HomeFresh Newsಭಾರತದಲ್ಲಿ ಒಳ್ಳೆ ಸಂಪಾದನೆಯವರು ಪದವೀಧರರಲ್ಲ; ಹೂಡಿಕೆದಾರ ಮುಖರ್ಜಿಯಾ

ಭಾರತದಲ್ಲಿ ಒಳ್ಳೆ ಸಂಪಾದನೆಯವರು ಪದವೀಧರರಲ್ಲ; ಹೂಡಿಕೆದಾರ ಮುಖರ್ಜಿಯಾ

ಭಾರತದಲ್ಲಿ ಕಾಲೇಜುಗಳ ರಾಶಿಯೇ ಇದೆ; ರಾಶಿ ರಾಶಿಯಾಗಿ ಪದವೀಧರರು ತಯಾರಾಗುತ್ತಿದ್ದಾರೆ. ಅನುಕೂಲ ಇರುವವರು ಈ ಪದವಿ ಹಿಡಿದುಕೊಂಡು ವಿದೇಶಕ್ಕೆ ಹೋಗುತ್ತಾರೆ. ಇಲ್ಲುಳಿದ ಒಂದಷ್ಟು ಜನರಿಗೆ ಮಾತ್ರ ಓದಿಗೆ ತಕ್ಕ ಕೆಲಸ ಸಿಗುತ್ತದೆ; ಉಳಿದವರು ಏನೋ ಒಂದು ಕೆಲಸ ಮಾಡುತ್ತಾರೆ; ಸಾಕಷ್ಟು ಜನ ನಿರುದ್ಯೋಗಿಗಳು. ಒಟ್ಟಾರೆ ಇದು ಭಾರತದ ಸಂಪತ್ತಿನ ಅನೇರ ನಷ್ಟ ಎನ್ನುತ್ತಾರೆ ಮುಖರ್ಜಿಯಾ.

ಹನ್ನೆರಡನೆಯ ತರಗತಿಯ ಬಳಿಕ ಪದವಿ ಬೇಕೆ, ಬೇರೇನಾದರೂ ತರಬೇತಿ ಪಡೆಯುವುದೇ, ವ್ಯಾಪಾರ ಮಾಡುವುದೇ, ಇದನ್ನೆಲ್ಲ ತೀರ್ಮಾನಿಸಿಕೊಂಡ ಬಳಿಕವಷ್ಟೆ ಕಾಲೇಜಿಗೆ ಹೋಗುವುದಾದರೆ ಹೋಗಬೇಕು. ಸಾಮಾನ್ಯ ವ್ಯಾಪಾರದಲ್ಲಿ ಲಾಭ ಮಾಡುವವನು, ವ್ಯಾವಹಾರಿಕವಾಗಿ ಇಂಗ್ಲಿಷ್ ಕಲಿಯುತ್ತಾನೆ; ಪದವೀಧರರನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾನೆ ಎನ್ನುವುದು ಕಹಿ ಸತ್ಯ ಎನ್ನುತ್ತಾರವರು.

ಮಾರ್ಸೆಲೆಸ್ ಇನ್ವೆಸ್ಟ್‍ಮೆಂಟ್ ಮ್ಯಾನೇಜರ್ಸ್ ಸಂಸ್ಥೆಯ ಸ್ಥಾಪPಟ್ಮತ್ತು ಸಿಇಓ ಸೌರಭ್ ಮುಖರ್ಜಿಯಾ ಅನಗತ್ಯ ಕಲಿಕೆಯಿಂದ ಲಾಭವಿಲ್ಲ ಎನ್ನುತ್ತಾರೆ. ಭಾರತದಲ್ಲಿ ಇಂದು ಪದವಿ ಪಡೆಯುವ ನೂರು ಜನರಲ್ಲಿ ಮೂವರು ಮಾತ್ರ ಓದಿಗೆ ತಕ್ಕ ಕೆಲಸ ಪಡೆಯುತ್ತಿದ್ದಾರೆ. ಭಾರತದಲ್ಲಿ ಓದದ ಇಲ್ಲವೇ ಕಡಿಮೆ ಓದಿದ ನಿರುದ್ಯೋಗಿಗಳ ಪ್ರಮಾಣ ಮೂರು ಶೇಕಡಾವಾದರೆ, ಪದವೀಧರರಲ್ಲಿ ನಿರುದ್ಯೋಗಿಗಳ ಪ್ರಮಾಣ 35ರಿಂದ 40 ಶೇಕಡಾದವರೆಗೂ ಇದೆ ಎನ್ನುತ್ತಾರವರು.



RELATED ARTICLES

LEAVE A REPLY

Please enter your comment!
Please enter your name here

Most Popular

Recent Comments