ಮಂದಾರ್ತಿ ದೇವಸ್ಥಾನದಲ್ಲಿ ನೇತ್ರಜ್ಯೋತಿ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಚತೆ ಕಾರ್ಯಕ್ರಮ

ವಿಶ್ವಪರಿಸರ ದಿನಾಚರಣೆಯ ಪ್ರಯುಕ್ತ ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಸಿದ್ಧ ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯದ ಸುತ್ತ ಮುತ್ತಲು ಸ್ವಚ್ಚತಾ ಕಾರ್ಯ ನಡೆಯಿತು. ಸುಮಾರು 50 ವಿದ್ಯಾರ್ಥಿಗಳು ಬಾಗವಹಿಸಿದ್ದು ದೇವಾಲಯದ ಆವರಣದಲ್ಲಿರುವ ಪ್ಲಾಸ್ಟಿಕ್, ಬಾಟಲಿ, ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು. ನಂತರ ದೇವಾಲಯದ ಅನ್ನದಾನದ ಕೈಂಕರ್ಯದಲ್ಲಿಯೂ ಭಾಗವಹಿಸಿದರು,


ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಡಿನೇಟರ್ ಗಳಾದ ಶ್ರೀ ಸಚಿನ್ ಶೇಟ್, ಶ್ರೀ ನಾಗರಾಜ್ ಮೆಂಡನ್, ಉಪನ್ಯಾಸಕಿಯರಾದ ತೃಪ್ತಿ ನಾಯಕ್ ಹಾಗೂ ಸೌಮ್ಯರವರು ಭಾಗವಹಿಸಿದ್ದರು.