HomeEntertainmentವರನಟರೊಬ್ಬರೇ ಜಾಗತಿಕ ಬಾಂಡ್|ನಾಯಕ ನಟನಾಗಿ ಗಾಯಕ ಪ್ರಶಸ್ತಿಯ ಸರದಾರ|ಅತಿ ಹೆಚ್ಚು ಪುಸ್ತಕಗಳ ವರಮಾಲೆ ಪಡೆದ ನಟ

ವರನಟರೊಬ್ಬರೇ ಜಾಗತಿಕ ಬಾಂಡ್|ನಾಯಕ ನಟನಾಗಿ ಗಾಯಕ ಪ್ರಶಸ್ತಿಯ ಸರದಾರ|ಅತಿ ಹೆಚ್ಚು ಪುಸ್ತಕಗಳ ವರಮಾಲೆ ಪಡೆದ ನಟ

ಏಪ್ರಿಲ್ 24ರಂದು ವರನಟ ರಾಜಕುಮಾರ್ ಹುಟ್ಟಿದರು, ಏಪ್ರಿಲ್‌ನಲ್ಲೇ 12ರಂದು ಅವರು ನಿಧನರಾದ ದಿನವೂ ಬಂದಿದೆ.

ರಾಷ್ಟ್ರ ಪ್ರಶಸ್ತಿ ಆರಂಭವಾದ ದಶಕದ ಪ್ರಶಸ್ತಿ ಪಡೆದ ಮೊದಲ ಹತ್ತು ಚಿತ್ರಗಳಲ್ಲೂ ಡಾ. ರಾಜಕುಮಾರ್ ಇದ್ದರು; ಅತಿ ಹೆಚ್ಚು ಹದಿನಾಲ್ಕು ರಾಷ್ಟ್ರ ಪ್ರಶಸ್ತಿ ಚಿತ್ರಗಳ ನಟ ಅವರು.


ಜಗತ್ತಿನ ಯಾವ ಚಿತ್ರ ನಟನ ಬಗೆಗೂ ಬಾರದಷ್ಟು ಪುಸ್ತಕಗಳು ರಾಜಕುಮಾರ್ ಅವರ ಬಗೆಗೆ ಬಂದಿವೆ. ನಾಯಕ ನಟನಾಗಿದ್ದು ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ಪಡೆದವರು ಇವರೊಬ್ಬರು ಮಾತ್ರ.

ಬೆಂಗಳೂರು ಮೆಯಿಲ್ ಚಿತ್ರವನ್ನು ಕನ್ನಡ ಮತ್ತು ಇತರ ಭಾಷೆಗಳಲ್ಲಿ ನೋಡಿದರೆ ಲೋಕದ ಏಕೈಕ ಬಾಂಡ್ ನಟ ಅವರು. ಕೆಲವೇ ತರಗತಿ ಓದಿದ ಅವರಂತೆ ಕನ್ನಡ ನುಡಿವ ನಟ ಇನ್ನೂ ಬಂದಿಲ್ಲ. ಅವರಷ್ಟು ಬಗೆಯ ಪಾತ್ರಗಳನ್ನು ಮಾಡಿದವರೂ ಇಲ್ಲ.

ರಾಜ್ ಕುಮಾರ್ ತೀರಿಕೊಂಡ ಇಪ್ಪತ್ತು ವರುಷಗಳ ಬಳಿಕ ಅದೇ ಏಪ್ರಿಲ್ 12ರಂದು ಈ ಬಾರಿ ಗಾಯಕಿ ಆಶಾ ಭೋಂಸ್ಲೆ ನಿಧನರಾದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಹಿತ ಹಲವು ಸಮಾನ ಗೌರವ ಪಡೆದವರು ರಾಜ್ ಹಾಗೂ ಆಶಾ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments