ಜೆ.ಎಫ್. ಅಸೋಸಿಯೇಷನ್ ಬಜಾಲ್ ವತಿಯಿಂದ ಸ್ವಚ್ಛತಾ ಆಂದೋಲನ
ಮಂಗಳೂರು: ಜೆ.ಎಫ್. ಅಸೋಸಿಯೇಷನ್ ಬಜಾಲ್ ನಂತೂರು ಮಂಗಳೂರು ವತಿಯಿಂದ ಸ್ವಚ್ಛತಾ ಆಂದೋಲನ*ಜೆ.ಎಫ್. ಅಸೋಸಿಯೇಷನ್ ಅಧ್ಯಕ್ಷರಾದ ಅಹಮದ್ ಕುರೈಶ್ ರವರ ಮಾರ್ಗದರ್ಶನದಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.
ರಸ್ತೆ ಗುಡಿಸುವ ಮೂಲಕ ಉದ್ಘಾಟಿಸಿದ ಮ ನ ಪಾ ಸದಸ್ಯರು ಹಾಗೂ ಬದ್ರಿಯಾ ಜುಮ್ಮಾ ಮಸೀದಿ, ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಅಬ್ದುಲ್ ರವೂಫ್ ರವರು ಮಾತನಾಡಿ, ಆರೋಗ್ಯ ಮತ್ತು ಪರಿಸರ ಸ್ವಚ್ಚತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಿಸರ ಸ್ವಚ್ಚತೆ ಇರುವಲ್ಲಿ ಆರೋಗ್ಯ ಇರುತ್ತದೆ. ಶುಚಿತ್ವದ ಕೊರತೆ ಇದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜನಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಮಾತ್ರ ಅವರ ಜೀವನ ಮಟ್ಟ ಉತ್ತಮವಾಗಲು ಸಾಧ್ಯ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಶೇ. 80ರಷ್ಟು ಆರೋಗ್ಯದ ಸಮಸ್ಯೆಗಳು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ. ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿಂದಾಗಿ ನೈರ್ಮಲ್ಯ ಕೊರತೆ ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ.
ನಮ್ಮ ಉತ್ತಮ ಆರೋಗ್ಯ ಸಮಾಜಕ್ಕಾಗಿ ಸ್ವಚ್ಛತೆ ಎಂಬುದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಪರಿಸರದ ಸ್ವತ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಅಬ್ದುಲ್ ರವೂಫ್ ರವರು ವಿವರಿಸಿದರು.
ಸ್ವಚ್ಛತೆಯ ಅರಿಯುವೆಗಾಗಿ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಹಿತು, ಸ್ವಚ್ಛತಾ ಆಂದೋಲನ ಕಾರ್ಯದಲ್ಲಿ ಭಾಗವಹಿಸಿದ ಯುವಕರಿಗೆ ತಲೆಗೆ ಟೋಪಿ, ಟಿ ಶರ್ಟ್, ಕೈ ಗೆ ಗ್ಲೋಸ್, ಮುಖಕ್ಕೆ ಮಾಸ್ಕ್ ನೀಡಲಾಹಿತು.
ಸ್ಥಳೀಯ ಮ ನ ಪಾ ಸದಸ್ಯರಾದ ಅಶ್ರಫ್ ಕೆ ರವರು ಜೆ ಎಫ್ ಎ ಸಮಿತಿಯ ಅಧ್ಯಕ್ಷರಿಗೆ ಹಾಗೂ ಸದಸ್ಯರ ಈ ಕೆಲಸ ಸ್ಲಾಘನೀಯ ಎಂದು ಶುಭ ಹಾರೈಸಿದರು., ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಎಚ್ ಎಸ್ ಹನೀಫ್, ಸಂಚಾಲಕರಾದ ಬಿ ಪಕ್ರುದ್ದೀನ್, ನಝೀರ್ ಬಜಾಲ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಹಮ್ಮಬ್ಬ ಮೋನಕ, ಮೊಯಿದಿನ್ ಕುಂಜಿ, ಎನ್ ಎಸ್ ಆರ್ ನಾಸೀರ್, ಕಲಂದರ್, ಜೆ ಎಫ್ ಎ ಉಪಾಧ್ಯಕ್ಷರಾದ ಸೌಕತ್ ಇಬ್ರಾಹಿಂ, ಹನೀಫ್ ಕೆಳಗಿನ ಮನೆ, ಅನ್ವರ್ ಕಜಕಾಂಡ, ಅಬೂಬಕ್ಕರ್, ಎಂ ಮುಸ್ತಫಾ ಕಟ್ಟ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಜೆ ಎಫ್ ಎ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಕೀಝೆ ಸ್ವಾಗತಿಸಿದರು, ಸಜ್ಜದ್ ಕಾರ್ಯನಿರೂಪಣೆ ಗೈದರು.
ಉನೈಸ್ ವಂದಿಸಿದರು.