HomeFresh Newsಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಕಾಮಗಾರಿ ಉದ್ಘಾಟನೆ

ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಕಾಮಗಾರಿ ಉದ್ಘಾಟನೆ

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3 ಕೋಟಿ 75 ಲಕ್ಷ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಪಟ್ಟ ಬಳಿಯ ನಡಿದಂಡೆ ಸಂರಕ್ಷಣೆ – 2 ಕೋಟಿ, ಪರಪಟ್ಟ – ನದಿಕುದ್ರು ರಸ್ತೆಯ ಕಾಂಕ್ರೀಟಿಕರಣ – 40 ಲಕ್ಷ, ಗುಂಡಿ ರಸ್ತೆ ಕಾಂಕ್ರೀಟಿಕರಣ -50 ಲಕ್ಷ, ಕೂಪ್ಪಳ ರಸ್ತೆ ಕಾಂಕ್ರೀಟಿಕರಣ – 40 ಲಕ್ಷ, ಬ್ರಹ್ಮಾಸ್ಥಾನ ರಸ್ತೆ ಕಾಂಕ್ರೀಟಿಕರಣ – 40 ಲಕ್ಷ, ನದಿಕುದ್ರು ಜಾರಂದಾಯ ದೈವಸ್ಥಾನದ ಬಳಿಯ ರಸ್ತೆ ಕಾಂಕ್ರೀಟೀಕರಣ – 5 ಲಕ್ಷ ಸೇರಿದಂತೆ ಒಟ್ಟು 3 ಕೋಟಿ 75 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಯ ಉದ್ಘಾಟನೆ ನೆರವೇರಿಸಲಾಯಿತು.

ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ, ಹೆಜಮಾಡಿ ಪಂಚಾಯತ್ ಸದಸ್ಯರುಗಳಾದ ಶರಣ್ ಕುಮಾರ್ ಮಟ್ಟು, ಪ್ರಸಾದ್ ಹೆಜಮಾಡಿ, ಜನಾರ್ಧನ್ ಹೆಜಮಾಡಿ, ಪ್ರಾಣೇಶ್ ಹೆಜಮಾಡಿ, ಮೋಹನ್ ಸುವರ್ಣ, ಸುಜಾತ, ನಳಿನಿ, ರೇಷ್ಮಾ, ಬಬಿತಾ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಸಚಿನ್ ಜಿ ನಾಯಕ್, ಶಕ್ತಿಕೇಂದ್ರ ಯುವ ಮೋರ್ಚಾದ ಕೀರ್ತನ್ ಪೂಜಾರಿ, ಕಾರ್ಯಕರ್ತರಾದ ಚಂದ್ರಹಾಸ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments