ಕದ್ರಿ ಕಾಳಭೈರವ ದೇವಸ್ಥಾನ: ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ

ಮಂಗಳೂರು: ಮಂಗಳೂರಿನ ಶ್ರೀ ಕಾಲಭೈರವ ದೇವಸ್ಥಾನ ಸುವರ್ಣ ಕದಳೀ ಶ್ರೀ ಯೋಗೇಶ್ವರ ಮಠದ ಮಠಾಧೀಶರಾದ ರಾಜರಾಜೇಶ್ವರತಪೋನಿಧಿ ಶ್ರೀ 1008 ಶ್ರೀ ರಾಜಯೋಗಿ ನಿರ್ಮಲನಾಥಜೀ ಅವರ ಮಾರ್ಗದರ್ಶನದಲ್ಲಿ, ವೇದವಿದ್ವಾನ್ ದೇರೆಬೈಲು ವಿಠಲ್‌ದಾಸ್ ತಂತ್ರಿಗಳ ನೇತೃತ್ವದಲ್ಲಿ ಕದ್ರಿ ಸಿದ್ಧ ಪೀಠದೊಡೆಯ ಶ್ರೀ ಕಾಲಬೈರವ ದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಇಂದು ನಾಥ ಪಂಥದ ಸಂಪ್ರದಾಯದಂತೆ ವೈಧಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.ಇದೇ ಸಂದರ್ಭದಲ್ಲಿ ಶಿಖರ ಪ್ರತಿಷ್ಠೆ-ಶ್ರೀ ಕಾಲಭೈರವ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಶ್ರೀ ಕಾಲಬೈರವ ದೇವರಿಗೆ ರೋಟ್‌ಪೂಜೆ, ಪ್ರಸನ್ನ ಪೂಜೆ ನಡೆಯಲಿದೆ.
ಈ ಬ್ರಹ್ಮಕಲಶಾಭಿಷೇಕಕ್ಕೆ ಗುಜರಾತಿನಿಂದ ತರಿಸಲಾದ ಸುಮಾರು 60 ಲಕ್ಷ ರೂ. ವೆಚ್ಚದ ವಿಶಿಷ್ಠ ಕಪ್ಪು ಶಿಲೆಯ ಪೀಠದಲ್ಲಿ ಕಾಳ ಭೈರವ ದೇವರ ಪ್ರತಿಪ್ಠೆಯಾಗಲಿದೆ. ಸಾರ್ವಜನಿಕರು ಭಕ್ತಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಿತಿಯ ಅಧ್ಯಕ್ಷ ಯಚ್.ಕೆ. ಪುರುಷೋತ್ತಮ ಜೋಗಿ ಮತ್ತು ಪ್ರಧಾನ ಕಾರ್ಯದರ್ಶಿ ಸತೀಶ್ ಜೋಗಿ ಮಾಲೆಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.