HomeFresh Newsಕಡಬ : ಕಾಡಾನೆ ದಾಳಿ ಇಬ್ಬರು ಬಲಿ

ಕಡಬ : ಕಾಡಾನೆ ದಾಳಿ ಇಬ್ಬರು ಬಲಿ

ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾದ ಘಟನೆ ಕಡಬ ಸಮೀಪದ ಮೀನಾಡಿ ಎಂಬಲ್ಲಿ ಇಂದು ನಡೆದಿದೆ. ಹಾಲಿನ ಡೈರಿಗೆ ಕೆಲಸಕ್ಕೆ ಹೋಗುತ್ತಿದ್ದ ಸಿಬ್ಬಂದಿ ರಂಜಿತಾ ಹಾಗೂ ರಮೇಶ್ ರೈ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಥಳದಲ್ಲಿ ಆಕ್ರೋಶಿತ ಸಾರ್ವಜನಿಕರು ಗಲಾಟೆ ಮಾಡಿದ್ದು ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

ವಾರದ ಹಿಂದೆ ಮರ್ದಾಳದ ಯುವಕನೊಬ್ಬ ಫೇಸ್ಬುಕ್ ನಲ್ಲಿ ಕಾಡಾನೆ ದಾಳಿ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವೇಳೆ ಕಡಬ ಪಂಚಾಯತ್ ಪಿಡಿಓ ಕಡಬ ಠಾಣೆಗೆ ದೂರು ನೀಡಿ ಯುವಕನ ಮೇಲೆ ಕ್ರಮಕೈಗೊಳ್ಳುವಂತೆ ಮಾಡಿದ್ದರು. ಕಡಬ ಪೊಲೀಸರು ಆತನ ಬಳಿಯಿದ್ದ ಮಾಹಿತಿ, ವೀಡಿಯೋವನ್ನ ಡಿಲಿಟ್ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments