸಾಹಿತಿಗಳು ಬರೆದ ತುಳು ಹಾಸ್ಯ ಮತ್ತು ಸಾಮಾಜಿಕ ನಾಟಕ ‘ಕುಟುಂಬ’ ಪ್ರದರ್ಶನ ಕಂಡಿತು. ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟರ್ಟೈನ್ಮೆಂಟ್ ಸಹಯೋಗದಲ್ಲಿ ಯಶಸ್ವಿಯಾಗಿ ಕುಟುಂಬ ನಾಟಕವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಪ್ರಾಯೋಕಜಕರು ಮತ್ತು ಗಮ್ಮತ್ ಕಲಾವಿದರ್ ಸಮಿತಿಯ ಸದಸ್ಯರು ಸಾಂಪ್ರದಾಯಿಕ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ತುಳು ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ಅಪಾರ ಕೊಡುಗೆ ನೀಡಿದ ತುಳು ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‍ಬೈಲ್ ಹಾಗೂ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ನ ವಿನೀತ್, ತುಳು ಕೂಟ ಕುವೈಟ್ನ ಸನತ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಮತ್ತು ಹರೀಶ್ ಬಂಗೇರ ಅವರನ್ನು ಗಮ್ಮತ್ ಕಲಾವಿದೆರ್ ಸದಸ್ಯರು ಸನ್ಮಾನಿಸಿದರು. ಇನ್ನು ವಿಶ್ವನಾಥ ಶೆಟ್ಟಿ ನಿರ್ದೇಶನದ ‘ಕುಟುಂಬ’ ರಂಗ ನಾಟಕಕ್ಕೆ ಕಲಾವಿದರಾದ ಚಿದಾನಂದ ಪೂಜಾರಿ, ಡೋನಿ ಕೊರಿಯಾ, ಆಶಾ ಕೊರಿಯಾ, ಸುನೀಲ್ ಸುರ್ಣ್, ಸಂದೀಪ್ ಬರ್ಕೆ , ಜೇಶ್ ಬಾಯಾರ್, ಪ್ರಶಾಂತ್ ನಾಯರ್, ರಮೇಶ್ ಸುವರ್ಣ್, ಲವೀನಾ ಫರ್ನಾಂಡಿಸ್, ಗಿರೀಶ್ ನಾರಾಯಣ್, ದೀಪ್ತಿ ದಿನರಾಜ್, ರೂಪೇಶ್ ಶೆಟ್ಟಿ ಅವರು ಸಹಕರಿಸಿದರು.

ಸಂಗೀತದಲ್ಲಿ ರೋಹನ್ ಲೋಬೋ ಬೆಂಬಲ ನೀಡಿದರು. ಪ್ರಸಿದ್ಧ ಮೇಕಪ್ ಕಲಾವಿದರಲ್ಲಿ ಒಬ್ಬರಾದ ಕಿಶೋರ್ ಗಟ್ಟಿ ಅವರು ಮೇಕಪ್‍ನಲ್ಲಿ ಎಲ್ಲಾ ಕಲಾವಿದರಿಗೆ ಬಣ್ಣ ಹಚ್ಚಿದರು. ಹಾಸ್ಯ ಮತ್ತು ಕುಟುಂಬ-ಆಧಾರಿತ ನಾಟಕ ವೀಕ್ಷಿಸಲು ಪ್ರೇಕ್ಷಕರು ಕಕ್ಕಿರಿದು ಸೇರಿದ್ದು ಮಾತ್ರವಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ವಿಜಯ ಕುಮಾರ್ ಕೊಡಿಯಾಲಬೈಲ್ ಅವರು ಗಮ್ಮತ್ ಕಲಾವಿದರ ಅದ್ಬುತ ಅಭಿನಯ ಮತ್ತು ನಟನಾ ಕೌಶಲ್ಯವನ್ನು ಶ್ಲಾಘಿಸಿದರು ಮತ್ತು ಮುಂದೆ ಎಲ್ಲಾ ನಾಟಕ ಪ್ರೇಮಿಗಳು ತಮ್ಮ ಬೆಂಬಲವನ್ನು ನೀಡಬೇಕೆಂದು ವಿನಂತಿಸಿದರು. ಗಮ್ಮತ್ ಕಲಾವಿದರ ಅಧ್ಯಕ್ಷ ರಾಜೇಶ್ ಕುತ್ತಾರ್ ಸ್ವಾಗತಿಸಿ, ದೀಪಕ್ ಎಸ್ಪಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರೂಪಿಸಿ ಧನ್ಯವಾದವಿತ್ತರು.