ಹೆಜಮಾಡಿ : ಟೋಲ್ ವಿನಾಯಿತಿ ಮುಂದುವರಿಸುವಂತೆ ಒತ್ತಾಯ- ವಿವಿಧ ಸಂಘಟನೆಗಳಿಂದ ಟೋಲ್ ಪ್ಲಾಜಾ ಅಧಿಕಾರಿಗೆ ಮನವಿ

ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡುತ್ತಿದ್ದ ವಿನಾಯಿತಿಯನ್ನು ಏಕಾಏಕಿಯಾಗಿ ರದ್ದುಗೊಳಿಸುವ ಹುನ್ನಾರ ನಡೆಸುತ್ತಿರುವುದನ್ನು ಮನಗಂಡ. ಹೆಜಮಾಡಿ ಟೋಲ್ ಹೋರಾಟ ಸಮಿತಿ, ವಿನಾಯಿತಿ ಮುಂದುವರಿಸುವಂತ್ತೆ ಒತ್ತಾಯಿಸಿ ವಿವಿಧ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಟೋಲ್ ಅಧಿಕಾರಿಗೆ ಮನವಿ ಹಸ್ತಾಂತರಿಸಿದ್ದು, ನಮ್ಮ ಮನವಿಗೆ ಮಾನ್ಯತೆ ನೀಡದೆ ಇದ್ದಲ್ಲಿ ಉಗ್ರಹೋರಾಟ ನಡೆಸುವ ಎಚ್ಚರಿಕೆನ್ನು ಹೋರಾಟ ಸಮಿತಿ ನೀಡಿದೆ.
ನೂರಕ್ಕೂ ಅಧಿಕ ಮಂದಿ ಸೇರಿಕೊಂಡು ಕಾಲ್ನಡಿಗೆಯಲ್ಲಿ ಸಾಗಿದ ಹೋರಾಟಗಾರರ ಮನವಿ ಸ್ವೀಕರಿಸಲು ಪೊಲೀಸ್ ರಕ್ಷಣೆಯಲ್ಲಿ ಬಂದ ಹೆಜಮಾಡಿ ಟೋಲ್ ಪ್ರಭಂದಕ ತಿಮ್ಮಯ್ಯ ಎಂಬಾತನನ್ನು ಹೋರಾಟಗಾರರು ಹಿಗ್ಗಾಮುಗ್ಗಾ ಮಾತಿನೇಟು ನೀಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.


ಈ ಹಿಂದಿನ ನವಯುಗ್ ಕಂಪನಿ ಕಾರ್ಯಚರಿಸುತ್ತಿದ್ದ ವೇಳೆ ಸ್ಥಳೀಯರಿಗೆ ನೀಡುತ್ತಿದ್ದ ವಿನಾಯಿತಿ ಏಕಾಏಕಿ ನಿಮ್ಮ ಹೊಸ ಕಂಪನಿ ಬಂದ ಮೇಲೆ ರದ್ದು ಮಾಡುವ ಹುನ್ನಾರವೇಕೆ..? ಕದ್ದು ಮುಚ್ಚಿ ಪಾಸ್ಟ್ ಟ್ಯಾಗ್ ನಲ್ಲಿ ಹಣ ಎಗರಿಸುವ ಔಚಿತ್ಯವೇನು..? ಹೆದ್ದಾರಿ ನಿರ್ಮಾಣಕ್ಕೆ ಆದ ವೆಚ್ಚವೆಷ್ಟು..? ಎಷ್ಟು ವರ್ಷಗಳ ಕಾಲ ಟೋಲ್ ಸಂಗ್ರಹ ನಡೆಸುವ ಒಡಂಬಡಿಕೆ ಆಗಿದೆ. ಟೋಲ್ ಪ್ಲಾಜಾದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಅತಿಯಾಗಿದೆ ಎಂಬ ಮಾಹಿತಿ ಇದ್ದು, ಯಾವುದೆಲ್ಲಾ ಸೌಕರ್ಯಗಳು ಸಕ್ರಿವಾಗಿದೆ..? ಸಿಬ್ಬಂದಿಗಳ ಕೊರತೆ ನೀಗಿಸದಿರಲು ಕಾರಣವೇನು.? ಎಂಬೆಲ್ಲಾ ಹೋರಾಟಗಾರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಅಧಿಕಾರಿ ಮುಂದಿನ ದಿನದಲ್ಲಿ ಜನಪ್ರತಿನಿಧಿಗಳು, ಟೋಲ್ ಮುಖ್ಯಸ್ಥರು ಸಹಿತ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು, ಆ ಸಭೆಯ ನಿರ್ಣಯದಂತೆ ಮುನ್ನಡೆಯಲಿದೆ ಎಂಬುದಾಗಿ ಹೋರಾಟಗಾರರ ಕೆಂಗ್ಗಣ್ಣಿನಿಂದ ಜಾರಿಕೊಂಡಿದ್ದಾರೆ.


ಈ ಸಂದರ್ಭ ಹೆಜಮಾಡಿ ಟೋಲ್ ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ, ಮಾಜಿ ಅಧ್ಯಕ್ಷ ಗುಲಾಂ ಮೊಹಮ್ಮದ್ ಹೆಜಮಾಡಿ, ಹೋರಾಟ ಪ್ರಮುಖರಾದ ಶೇಖಬ್ಬ ಕೋಟೆ, ಸಂತೋಷ್ ಕುಮಾರ್ ಪಡುಬಿದ್ರಿ, ನವೀನ್ ಚಂದ್ರ ಶೆಟ್ಟಿ, ವೈ.ಸುಕುಮಾರ್, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ಅಮೀನ್, ಸುಧಾಕರ ಶೆಟ್ಟಿ, ರವಿ ಕುಂದರ್, ರೇಷ್ಮಾ ಮೆಂಡನ್, ಶಶಿಕಲಾ, ಸೈಯ್ಯದ್ ನಿಝಾಮ್, ದಿನೇಶ್ ಪಲಿಮಾರು, ಮಧು ಆಚಾರ್ಯ, ಅಬ್ದುಲ್ ಅಜೀಜ್, ಪಾಂಡುರಂಗ ಕರ್ಕೇರ, ಲೋಕೇಶ್ ಪೂಜಾರಿ, ಪ್ರಾಣೇಶ್ ಹೆಜಮಾಡಿ, ತೇಜ್ ಪಾಲ್, ನಿತಿನ್ ಹೆಜಮಾಡಿ ಮುಂತಾದವರಿದ್ದರು. ಬಂದೋಬಸ್ತ್ ವ್ಯವಸ್ಥೆಯನ್ನು ಪಡುಬಿದ್ರಿ ಪೊಲೀಸರು ನಿರ್ವಾಹಿಸಿದ್ದರು.

Related Posts

Leave a Reply

Your email address will not be published.