ಕಡಬ: ಬೆಳಿಯಪ್ಪ ಗೌಡ ಅವರಿಗೆ ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ

CRPFನಲ್ಲಿ ಸುದೀರ್ಘ 22 ವರ್ಷ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹುದ್ದೆಗಳಾದ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಮತ್ತು ಎ.ಎಸ್.ಐ. ಆಗಿ ಸೇವೆ ಸಲ್ಲಿಸಿರುವ ಬೆಳಿಯಪ್ಪ ಗೌಡ ಇವರು ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿರುತ್ತಾರೆ.

ಪ್ರಸ್ತುತ ಇವರು 133ನೇ ಬೆಟಾಲಿಯನ್ ರಾಂಚಿ ಜಾರ್ಖಂಡ್‌ನಲ್ಲಿ ಸೇವೆಯಲ್ಲಿರುತ್ತಾರೆ. ಕಡಬ ತಾಲ್ಲೂಕು ಐತೂರ್ ಗ್ರಾಮದ ಮುಂಡಡ್ಕ ಕೃಷ್ಣಮ್ಮ ಮತ್ತು ಬಿರ್ಮಣ್ಣ ಗೌಡ ಇವರ ಸುಪುತ್ರರಾಗಿರುವ ಇವರು ಪತ್ನಿ ವನಿತಾ ಹಾಗೂ ಜಗನ್ ಮತ್ತು ತನ್ವಿನ್ ಎಂಬ ಇಬ್ಬರು ಪುತ್ರರನ್ನು ಹೊಂದಿರುತ್ತಾರೆ.

ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಂಕದಕಟ್ಟೆಯಲ್ಲಿ ಮತ್ತು ಬೈಲು ಬಿಳಿನೆಲೆಯಲ್ಲಿ ಹಾಗೂ ಹೈ ಸ್ಕೂಲ್ ವಿದ್ಯಾಭ್ಯಾಸ ವನ್ನು ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆಯಲ್ಲಿ ಮತ್ತು JOC ವಿದ್ಯಾಭ್ಯಾಸವನ್ನು ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನಲ್ಲಿ ನಂತರ ಕೆಎಸ್‌ಎಸ್ ಕಾಲೇಜಿನಲ್ಲಿ ಅಂತಿಮ ಪದವಿ ಪಡೆಯುವಾಗಲೇ 2003ರಲ್ಲಿ CRPFನಲ್ಲಿ ಸೇವೆಗೆ ಆಯ್ಕೆಯಾಗಿರುತ್ತಾರೆ.
