ಬೆಂಗಳೂರು ಸಹಿತ ರಾಜ್ಯದಲ್ಲಿ ಹೆಚ್ಚಿದ ಡೆಂಗಿ

ಭಾನುವಾರ 954 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 159 ಮಂದಿ ಡೆಂಗಿ ಹೊಂದಿರುವುದು ದೃಢ ಪಟ್ಟಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.

ಡೆಂಗಿ ಬಾಧಿತರಲ್ಲಿ ಎಲ್ಲ ಪ್ರಾಯದವರೂ ಇದ್ದು ಭಾನುವಾರದ 159 ಪ್ರಕರಣದಲ್ಲಿ 80 ಬೆಂಗಳೂರು ನಗರ ವ್ಯಾಪ್ತಿಯದಾಗಿದೆ. ಸದ್ಯ 301 ಜನರು ಡೆಂಗಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರುಷದ ಒಟ್ಟು ಡೆಂಗಿ ಪ್ರಕರಣ 7,165 ಎಂದು ಆರೋಗ್ಯ ಇಲಾಖೆ ಹೇಳಿದೆ. ಡೆಂಗಿ ಜ್ವರಕ್ಕೆ ಉಪಯುಕ್ತವಾದ ಪ್ಯಾರಾಸಿಟಮಲ್ ಮಾತ್ರೆಗಳು ಎಲ್ಲ ಆಸ್ಪತ್ರೆಗಳಲ್ಲಿ ಸುಲಭ ಲಭ್ಯವಾಗುವಂತೆ ಮಾಡಲಾಗಿದೆ ಎಂದೂ ತಿಳಿಸಲಾಗಿದೆ.

L.KAdvani

Related Posts

Leave a Reply

Your email address will not be published.