ತಮಂದತೆಯನ್ನು ಹೊಡೆದೋಡಿಸುವ ದೀಪದಂತೆ ವಿದ್ಯೆ: ಕಮಲಾದೇವಿ ಪ್ರಸಾದ ಅಸ್ರಣ್ಣ

ವಿದ್ಯೆ ಎನ್ನುವುದು ಅಭಿನಾಷಿಯಾದದ್ದು ವಿದ್ಯೆ ನಮ್ಮ ಬದುಕಿಗೆ ಕವಿದಿರುವ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡುತ್ತದೆ ಇಂತಹ ಉತ್ತಮ ಕೆಲಸವನ್ನು ಆಕಾಂಕ್ಷಿಗಳ ತಂಡ ಮಾಡುತ್ತಿದೆ.ಅಂಚೆ ಇಲಾಖೆಯ ಪದೋನ್ನತಿ ಪರೀಕ್ಷೆಗಳಿಗಾಗಿ ಆಯೋಜಿಸಿದ ಉಚಿತ ತರಬೇತಿ ಶಿಬಿರ ಶ್ಲಾಘನೀಯ. ವಿದ್ಯೆ ಕಲಿತಷ್ಟು ಮುಗಿಯದೇ ಇರುವಂಥದ್ದು. ಇಲಾಖೆಯೊಳಗೆ ಪದೋನ್ನತಿಯನ್ನು ಹೊಂದಿ ಉತ್ತಮ ಪದವಿಯನ್ನು ಏರುವುದಕ್ಕೆ ಈ ಒಂದು ಉಚಿತ ತರಬೇತಿ ಶಿಬಿರ ಕಾರಣವಾಗುತ್ತದೆ.ತಾಯಿ ದುರ್ಗಾದೇವಿ ವಿದ್ಯೆಗೆ ಸರಸ್ವತಿಯಾಗಿ ಮನೋ ಇಚ್ಛೆಯನ್ನು ಈಡೇರಿಸುವ ದುರ್ಗೆಯಾಗಿ ನಿಮ್ಮನ್ನು ಕಾಯಲಿ ಎಂದು ಕಟೀಲು ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ ಅಂಚೆ ಇಲಾಖೆಯ ಪದೋನ್ನತಿ ಪರೀಕ್ಷೆಗಳಿಗಾಗಿ ನಡೆಸಿದ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನಗೈದರು. ಕಟೀಲು ಕ್ಷೇತ್ರದಿಂದ ಪೂರ್ಣ ರೀತಿಯ ಸಹಕಾರ ನಿಮಗಿದೆ ಎಂದರು.

ವಿದ್ಯಾಲಯದ ಉಪಪ್ರಾಂಶುಪಾಲರು ರಾಜಶೇಖರ್ ಎನ್ ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮ ಆಕಾಂಕ್ಷಿಗಳ ತಂಡ ಕೇವಲ ಶಿಬಿರವನ್ನು ನಡೆಸುವುದು ಮಾತ್ರವಲ್ಲ ಇದರಲ್ಲಿ ತಾವೇ ಸ್ವಇಚ್ಛೆಯಿಂದ ಸಂಗ್ರಹಿಸಿದ ಉಳಿದ ಮೊತ್ತವನ್ನು ವಿದ್ಯಾದಾನವಾಗಿ ನಮ್ಮ ಸಂಸ್ಥೆಗೆ ನೀಡಿರುವುದು ಇವರ ವೈಶಾಲ್ಯತೆಯನ್ನು ತೋರಿಸುತ್ತದೆ. ಪರೀಕ್ಷಾರ್ಥಿಗಳು ಪರಿಪೂರ್ಣವಾಗಿ ಇದರ ಸದುಪಯೋಗವನ್ನು ಪಡೆದು ಉನ್ನತ ಸ್ಥಾನವನ್ನು ಏರಬೇಕು ಎಂದು ಹಾರೈಸಿದರು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಿಥುನ ಉಡುಪ, ತರಬೇತುದಾರರಾದ ವೀರೇಶ್ ಅಕೌಂಟೆಂಟ್ ಪ್ರಧಾನ ಅಂಚೆ ಕಛೇರಿ ಹುಬ್ಬಳ್ಳಿ , ಧನಂಜಯ ಎಂ ಗೌಡ ಅಂಚೆ ನಿರೀಕ್ಷಕರು ಸಾಗರ, ಸಂತೋಷ್ ಸಹಾಯಕ ಅಂಚೆ ಪಾಲಕರು ಹುಬ್ಬಳ್ಳಿ ಹಾಗೂ ಆಕಾಂಕ್ಷಿ ತಂಡದ ಸದಸ್ಯರು ಉಪಸ್ಥಿತರಿದ್ದರು.ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಭಾಷ್ ಪಿ ಸಾಲಿಯನ್ ಸ್ವಾಗತಿಸಿದರು ದಯಾನಂದ ಜಿ ಕತ್ತಲ್ ಸಾರ್ ನಿರೂಪಿಸಿದರು.
