ವಿಂಟೇಜ್ ಹ್ಯಾಂಡ್ ಲೂಮ್ ಸೀರೆಗಳ ಫ್ಯಾಶನ್ ಶೋ

ಇದೊಂದು ಅಪರೂಪದ ಫ್ಯಾಶನ್ ವಾಕ್ , ಹ್ಯಾಂಡ್ಲೂಮ್ ಸೀರೆಗಳನ್ನು ಜನಪ್ರಿಯಗೊಳಿಸಬೇಕೆಂಬ ಕಾಳಜಿಯಿಂದ ನಡೆದ ಫ್ಯಾಶನ್ ಶೋ ಇದಾಗಿತ್ತು. ಇಲ್ಲಿ ಹೊಸ ಸೀರೆಯ ಜೊತೆಗೆ 45 ವರ್ಷಗಳ ಹಳೆಯ ಸೀರೆಯೊಂದಿಗೆ ನೀರೆಯರು ರ್‍ಯಾಂಪ್ ವಾಕ್ ಮಾಡಿ ಗಮನ ಸೆಳೆದರು.

Fashion Show of Vintage Hand Loom Sarees

ರಾಷ್ಟ್ರೀಯ ಕೈಮಗ್ಗ ಸಪ್ತಾಹದ ಅಂಗವಾಗಿ ನೇಕಾರ ಸಮುದಾಯವನ್ನು ಬೆಂಬಲಿಸುವ ಸಲುವಾಗಿ ಈ ಫ್ಯಾಶನ್ ಶೋ ಕಾರ್ಯಕ್ರಮವನ್ನು ರೇಣುಕಾ ಪ್ರಕಾಶ್ ಗೌಡ ಅವರ ನೇತೃತ್ವದ “ಸಿಕ್ಸ್ ಯಾರ್ಡ್ಸ್ ಲವ್” ಸೀರೆ ಪ್ರೀಯರ ಬಳಗ ಬೆಂಗಳೂರಿನಲ್ಲಿ ಆಯೋಜಿಸಿತ್ತು.

19 ವರ್ಷದಿಂದ 60 ವರ್ಷದ ವಯೋಮಾನದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ಈ ಫ್ಯಾಶನ್ ವಾಕ್‍ನಲ್ಲಿ ಭಾಗವಹಿಸಿ ಕೈಮಗ್ಗದ ಸೀರೆಗಳನ್ನು ಪ್ರದರ್ಶಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕøತ ವೈದ್ಯೆ ಡಾ.ಪದ್ಮಾಕ್ಷಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಿಕ್ಸ್ ಯಾರ್ಡ್ಸ್ ಲವ್ ಬಳಗದ ಬ್ಯಾಡ್ಜ್ ಬಿಡುಗಡೆಗೊಳಿಸಿ ರ್ಯಾಂಪ್ ವಾಕ್ ಮಾಡಿದರು.

Fashion Show of Vintage Hand Loom Sarees

ವಿಂಟೇಜ್ ಹ್ಯಾಂಡ್ಲೂಮ್ ಸೀರೆಯೊಂದಿಗೆ ವಾಕ್ ಮಾಡಿದ ಪ್ರತಿ ರೂಪದರ್ಶಿಯವರ ಸೀರೆಯು ಒಂದೊಂದು ಪರಂಪರೆಯನ್ನು ಬಿಂಬಿಸಿತ್ತು. 20 ವರ್ಷ ಹಳೆಯದ್ದು, 30 ವರ್ಷ ಹಳೆಯದ್ದು, 45 ವರ್ಷ ಹಳೆಯ ಸೀರೆಯೊಂದಿಗೆ ರೂಪದರ್ಶಿಯವರು ರ್‍ಯಾಂಪ್ ನಲ್ಲಿ ಮಿಂಚಿದರು. ಇಷ್ಟೊಂದು ಹಳೆಯ ಸೀರೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಸೀರೆಯನ್ನು ನೇಯ್ದ ನೇಕಾರರ ಕೈ ಕಸೂತಿಯ ಸೂಕ್ಷ್ಮತೆಯನ್ನು ಈ ಫ್ಯಾಶನ್ ಶೋ ಅನಾವರಣಗೊಳಿಸಿತು.

ಪಟ್ಟೆದ ಅಂಚು, ಇಳಕಲ್ ಸೀರೆ, ಕೊತ್ಪಾದ್ , ಬುಜೋಡಿ ಸೇರಿದಂತೆ ನಾನಾ ಹ್ಯಾಂಡ್ ಲೂಮ್ ಸೀರೆಗಳಲ್ಲಿ ಮಾನಿನಿಯರು ವಾಕ್ ಜೊತೆಗೆ ಡ್ಯಾನ್ಸ್ , ಹಾಡು ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದಿತು. ರ್ಯಾಂಪ್ ವಾಕ್ ನಡೆದ ವೇದಿಕೆಯ ಶೃಂಗಾರಕ್ಕೆ ಯಾವುದೇ ಕೃತಕ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಕೈ ಮಗ್ಗದ ವಸ್ತ್ರಗಳನ್ನೇ ಬಳಸುವ ಮೂಲಕ ಪರಿಸರ ಕಾಳಜಿಯನ್ನು ಪ್ರಸ್ತುತಿಪಡಿಸಲಾಯಿತು.

Fashion Show of Vintage Hand Loom Sarees

ದೇಶಿ ಉತ್ಪನ್ನಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಮಹಿಳೆಯರು ಹ್ಯಾಂಡ್ಲೂಮ್ ಸೀರೆಗಳನ್ನು ಖರೀದಿ ಮಾಡಬೇಕು , ಆ ಮೂಲಕ ನಮ್ಮ ನಾಡಿನ ನೇಕಾರರ ಪರಿಶ್ರಮಕ್ಕೆ ಗೌರವ ಕೊಡಬೇಕು ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ಪದ್ಮಾಕ್ಷಿ ಅವರು ಅಭಿಪ್ರಾಯಪಟ್ಟರು.

ವಿಂಟೇಜ್ ಹ್ಯಾಂಡ್ ಲೂಮ್ ಸೀರೆಗಳ ಫ್ಯಾಶನ್ ಶೋಗೆ ಅವಕಾಶ ಕಲ್ಪಿಸಿದ ರೇಣುಕಾ ಪ್ರಕಾಶ್ ಗೌಡ ಅವರ ಕಾಳಜಿಯನ್ನು ಎಲ್ಲಾ ರೂಪದರ್ಶಿಗಳು ಅಭಿನಂದಿಸಿದರು. “ಸಿಕ್ಸ್ ಯಾರ್ಡ್ಸ್ ಲವ್” ಸೀರೆ ಬಳಗವು ಮಹಿಳೆಯರು ಎಲ್ಲಾ ಕಾರ್ಯಕ್ರಮ, ಸಂದರ್ಭಗಳಲ್ಲೂ ಸೀರೆಯನ್ನು ಬಳಸುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ರೇಣುಕಾ ಪ್ರಕಾಶ್ ಗೌಡ ಅವರು ಇತ್ತೀಚೆಗೆ ಪ್ರರ್ವಧಮಾನಕ್ಕೆ ಬಂದ ಉಡುಪಿ ಸೀರೆಯ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆ ಮೂಲಕ ನೇಕಾರರು ನೇಯಿಯುವ ಉಡುಪಿ ಸೀರೆಗೂ ಜನಪ್ರಿಯತೆ ತರಲು ಶ್ರಮಿಸುತ್ತಿದ್ದಾರೆ.

Related Posts

Leave a Reply

Your email address will not be published.