ಮುಂಡಾಲ ಸಮಾಜ ಸೇವಾ ಟ್ರಸ್ಟ್ ರಚನೆ

ಹತ್ತನೇ ತೋಕೂರು ಗ್ರಾಮದ ಶ್ರೀ ಓಂಕಾರೇಶ್ವರೀ ನಗರದಲ್ಲಿ ಮುಂಡಾಳ ಸಮಾಜ ಸಂಘಟನೆ ಹಾಗೂ ಸಮಾಜಭವನದ ಕಟ್ಟಡ ರಚನೆ ಬಗ್ಗೆ ಮುಲ್ಕಿ ಹೋಬಳಿ ಒಂಬತ್ತು ಮಾಗಣೆಯ ಎಲ್ಲಾ ಮುಂಡಾಲ ಧಾರ್ಮಿಕ ಮುಖಂಡರ ಸಾಮಾಜಿಕ ಮುಂದಾಳುಗಳ ಸಭೆಯು ಶ್ರೀ ಓಂಕಾರೇಶ್ವರೀ ಮಂದಿರದ ಅಧ್ಯಕ್ಷರಾದ ಶ್ರೀ ಸದಾಶಿವ ಕುಂದರ್ ರವರ ಅಧ್ಯಕ್ಷತೆಯಲ್ಲಿ ನಡೆದು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗುವಂತೆ ಮೂಲ್ಕಿ ಹೋಬಳಿಯ ಮುಂಡಾಲ ಸಮಾಜ ಸೇವಾ ಟ್ರಸ್ಟನ್ನು ರಚಿಸಲಾಯಿತು.
ಟ್ರಸ್ಟ್ ನ ಅಧ್ಯಕ್ಷರಾಗಿ ಸದಾಶಿವ ಕುಂದರ್ ರವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶಂಕರ ಮಾಸ್ಟರ್ ಗೋಳಿಜೋರ, ಪ್ರಧಾನ ಕಾರ್ಯದರ್ಶಿಯಾಗಿ ಹಿಮಕರ ಓಂಕಾರೇಶ್ವರಿ ನಗರ

ಜೊತೆ ಕಾರ್ಯದರ್ಶಿಯಾಗಿ ಶ್ರೀ ರಾಮನಂದ ಕೆ. ಕೋಶಾಧಿಕಾರಿಯಾಗಿ ಧನರಾಜ್ ಪಕ್ಷಿಕೆರೆ ಲೆಕ್ಕಪರಿಶೋಧಕರಾಗಿ ಉಮೇಶ್ ಬೊಳ್ಳೂರು ಇವರೊಂದಿಗೆ ಆಡಳಿತ ಮಂಡಳಿಯ ಟ್ರಸ್ಟಿಗಳಾಗಿ ಶಿವರಾಂ ಮುಲ್ಕಿ ,ಲೋಕೇಶ್ ಚಿತ್ರಾಪು, ಶ್ರೀಧರ ಕೆಮ್ರಾಲ್, ಸಂಜೀವ ಕರ್ಕೇರ ಓಂಕಾರೇಶ್ವ ರೀ ನಗರ, ನಾಗೇಶ್ ಆಳ್ವಉಡುಪಿ, ಹರೀಶ್ ಕೊಲಕಾಡಿ,ಅನಿಲ್ ಯಾನೆ ಸೀತಾರಾಮ ಓಂಕಾರೇಶ್ವರಿ ನಗರ ಯವರನ್ನು ಆಯ್ಕೆ ಮಾಡಲಾಯಿತು.

ಹಾಗೂ ಸಮಿತಿ ಸದಸ್ಯರಾಗಿ ಕಮಲಾಕ್ಷಿ ಕಕ್ವ, ರಾಮಚಂದ್ರ ಉಳೆಪಾಡಿ,ಸುರೇಶ್ ಕೊಲಕಾಡಿ ಚಂದ್ರಶೇಖರ ಗೋಳಿಜೋರ,
ವಾಸು ಅಂಚನ್ ಓಂಕಾರೇಶ್ವರಿ ನಗರ, ಶೇಷಪ್ಪ ಸಾಲಿಯಾನ್ ಪಂಜ, ಗೌರೀಶ ಸಾಲಿಯಾನ್ ಓಂಕಾರೇಶ್ವರೀ ನಗರ, ಸೀತಾರಾಮ ಸಾಲಿಯಾನ್ ಓಂಕಾರೇಶ್ವರಿ ನಗರ, ಬಾಲರಾಜ್ ಅಂಚನ್ ಓಂಕಾರೇಶ್ವರಿ ನಗರ ಶ್ರೀಮತಿ ಬೇಬಿ ಕಿಶೋರಿ ಗೋಪಾಲಕೃಷ್ಣ ಕೊಯಿಕುಡೆ,
ಶ್ರೀಮತಿ ಯಶೋಧ ಮದ್ಯ, ಶ್ರೀಮತಿ ವಸಂತಿ ಹಳೆಯಂಗಡಿ,ಕುಮಾರಿ ಸುಜಾತ ಹಳೆಯಂಗಡಿ, ಚಂದ್ರಹಾಸ ಕೊಳುವೈಲು, ವಿನೋದ್ ಆಳ್ವ ಮಧ್ಯರವರನ್ನು ಆಯ್ಕೆ ಮಾಡಲಾಯಿತು.ಸಭಾ ಕಾರ್ಯಕ್ರಮವನ್ನು ರಮಾನಂದ. ಕೆ .ರವರು ನಿರೂಪಿಸಿದರು ಹಾಗೂ ಕೊನೆಯಲ್ಲಿ ಶ್ರೀ ಹಿಮಕರ್ ರವರು ವಂದನಾರ್ಪಣೆ ಗೈದರು