ಬಾರಕೂರಿನಲ್ಲಿ ಸರಣಿ ಕಳ್ಳತನ : ಪೆಟ್ರೋಲ್ ಬಂಕ್, ಟಯರ್ ಅಂಗಡಿ, ಹಾಲು ಅಂಗಡಿಗಳಲ್ಲಿ ನಗದು ಕಳವು

ಬಾರಕೂರು ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್, ಟಯರ್ ಅಂಗಡಿ, ಹಾಲು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಅಜಿತ್ ಕುಮಾರ್ ಶೆಟ್ಟಿಯವರ ಮಾಲಕತ್ವದ ಶ್ರೀ ಗಣೇಶ್ ಇಂಡಿಯನ್ ಆಯಿಲ್‍ನಲ್ಲಿ 8 ಸಿಸಿ ಕ್ಯಾಮರಾ ಇದ್ದು ಕಛೇರಿ ಹಿಂಭಾಗದಲ್ಲಿರುವ ಕ್ಯಾಮರಾಕ್ಕೆ ಸೊಪ್ಪು ಮತ್ತು ಬಟ್ಟೆ ಮುಚ್ಚಿ ಬಳಿಕ ಬೀಗವನ್ನು ಒಡೆದು ಕಪಾಟಿನಲ್ಲಿದ್ದ 20 ಸಾವಿರದಷ್ಟು ನಗದು, ಅಲ್ಲೇ ಪಕ್ಕದಲ್ಲಿದ್ದ ಟಯರ್ ಅಂಗಡಿಯ 3 ರಾಡ್, ನಂದಿನಿ ಹಾಲು ಅಂಗಡಿಯ ಬಾಗಿಲು ಮುರಿದು ನಗದು ಕಳವುಗೈದಿದ್ದಾರೆ. ಹಣದ ಜೊತೆ ಕ್ಯಾಮರಾದ ಮೆಮೋರಿ ಸೇವರ್‍ನ್ನು ಕೂಡಾ ಕೊಂಡು ಹೋಗಿದ್ದಾರೆ.

ಗಣೇಶ್ ಬಳೆಗಾರ ಮಾಲಕತ್ವದ ನಾಯಿರಾ ಟ್ರೋಲ್ ಬಂಕ್ ಮತ್ತು ಅಟೋ ಗ್ಯಾಸ್ ನಿಂದ ಕೂಡಾ ಸಿಸಿ ಕ್ಯಾಮರಾ ಮೆಮೋರಿ ಸೇವರ್‍ನ್ನು ಮತ್ತು ನಗದನ್ನು ದೋಚಿದ್ದಾರೆ. ಠಾಣಾಧಿಕಾರಿ ರಾಜಶೇಖರ್ ವಂದಲಿ ಸರಣಿ ಕಳ್ಳತನಗೈದ ಸ್ಥಳಗಳಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳರ ಜಾಡನ್ನು ಹಿಡಿಯಲು ಬಲೆ ಬೀಸಿದ್ದಾರೆ. ಬ್ರಹ್ಮಾವರ ಪೆÇಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published.