ನಟ ಚೇತನ್ ಹೇಳಿಕೆ : ಸಮಸ್ಯೆ ಮಾಡುವವರು ಸಮಸ್ಯೆ ಮಾಡೇ ಮಾಡುತ್ತಾರೆ : ತುಳುರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್

ಮಾಧ್ಯಮಗಳೊಂದಿಗೆ ಮಾತನಾಡಿದ ತುಳುರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಸಮಸ್ಯೆ ಮಾಡುವವರು ಸಮಸ್ಯೆ ಮಾಡೇ ಮಾಡುತ್ತಾರೆ.ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದ ಆಚರಣೆಗೆ ಯಾವುದೇ ಧಕ್ಕೆ ಬಾರದಂತೆ, ಯಾವುದೇ ಜಾತಿಗೆ ಸಮಸ್ಯೆ ಬಾರದಂತೆ ಅಚ್ಚುಕಟ್ಟಾಗಿ ಸಿನೆಮಾ ನಿರ್ಮಿಸಿದ್ದಾರೆ. ಅದು ಯಾಕೆ ಕಾಣುತ್ತಿಲ್ಲ ಅನ್ನೊದು ಗೊತ್ತಾಗುತ್ತಿಲ್ಲ ಎಂದರು. ಕಾಂತಾರ ಸಿನೆಮಾ ಸದ್ಯದಲ್ಲೇ ತುಳುವಿನಲ್ಲಿ ಬರಲಿದ್ದು, ಜನ ಕನ್ನಡ ನೋಡಿದ್ದರೂ ಕೂಡ ತುಳುವಿನಲ್ಲಿ ಹೇಗೆ ಬರುತ್ತದೆ ಎಂದು ನೋಡಲಿದ್ದಾರೆ ಎಂದರು.ಭೂತಾರಾಧನೆ ಹಿಂದೂ ಧರ್ಮದ ಆಚರಣೆ ಅಲ್ಲ ಅನ್ನುವವರಿಗೆ, ನಿಜವಾದ ಸತ್ಯ ಎನು ಅಂತ ಅವರಿಗೆ ಅರಿವಾದಾಗ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.