ಹಂಪ ನಾಗರಾಜಯ್ಯರಿಗೆ ಗೌರವ:ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ

ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಆವರಣದಲ್ಲಿ ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಅವರಿಗೆ ಗೋವಿಂದ ಪೈ ಸಂಶೋಧನಾ ಪ್ರಶಸ್ತಿ ಸಂದಿತು.
ಅರುವತ್ತು ವರುಷಗಳ ಹಿಂದೆ ಗೋವಿಂದ ಪೈಗಳ ಗ್ರಂಥ ಭಂಡಾರವನ್ನು ಎಂಜಿಎಂ ಕಾಲೇಜಿಗೆ ತಂದು ಅವರ ಹೆಸರಿನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿತ್ತು. ಅಲ್ಲಿನ ಹಲವು ಸಂಶೋಧನೆಗಳ ನಡುವೆ ಪೈಗಳ ಕೃತಿ ಸಂಪುಟವನ್ನು ಸಹ ತರಲಾಗಿತ್ತು. ಇಂದು ಎರಡನೆಯ ಸಂಪುಟ ಬಿಡುಗಡೆ ಆಯಿತು. ಈ ಸಂದರ್ಭದಲ್ಲಿ ಹಂಪನಾ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.ತಾಳ್ತಜೆ ವಸಂತಕುಮಾರ್, ಬಿ. ಎ. ವಿವೇಕ ರೈ, ಎಚ್. ಎಸ್. ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.