HomeFresh Newsಇರಾ ಯುವಕ ಮಂಡಲ : ಸೌಹಾರ್ದತೆಗೆ ಸಾಕ್ಷಿಯಾದ ಈದ್‍ಮಿಲಾದ್ ಆಚರಣೆ

ಇರಾ ಯುವಕ ಮಂಡಲ : ಸೌಹಾರ್ದತೆಗೆ ಸಾಕ್ಷಿಯಾದ ಈದ್‍ಮಿಲಾದ್ ಆಚರಣೆ

ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನವಾದ ಇಂದು ಈದ್ ಮಿಲಾದ್ ಹಬ್ಬವಾಗಿ ಆಚರಿಸುತ್ತಿದ್ದು, ಇರಾದಲ್ಲಿಯೂ ಮುಸ್ಲಿಂ ಬಾಂಧವರು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಸೌಹಾರ್ದತೆಗೆ ಸಾಕ್ಷಿಯಾದ ಇರಾದ ಯುವಕ ಮಂಡಲ ಮತ್ತು ಸುವರ್ಣ ಮಹೋತ್ಸವ ಸಮಿತಿಯ ಸದಸ್ಯರು ಮಿಲಾದ್ ರ್ಯಾಲಿಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರಿಗೆ ಶುಭಾಶಯಕೋರಿದ್ದು, ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸಿದ್ದಾರೆ.

ಈ ಸಂದರ್ಭದಲ್ಲಿ ಇರಾ ಯುವಕ ಮಂಡಲದ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಕುಂಡಾವು, ಸಂಘಟನಾ ಕಾರ್ಯದರ್ಶಿ ರಮೇಶ್ ಪೂಜಾರಿ ಸಂಪಿಲ, ಕ್ರೀಡಾ ಕಾರ್ಯದರ್ಶಿ ಅಡ್ರಾಮ ಡಿ, ಸುವರ್ಣ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಪ್ರಸೀನ್ ಶೆಟ್ಟಿ ಆಚೆಬೈಲ್, ಸಂಚಾಲಕರಾದ ಸೂರ್ಯ ಪ್ರಕಾಶ್, ವಿಶಾಲ್ ಕೊಠಾರಿ, ನಾರಾಯಣ ಸೂತ್ರಬೈಲ್, ಮೊಹಮ್ಮದ್ ಇರಾ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments