HomeFresh Newsಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆ

ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆಯಾಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರ ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು. ಇಂದು ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಭಾರೀ ನಾಟಕೀಯ ತಿರುವು ಪಡೆದು ಹರೀಶ್ ಇಂಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ಕಾಂಗ್ರೆಸ್ ಜಿಲ್ಲಾ ನೇತೃತ್ವ ಸೂಚಿಸಿತ್ತು. ಆದರೆ ಇಂದು ನಡೆದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಅದಕ್ಕೆ ಒಮ್ಮತ ಮೂಡಿ ಬಂದಿಲ್ಲ. ನಿನ್ನೆ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಹೇಶ್ ಕುಮಾರ್ ಕರಿಕ್ಕಳ ಅವರ ಹೆಸರನ್ನು ಅಧ್ಯಕ್ಷತೆಗೆ ಹೈಕಮಾಂಡ್ ಸೂಚಿಸಿತ್ತು. ಆದರೆ ಇಂದು ಇದಕ್ಕೆ ಒಮ್ಮತ‌ ಮೂಡಿ ಬರಲಿಲ್ಲ. ಅಧ್ಯಕ್ಷತೆಗೆ ಹರೀಶ್ ಇಂಜಾಡಿ ಸ್ಪರ್ಧೆ ನಡೆಸಲು ಮುಂದಾದರು. ಅಧ್ಯಕ್ಷ ಆಕಾಂಕ್ಷಿಗಳ ಮಧ್ಯೆ ಹಲವು ಸುತ್ತಿನ ಸಮಾಲೋಚನೆ ನಡೆದರೂ ಒಮ್ಮತ ಮೂಡಿ ಬರಲಿಲ್ಲ.

ಈ ಹಿನ್ನೆಲೆಯಲ್ಲಿ ನೇಮಕಗೊಂಡ ಸದಸ್ಯರ ಮಧ್ಯೆ ಹಲವು ಸುತ್ತಿನ ಸಮಾಲೋಚನೆ ನಡೆದರೂ ಒಮ್ಮತ ಮೂಡಿ ಬರಲಿಲ್ಲ. ಈ ಮಧ್ಯೆ ಪಕ್ಷದ ಜಿಲ್ಲಾ ನೇತೃತ್ವ ಆಕಾಂಕ್ಷಿಗಳನ್ನು ಸಂಪರ್ಕಿಸಿ ಮನವೊಲಿಸುವ ಕಾರ್ಯ ಮಾಡಿದರೂ ಫಲಕಾರಿಯಾಗಲಿಲ್ಲ.ಒಮ್ಮತ ಮೂಡಿ ಬಾರದ ಹಿನ್ನಲೆಯಲ್ಲಿ ಮಹೇಶ್ ಕುಮಾರ್ ಕರಿಕ್ಕಳ ಸಭೆಯಿಂದ ಹೊರ ನಡೆರು.


ಬಳಿಕ ಚುನಾವಣಾ ಪ್ರಕ್ರಿಯೆ ನಡೆಯಿತು.‌ ಹರೀಶ್ ಇಂಜಾಡಿಯವರ ಹೆಸರನ್ನು ಸೌಮ್ಯ ಸೂಚಿಸಿ ಡಾ. ರಘು ಅನುಮೋದಿಸಿದರೆಂದು ತಿಳಿದುಬಂದಿದೆ. ಕಾಂಗ್ರೆಸ್ ಜಿಲ್ಲಾ ನೇತೃತ್ವ ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ಅಧ್ಯಕ್ಷತೆಗೆ ಸೂಚಿಸಿದರೂ ಇಂದು ಸಭೆ ನಡೆದಾಗ ಅಧ್ಯಕ್ಷತೆಗೆ ಆಕಾಂಕ್ಚಿಗಳು ಸ್ಪರ್ಧೆಗೆ ಮುಂದಾದ ಕಾರಣ ಇಂದು ಬೆಳಿಗ್ಗಿನಿಂದಲೇ ಕುಕ್ಕೆ ದೇವಸ್ಥಾನದ ಅಧ್ಯಕ್ಷರ ಆಯ್ಕೆ ತೀವ್ರ ಕುತೂಹಲ ಕೆರಳಿಸಿತ್ತು.

add - rai's kitchen
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments