HomeFresh Newsಪಡುಬಿದ್ರಿ ಬಾಲಗಣಪತಿ ದೇವಸ್ಥಾನದಲ್ಲಿ ‘ಶ್ರೀ ಪಟ್ಟಾಭಿರಾಮ ಮಂಗಲಭವನ’ ಲೋಕಾರ್ಪಣೆ

ಪಡುಬಿದ್ರಿ ಬಾಲಗಣಪತಿ ದೇವಸ್ಥಾನದಲ್ಲಿ ‘ಶ್ರೀ ಪಟ್ಟಾಭಿರಾಮ ಮಂಗಲಭವನ’ ಲೋಕಾರ್ಪಣೆ

ಪಡುಬಿದ್ರಿ: ಶ್ರೀ ಬಾಲಗಣಪತಿ ಪ್ರಸನ್ನಪಾರ್ವತೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಶ್ರೀ ಪಟ್ಟಾಭಿರಾಮ ಮಂಗಲಭವನ’ ಹಾಗೂ ‘ಪ್ರಿಯಚಂದ್ರ ವೇದಿಕೆ’ಯ ಲೋಕಾರ್ಪಣಾ ಸಮಾರಂಭವು ಆಗಸ್ಟ್ 27ರಂದು ಗುರುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಹಾಗೂ ತತ್ಕರಕಮಲ ಸಂಜಾತರಾದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ಪರಮಾನುಗ್ರಹ ಮತ್ತು ಆಶೀರ್ವಾದಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗ್ಗೆ 6.30ರಿಂದ ಸ್ಥಳಶುದ್ಧಿ ಹಾಗೂ ಮಹಾಗಣಪತಿ ಹೋಮ, 8 ಗಂಟೆಯಿಂದ ಉಪಹಾರ, 8.30ರಿಂದ 9.15ರವರೆಗೆ ಭಜನೆ ನಡೆಯಲಿದೆ. ಬಳಿಕ ಬೆಳಗ್ಗೆ 9.30ರಿಂದ 11.30ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಂಘ, ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ರವೀಂದ್ರನಾಥ್ ರಾವ್ ಬೆಳ್ಳೆ ಅಧ್ಯಕ್ಷತೆ ವಹಿಸಲಿದ್ದಾರೆ.


ಶ್ರೀಮತಿ ಸುಪ್ರಿಯಾ ಮತ್ತು ಶ್ರೀ ಚಂದ್ರಕಾಂತ್ ರಾವ್, ಇನ್ನ ಅವರು ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಪಾವಂಜೆಯ ಬ್ರಹ್ಮಶ್ರೀ ವೇದಮೂರ್ತಿ ಎಸ್. ವಾಗೀಶ ಶಾಸ್ತ್ರಿ ಅವರು ಆಶೀರ್ವಚನ ನೀಡಲಿದ್ದಾರೆ. ಕಾಪು ಶಾಸಕ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.
ಗೌರವ ಉಪಸ್ಥಿತರಾಗಿ ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಶ್ರೀ ಮಂಜುನಾಥ ಹೆಬ್ಬಾರ್, ಸ್ಥಾನಿಕ ಬ್ರಾಹ್ಮಣ ಸಭಾ ಪಡುಬಿದ್ರಿಯ ಅಧ್ಯಕ್ಷ ಶ್ರೀ ಲಕ್ಷ್ಮೀಕಾಂತ ರಾವ್ ಇನ್ನ, ದೇವಸ್ಥಾನದ ಗೌರವಾಧ್ಯಕ್ಷ ಶ್ರೀ ರಘುವೀರ ರಾವ್, ಶ್ರೀ ಬಾಲಗಣಪತಿ ಪ್ರಸನ್ನಪಾರ್ವತೀ ದೇವಸ್ಥಾನದ ಅರ್ಚಕರು ಹಾಗೂ ಅನುವಂಶಿಕ ಮೊಕ್ತೇಸರರಾದ ಶ್ರೀ ಜಗದಭಿರಾಮ ಸ್ವಾಮಿ, ಗೌರವಾಧ್ಯಕ್ಷ ಶ್ರೀ ಎಂ.ಕೆ. ಮೋಹನ ರಾವ್, ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಡಾ. ವೈ.ಎನ್. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಶ್ರೀ ದೇವಾನಂದ ಭಟ್ ಬೆಳುವಾಯಿ, ಶ್ರೀ ಪಿ. ರಾಜನ್ ಮುಂಬೈ, ಪ್ರಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞ ಡಾ. ವೈ. ಸುದರ್ಶನ ರಾವ್,ಸ್ಥಾನಿಕ ಬ್ರಾಹ್ಮಣ ಸಮಾಜದ ಪ್ರಖ್ಯಾತ ಜ್ಯೋತಿಷ್ಯಗಳು, ಪಲಿಮಾರು ಶ್ರೀ ಕೆ.ವಿ. ರಾವ್, ನಂದಿಕೂರು ದೇವಿಕೃಪಾ ಏಜೆನ್ಸಿ ಶ್ರೀ ಜನಾರ್ದನ ರಾವ್ ನಂದಿಕೂರು, ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ಕೋಶಾಧಿಕಾರಿ ಶ್ರೀ ಶ್ರೀನಿವಾಸ ಶರ್ಮ,ಶ್ರೀ ಕ್ಷೇತ್ರ ಧರ್ಮಸ್ಥಳ ಕಾಪು ತಾಲೂಕು ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.


ಸಭಾ ಕಾರ್ಯಕ್ರಮದ ಬಳಿಕ 11.30ರಿಂದ ಮಧ್ಯಾಹ್ನ 1ರವರೆಗೆ ‘ಕೈಕೇಯಿ ವಿವಾಹ ಮಂಗಲೋತ್ಸವ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮವನ್ನು ಶ್ರೀ ಜಗದಭಿರಾಮ ಪಡುಬಿದ್ರಿ ಸಂಯೋಜಿಸಲಿದ್ದು, ಶ್ರೀಮತಿ ಶ್ರೇಯ ಮತ್ತು ಶ್ರೀ ಪುನೀತ್ ಎಸ್. ರಾವ್, ದೇವಿಕೃಪಾ ಏಜೆನ್ಸಿ, ನಂದಿಕೂರು ಪ್ರಾಯೋಜಕರಾಗಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರಮ್ಯ ಮತ್ತು ಶ್ರೀ ಅರುಣ್ ಕುಮಾರ್, ಮುಂಡೂರು ನೆರವೇರಿಸಲಿದ್ದಾರೆ.

ಸಮಾರಂಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ರಾವ್, ಪಾರುಪತ್ಯೆಗಾರರು, ಪಳ; ಶ್ರೀ ಸಿ.ಎಸ್. ರಾವ್, ಸ್ಥಾಪಕ ಅಧ್ಯಕ್ಷರು, ಸ್ಥಾನಿಕ ಬ್ರಾಹ್ಮಣ ಮಂಡಲ, ಮಂಗಳೂರು; ಶ್ರೀ ಚಂದ್ರಕಾಂತ ರಾವ್, ಇನ್ನ, ಮಾಜಿ ಅಧ್ಯಕ್ಷರು, ಸಿಂಗಾಪುರ ಓವರ್‌ಸೀಸ್ ಪಿಟಿಇ ಅಮಿಟೆಡ್; ಶ್ರೀ ಪಿ.ಡಿ. ಶೇಖರ್ ರಾವ್, ಅಧ್ಯಕ್ಷರು, ಶ್ರೀ ಬಾಲಗಣಪತಿ ಪ್ರಸನ್ನಪಾರ್ವತೀ ದೇವಸ್ಥಾನ ಅವರನ್ನು ಸನ್ಮಾನಿಸಲಾಗುವುದು.

ಶ್ರೀ ಗುರುದೇವತಾನುಗ್ರಹದಿಂದ ನೆರವೇರಲಿರುವ ಈ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವದ ಕಾರ್ಯಕ್ರಮಕ್ಕೆ ಭಕ್ತರು, ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments