ದೀಪಾವಳಿಗೆ ಪರಿಸರ ಸ್ನೇಹಿ ಪಟಾಕಿ ಮಾರುಕಟ್ಟೆಗೆ ಲಗ್ಗೆ

ಮಂಗಳೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದರೆ ದೀಪಾವಳಿ ಸಂದರ್ಭದಲ್ಲಿ ಅಬ್ಬರದ ಪಟಾಕಿಗಳದ್ದೇ ಕಾರುಬಾರು. ಆದರೆ ಈ ಬಾರಿಯ ದೀಪಾವಳಿಗೆ ಸದ್ದೇ ಮಾಡದ, ಪರಿಸರಕ್ಕೆ ಹಾನಿಯಾಗದ ಪಟಾಕಿಗಳು ಮಾರುಕಟ್ಟೆಗೆ ಬಂದಿದೆ. ಈ ಪರಿಸರಸ್ನೇಹಿ ಪಟಾಕಿ ಹೇಗಿರುತ್ತೆ ಗೊತ್ತಾ ಈ ಸ್ಟೋರಿ ನೋಡಿ
ಇದು ಈ ಬಾರಿಯ ದೀಪಾವಳಿಗೆ ಮಾರುಕಟ್ಟೆಗೆ ಬಂದಿರುವ ಪರಿಸರ ಸ್ನೇಹೀ ಪಟಾಕಿಗಳು. ಇಲ್ಲಿ ಬೀಡಿ ಪಟಾಕಿ, ಲಕ್ಷ್ಮಿ ಬಾಂಬ್, ಸುಕ್ಲಿ ಬಾಂಬ್, ರಾಕೆಟ್, ದುರ್ಸು, ನೆಲಚಕ್ರ ಎಲ್ಲಾ ಪಟಾಕಿಗಳೂ ಇವೆ. ಆದರೆ ವಿಶೇಷ ಅಂದ್ರೆ ಇದು ಯಾವುದೂ ಸದ್ದು ಮಾಡಲ್ಲ. ಪರಿಸರಕ್ಕೂ ಹಾನಿ ಮಾಡಲ್ಲ. ಅಂದ ಹಾಗೇ ಈ ಪರಿಸರ ಸ್ನೇಹೀ ಪಟಾಕಿಗಳನ್ನು ಮಾರುಕಟ್ಟೆಗೆ ತಂದಿರುವುದು ಮಂಗಳೂರಿನ ಹೊರವಲಯದ ಪಕ್ಷಿಕೆರೆಯ ನಿತಿನ್ ವಾಸ್ ಅವರ ಪೇಪರ್ ಸೀಡ್ ಸಂಸ್ಥೆಈ ಸಿಡಿಯದ ಪಟಾಕಿಗಳನ್ನು ನೈಜ ಪಟಾಕಿಗಳ ರೀತಿಯಲ್ಲಿ ತಯಾರಿಸಲಾಗಿದೆ. ಅದರ ಬಣ್ಣ, ಗಾತ್ರ ಇವುಗಳೆಲ್ಲ ನಿಜವಾದ ಪಟಾಕಿ ರೀತಿಯಲ್ಲಿ ಇದೆ.

ಈ ಪಟಾಕಿಗಳು ಸಿಡಿಸುವ ಬದಲು ತೊಟ್ಟಿ, ಹೂ ಕುಂಡಗಳಿಗೆ ಹಾಕಿದರೆ, ಅವು ಗಿಡವಾಗಿ ಬೆಳೆಯುತ್ತವೆ.ಬೀಡಿ ಪಟಾಕಿಯಲ್ಲಿ ಮೆಣಸು, ಟೊಮೆಟೊ, ಪಾಲಕ್, ಲಕ್ಷ್ಮೀ ಬಾಂಬ್‍ನಲ್ಲಿ ಬೀಟ್ರೋಟ್, ಸನ್ ಫ್ಲವರ್, ಸೌತೆಕಾಯಿ, ಸುಕ್ಲಿ ಬಾಂಬ್‍ನಲ್ಲಿ ಮೆಣಸಿನಕಾಯಿ ಟೊಮೆಟೊ, ಮೂಲಂಗಿ, ರಾಕೆಟ್‍ನಲ್ಲಿ ಬೀಟ್ರೋಟ್ , ಸನ್ ಫ್ಲವರ್, ದುರ್ಸುನಲ್ಲಿ ಸೌತೆ ಕಾಯಿ, ಬೆಂಡೆ ಕಾಯಿ, ನೆಲಚಕ್ರದಲ್ಲಿ ಪಾಲಕ್, ಮೂಲಂಗಿ ಬೀಜಗಳನ್ನು ಹಾಕಲಾಗಿದೆ.
ಒಟ್ಟಿನಲ್ಲಿ ಪರಿಸರಪ್ರೇಮಿಗಳು ಈ ಬಾರಿ ಯಾವುದೇ ಆತಂಕವಿಲ್ಲದೇ ದೀಪಾವಳಿ ಆಚರಿಸಲು ಅವಕಾಶ ಮಾಡಿಕೊಟ್ಟಿದೆ ಪೇಪರ್ ಸೀಡ್ ಸಂಸ್ಥೆ.