ನದಿಗಳಲ್ಲಿ ಕಷ್ಟಪಟ್ಟರೆ ಚಿನ್ನ ಸಿಗುತ್ತದೆ; ಆದರೆ ಕೆಲವು ನದಿಗಳು ಚಿನ್ನದ ಗಣಿಗಳೆನಿಸಿ ಪ್ರಸಿದ್ಧಿ ಪಡೆದಿವೆ.

ಯೂಬಾ ನದಿ, ಇದು ಹತ್ತೊಂಬತ್ತು ಇಪ್ಪತ್ತನೆಯ ನೂರಟ್ಟಿಗಳಲ್ಲಿ ಗೋಲ್ಡ್ ರಶ್‌ಗೆ ಕಾರಣವಾಗುತ್ತು. ಲೋಕದಲ್ಲೇ ಅತಿ ಹೆಚ್ಚು ಹೈಡ್ರಾಲಿಕ್ ನೀರಿನಡಿಯ ಗಣಿಗಾರಿಕೆ ನಡೆಯುವ ನದಿಯಿದು.

ಬಿಗ್ ಹೋಲ್ ನದಿ, ಸಣ್ಣ ಪ್ರಮಾಣದಲ್ಲಿ ಬಂಗಾರ ಸಿಗುತ್ತದೆ.

ಮಿಸ್ಸೌರಿ ನದಿ, ಹರಡಿದಂತೆ ಸ್ವರ್ಣ ಲಭ್ಯ. ಅದರಲ್ಲೂ ಮೊಂಟಾನಾ ವಲಯದಲ್ಲಿ ಅಧಿಕ.

ಕೆನಡಾದ ಕ್ಲೋಂಡೆ ನದಿ, 1890ರಲ್ಲಿ ಕ್ಲೋಂಡೆ ಗೋಲ್ಡ್ ರಶ್‌ಗೆ ಕಾರಣ ಎನಿಸಿತ್ತು.
ಕರಾಕುರಿ ನದಿ, ಸ್ಥಳೀಯ ಹಳ್ಳಿಗರ ಕನಕ ಹರಿವು.

ಸುಬರ್ಣರೇಖಾ ನದಿ, ಸ್ಥಳೀಯವಾಗಿ ಚಿನ್ನದ ರೇಕು ಸಿಗುವ ನದಿ.

ಹತ್ತೊಂಬತ್ತು, ಇಪ್ಪತ್ತನೆಯ ಶತಮಾನಗಳಲ್ಲಿ ಚಿನ್ನ ಸಿಗುವಲ್ಲಿಗೆ ಯೂರೋಪಿಯನರ ಗುಂಪುಗಳು ಮುತ್ತಿಗೆ ಹಾಕಿದ್ದು ಗೋಲ್ಡ್ ರಶ್ ಎನಿಸಿದೆ. ಚಾರ್ಲಿ ಚಾಪ್ಲಿನ್ ಇದನ್ನು ಗೇಲಿ ಮಾಡಿ ಒಂದು ಸಿನಿಮಾ ಮಾಡಿ ಗೋಲ್ಡನ್ ಕಲೆಕ್ಷನ್ ಮಾಡಿದ್ದರು.

