HomeLifestyleFoodಫಿಲಿಪ್ಪೀನ್ಸ್‌ನ ಲಿಟಲ್ ಲೇಡಿ ಬನಾನಾ|ಸಿಹಿ ಸವಿ ಸೆನೋರಿಟಾ ಬಾಳೆಯ ಹಣ್ಣು|ಸಾಂಸ್ಕೃತಿಕ ಮಹತ್ವದ ಬಾಳೆಯ ಹಣ್ಣು

ಫಿಲಿಪ್ಪೀನ್ಸ್‌ನ ಲಿಟಲ್ ಲೇಡಿ ಬನಾನಾ|ಸಿಹಿ ಸವಿ ಸೆನೋರಿಟಾ ಬಾಳೆಯ ಹಣ್ಣು|ಸಾಂಸ್ಕೃತಿಕ ಮಹತ್ವದ ಬಾಳೆಯ ಹಣ್ಣು

ಫಿಲಿಪ್ಪೀನ್ಸ್ ಮೂಲದ ಸೆನೋರಿಟಾ ಬಾಳೆಯ ಹಣ್ಣನ್ನು ಪ್ರಪಂಚದ ಸಿಹಿ ಸವಿಯ ಲೋಕದ ಅತಿ ಚಿಕ್ಕ ಬಾಳೆಯ ಹಣ್ಣು ಎಂದು ಪರಿಗಣಿಸಲಾಗಿದೆ.

ಫಿಲಿಪ್ಪೀನ್ಸ್ ಜೊತೆಗೆ ಇಂಡೋನೇಶಿಯಾ, ಮಲೇಶಿಯಾಗಳಲ್ಲೂ ಈ ಬಾಳೆಯ ಹಣ್ಣು ಸಾಂಸ್ಕೃತಿಕ ಮಹತ್ವ ಪಡೆದಿದೆ. ಸೆನೋರಿಟಾ ಬನಾನಾವನ್ನು ಲಿಟಲ್ ಲೇಡಿ ಬನಾನಾ, ಮೋಕೊಯ್, ಆರ್ನಿಬಲ್, ಕರಿನೋಸ, ಪಿಸಾಂಗ್ ಎಂದಿತ್ಯಾದಿಯಾಗಿ ಆಗ್ನೇಯ ಏಶಿಯಾಗಳಲ್ಲಿ ಸ್ಥಳೀಯವಾಗಿ ಕರೆಯುತ್ತಾರೆ.

ಫಿಲಿಪ್ಪೀನ್ಸ್‌ನದೇ ಆದ ಲಕಟನ್ ಬಾಳೆಯ ಹಣ್ಣು ಜಗತ್ತಿನಲ್ಲೇ ಅತಿ ಸಿಹಿಯ ಬಾಳೆಯ ಹಣ್ಣು ಎನಿಸಿದೆ. ಅತಿ ಚಿಕ್ಕ ಈ ಲಿಟಲ್ ಲೇಡಿ ಬನಾನಾ ಸಿಹಿಗೆ ಅದಕ್ಕೆ ಸಮಾನವಾದುದಲ್ಲದೆ, ಕೆನೆ ಕೆನೆ ಸವಿ ರುಚಿಯನ್ನೂ ಪಡೆದಿದೆ.

ನೇರ ತಿನ್ನುವುದೇ ಹೆಚ್ಚು. ಸಿಹಿ ಅಡುಗೆ ಇತ್ಯಾದಿಗೂ ಬಳಸುತ್ತಾರೆ. ಪೊಟಾಸಿಯಂ, ಬಿ 6, ವಿಟಮಿನ್ ಸಿ, ನಾರು ಸತ್ವ ಇತ್ಯಾದಿಗಳ ಈ ಬಾಳೆಯ ಹಣ್ಣು ಪಚನ ಕ್ರಿಯೆಗೆ ಉತ್ತಮ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments