ಕಡಬ : ಕಾಡಾನೆ ದಾಳಿ, ಮೃತರ ಮನೆಗೆ ಭೇಟಿ ನೀಡಿದ ಸಚಿವ ಎಸ್. ಅಂಗಾರ

ಆನೆ ದಾಳಿಯಂದ ಮತಪಟ್ಟ ರೆಂಜಲಾಡಿ ಗ್ರಾಮದ ನೈಲ ರಂಜಿತಾ ಹಾಗೂ ರಮೇಶ್ ರೈ ಅವರ ಮನೆಗೆ ಬಂದರು ಮೀನುಗರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಸಚಿವರ ಆಗಮನವಾಗುತ್ತಿದ್ದಂತೆ ಮನೆಯವರು ತೀವ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ಕಳೆದ ಕೆಲವು ತಿಂಗಳಿಂದ ಆನೆಗಳ ಹಾವಳಿಯ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಆದರೆ ಯಾರೂ ಸರಿಯಾದ ಕ್ರಮ ಕೈಗೊಂಡಿಲ್ಲ. ನೀವು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಿದ್ದರೆ ನನ್ನ ಮಗಳ ಪ್ರಾಣ ಉಳಿಯುತ್ತಿತ್ತು ಎಂದು ಮತಳ ತಾಯಿ ಅಳಲತ್ತುಕೊಂಡರು.

ಮತಕುಟುಂಬಕ್ಕೆ ತಲಾ 15 ಲಕ್ಷ ರೂ ಪರಿಹಾರ ನೀಡಲಾಗುವುದ. ತಕ್ಷಣಕ್ಕೆ ಐದು ಲಕ್ಷ ರೂ ಇಂದೇ ನೀಡಲಾಗುವುದು ಎಂದರು. ಸಚಿವರೊಂದಿಗೆ ಬಿಜೆಪಿ ಮುಖಂಡರಾದ ಕಷ್ಣ ಶೆಟ್ಟಿ ಕಡಬ, ರಾಕೇಶ್ ರೈ ಕೆಡೆಂಜಿ, ಪುಲಸ್ತ್ಯಾ ರೈ, ಸುರೇಶ್ ಗೌಡ ದೇಂತಾರು, ಉಮೇಶ್ ಶೆಟ್ಟಿ ಸಾಯಿರಾಂ, ಅಜಿತ್ ಆರ್ತಿಲ ಮತ್ತಿತರರು ಉಪಸ್ಥಿತರಿದ್ದರು. ಐದು ಲಕ್ಷ ಪರಿಹರ ವಿತರಣೆ: ಸಂಜೆ ಮತ ರಂಜಿತಾ ಮನೆಗೆ ಭೆಟಿ ನೀಡಿದ ಜಿಲ್ಲಾ ರಣ್ಯ ಸಂರಕ್ಷಣಾಧಿಕಾರಿ ಡಾಕರಿಕ್ಕಳನ್ ಐದು ಲಕ್ಷ ರೂನ ಚೆಕ್ ವಿತರಿಸಿದರು. ಮತ ರಮೇಶ್ ರೈ ಅವರಿಗೆ ಯಾರೂ ವಾರಿಸುದಾರರು ಇಲ್ಲದ ಕಾರಣ ತಾಂತ್ರಿಕ ಕರಣಕ್ಕಾಗಿ ಮುಂದೆ ಪರಿಹಾರ ನೀಡುವುದಾಗಿ ಅವರು ತಿಳಿಸಿದರು.

Related Posts

Leave a Reply

Your email address will not be published.