ರಾಜ್ಯಾದ್ಯಂತ ಮತದಾನ ಪ್ರಾರಂಭ

 ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಪ್ರಾರಂಭವಾಗಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.

ಕೆಲವು ಮತಗಟ್ಟೆಗಳ ಮುಂದೆ ಬೆಳಗ್ಗೆಯೇ ಮತದಾರರು ಸಾಲುಗಟ್ಟಿರುವುದು ಕಂಡು ಬಂದಿದ್ದು, ಈ ಬಾರಿಯ ಮಾದರಿ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಸೆಳೆಯುವಂತಿದೆ.

ಇನ್ನು ರಾಜ್ಯದ ಒಟ್ಟು 5,30,85,566 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

Related Posts

Leave a Reply

Your email address will not be published.