HomeFresh Newsಡಾ| ಐ.ಜೆ. ಮ್ಯಾಗೇರಿ ಅವರʼಜೈಲ್‌ ಡೈರಿʼಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

ಡಾ| ಐ.ಜೆ. ಮ್ಯಾಗೇರಿ ಅವರʼಜೈಲ್‌ ಡೈರಿʼಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ರ‍್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ರ‍್ಷ ಕೊಡಮಾಡುವ೨೦೨೪ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆಕೆಎಎಸ್‌ ಅಧಿಕಾರಿ, ಸಾಹಿತಿಡಾ. ಎ.ಜೆ. ಮ್ಯಾಗೇರಿಅವರʼಜೈಲ್‌ ಡೈರಿ (ಕೈದಿಗಳನೈಜಕಥನ)ʼಕೃತಿಆಯ್ಕೆಯಾಗಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದಇಮಾಮಸಾಬ್‌ ಜೀವನಸಾಬ್‌ ಮ್ಯಾಗೇರಿಧಾರವಾಡದ ರ‍್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದಿಂದಎಂ.ಎ. ಸ್ನಾತಕೋತ್ತರ ಪದವಿ ಪಡೆದು, ಹಂಪಿ ಕನ್ನಡ ವಿವಿಯಲ್ಲಿ ಎಂ.ಫಿಲ್.ಹಾಗೂ ‘ವಸಾಹತುಶಾಹಿ ಅನುಭವ ಹಾಗೂ ಕನ್ನಡ ಕಾದಂಬರಿಗಳು’ ವಿಷಯದ ಮೇಲೆ ಪಿಎಚ್‌ಡಿಮಾಡಿದ್ದಾರೆ.

೨೦೦೫ನೇಸಾಲಿನಲ್ಲಿ ಕೆಎಎಸ್ ಅಧಿಕಾರಿಯಾಗಿ ರ‍್ನಾಟಕ ಕಾರಾಗೃಹಗಳ ಇಲಾಖೆಯ ಸೇವೆಗೆ ಸೇರಿರುವಇವರುರ‍್ನಾಟಕದ ಅನೇಕಕಾರಾಗೃಹಗಳಲ್ಲಿರ‍್ತವ್ಯ ನರ‍್ವಹಿಸಿದ್ದಾರೆ.ಸದ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಅಧೀಕ್ಷಕರಾಗಿಸೇವೆಯಲ್ಲಿದ್ದಾರೆ.

೨೦೧೪ರಲ್ಲಿಭಾರತ ರ‍್ಕಾರದಿಂದ ಇಂಗ್ಲೆಂಡ್ ಮತ್ತು ಸ್ಯಾಟಲ್ಯಾಂಡ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕೆಏಕೈಕ ಅಧಿಕಾರಿಯಾಗಿ ಆಯ್ಕೆಗೊಂಡು ಅಲ್ಲಿಯ ಕಾರಾಗೃಹಗಳ ಸುಧಾರಣೆ ಮತ್ತುಅಪರಾಧಿಗಳ ಮನಃಪರಿರ‍್ತನೆಯ ಕರ‍್ಯಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡುಬಂಧಿಗಳ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ.

ಇವರ ರ‍್ತವ್ಯ ನಿಷ್ಠೆ ಮತ್ತು ಕಾರಾಗೃಹಆಡಳಿತದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಗಾಗಿ ೨೦೨೧ರಲ್ಲಿ ರ‍್ನಾಟಕ ರ‍್ಕಾರದಿಂದಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದೆ.’ಹಿಂಸಾಕಾರಣ’, ಇವರಇನ್ನೊಂದುಪ್ರಕಟಿತಕೃತಿ. ಇವರ ಬರಹಗಳು ಬೆಂಗಳೂರು ಮತ್ತು ತುಮಕೂರುವಿವಿಗಳ ಪದವಿ ತರಗತಿಗೆ ಪಠ್ಯವಾಗಿದೆ.

ದಿವಂಗತ ಯು.ಟಿ. ಫರೀದ್ ಸ್ಮರಣರ‍್ಥ ನೀಡಲಾಗುವ ʼಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿʼಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ ೨೨ಕೃತಿಗಳು ಬಂದಿದ್ದು, ಸಾಹಿತಿಅಬ್ದುಲ್‌ ರಹಿಮಾನ್‌ ಕುತ್ತೆತ್ತೂರು, ಲೇಖಕಿಮತ್ತುಪ್ರಾಧ್ಯಾಪಕಿಶಮೀಮಾಕುತ್ತಾರ್‌ ಹಾಗೂಪತ್ರರ‍್ತ, ಸಾಹಿತಿಹಂಝಮಲಾರ್ ತರ‍್ಪುಗಾರರಾಗಿ ಸಹಕರಿಸಿದ್ದಾರೆ.ಪ್ರಶಸ್ತಿಪ್ರದಾನಸಮಾರಂಭವುಡಿ. ೨೭ ರಂದುಗಜೇಂದ್ರಗಡದಲ್ಲಿನಡೆಯಲಿದೆಎಂದುಮುಸ್ಲಿಮ್‌ ಲೇಖಕರಸಂಘದಅಧ್ಯಕ್ಷಉಮರ್‌ ಯು.ಹೆಚ್.‌ ಪ್ರಕಟಣೆಯಲ್ಲಿತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments