ಹರಿತ್ ಯೋಗ – ಯೋಗ ಹಾಗು ಪರಿಸರದ ಸಂಯೋಗ ಕಾರ್ಯಕ್ರಮ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 13.06.2025 ರಂದು ವಿಶ್ವ ಯೋಗ ದಿನದ ಅಂಗವಾಗಿ ಹರಿತ್ ಯೋಗ – ಯೋಗ ಹಾಗು ಪರಿಸರದ ಸಂಯೋಗ ಕಾರ್ಯಕ್ರಮವನ್ನು ಸೋಣoಗೇರಿಯಲ್ಲಿರುವ ಕೆ ವಿ ಜಿ ಆಯುರ್ವೇದ ಮೂಲಿಕಾ ಉದ್ಯಾನವನದಲ್ಲಿ ಕಾಲೇಜಿನ ದ್ರವ್ಯಗುಣ, ಸ್ವಸ್ಥವೃತ್ತ ವಿಭಾಗ ಹಾಗು ಎನ್ ಎಸ್ ಎಸ್ ವಿಭಾಗದ ಸಹಭಾಗಿತ್ವದಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮಲ್ಲಿ ಕಾಲೇಜಿನ ದ್ರವ್ಯಗುಣ, ಸ್ವಸ್ಥವೃತ್ತ ವಿಭಾಗದ ಪ್ರಾಧ್ಯಾಪಕರು, ಎನ್ ಎಸ್ ಎಸ್ ಯೋಜನಾಧಿಕಾರಿ ಹಾಗು ಎನ್ ಎಸ್ ಎಸ್ ವಿದ್ಯಾರ್ಥಿಗಳು 50ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ನೆಡುವುದರೊಂದಿಗೆ ಕಾರ್ಯಕ್ರಮವನ್ನು ನಡೆಸಿದರು.

ಕಾರ್ಯಕ್ರಮದ ನಂತರ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಕಾಲೇಜಿನಲ್ಲಿ ಯೋಗಾಭ್ಯಾಸ ನಡೆಯಿತು.

Related Posts

Leave a Reply

Your email address will not be published.