ಯುಎಇ ಯಲ್ಲಿ ನಡೆದ ಕಿವುಡರ ಟಿ-20 ಕ್ರಿಕೆಟ್ : ಹುಂಚನಿಯ ಪೃಥ್ವಿರಾಜ್ ಶೆಟ್ಟಿಗೆ ಅದ್ಧೂರಿ ಸ್ವಾಗತ

ಬೈಂದೂರು :ಯು.ಎ.ಇ.ಯಲ್ಲಿ ನಡೆದ ಅಂತಾರಾಷ್ಟ್ರೀಯ ಕಿವುಡರ ಟಿ-20 ಕ್ರಿಕೆಟ್ 2022ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿದ ಕಿವುಡರ ಭಾರತ ಕ್ರಿಕೆಟ್ ತಂಡದ ಸದಸ್ಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಹುಂಚನಿ ಚಿಕ್ಕ ಹಳ್ಳಿಯ ಪ್ರತಿಭೆ ಪ್ರಥ್ವಿರಾಜ್ ಶೆಟ್ಟಿ ಯವರನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ವೃತ್ತದಿಂದ ಬೈಂದೂರು ತಾಲೂಕಿನ ಗೋಳಿ ಹೊಳೆ ಗ್ರಾಮದ ವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು,
ಬಾಲ್ಯದಲ್ಲೇ ಕ್ರಿಕೆಟ್ ಬಗ್ಗೆ ಆಸಕ್ತಿಯನ್ನು ವಹಿಸಿದ್ದ ಪ್ರಥ್ವಿರಾಜ್ ಶೆಟ್ಟಿ ಅವರು ತಮ್ಮ ಕಿವುಡು ತನವನ್ನು ಬದಿಗೊತ್ತಿ ಕ್ರಿಕೆಟ್ ಆಟದ ಬಗ್ಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅವರು ಬಾಲ್ಯದ ದಿನಗಳಲ್ಲಿ ಗ್ರಾಮೀಣ ಭಾಗದ ಮೈದಾನದಲ್ಲಿ ಆಟವಾಡಿ ನಂತರ ದಿನಗಳಲ್ಲಿ ಕುಂದಾಪುರ ಚಕ್ರವರ್ತಿ ಕ್ರಿಕೆಟ್ ತಂಡ, ಮಂಗಳೂರಿನ ಎಂಪಿಎಲ್ ತಂಡದ ಆಟಗಾರನಾಗಿ, ಕರ್ನಾಟಕ ರಣಜಿ ತಂಡದ ಸದಸ್ಯ ನಾಗಿ ಇದೀಗ ಕರ್ನಾಟಕಕ್ಕೆ ತಂಡದ ನಾಯಕರಾಗಿದ್ದಾರೆ.
ನೂರಾರು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, ವೇಗದ ಬೌಲರ್ ಆಗಿರುವ ಪ್ರಥ್ವಿರಾಜ್ ಶೆಟ್ಟಿ ಭಾರತ ಕಿವುಡರ ಕ್ರಿಕೆಟ್ ತಂಡಕ್ಕೆ ಕರ್ನಾಟಕ ರಾಜ್ಯದಿಂದ ಏಕಮಾತ್ರ ಆಟಗಾರನಾಗಿ ಆಯ್ಕೆ ಆಗಿದ್ದರು.
ಈ ಸಂದರ್ಭದಲ್ಲಿ ಕುಂದಾಪುರದ ಬಂಟರ ಸಂಘ ಮತ್ತು ಬೈಂದೂರು ಬಂಟರ ಸಂಘ ಅಧ್ಯಕ್ಷರು ಕಾರ್ಯದರ್ಶಿ ಸರ್ವ ಸದಸ್ಯರು ಹಾಗೂ ಬಿಜೆಪಿ ಕಚೇರಿ ಬೈಂದೂರು ವತಿಯಿಂದ ಕ್ರೀಡಾಪಟುವಿಗೆ ಸನ್ಮಾನಿಸಿ ಗೌರವಿಸಲಾಯಿತು.