ಕಾಲಭೈರವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಸಂ. ಕ. ಸಮಾಚಾರ, ಮಂಗಳೂರು: ಧರ್ಮ, ಸಂಸ್ಕøತಿಯೊಂದಿಗೆ ಪರಿಸರವನ್ನು ರಕ್ಷಿಸಿ ಉಳಿಸುವ ಮೂಲಕ ಜಗತ್ತನ್ನು ಉಳಿಸುವ ಕೆಲಸವಾಗಬೇಕಿದೆ ಎಂದು ಜಿ. ಆರ್. ಮೆಡಿಕಲ್ ಕಾಲೇಜು ಹಾಗೂ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ರಾವ್ ಹೇಳಿದರು.
ನಗರದ ಕದ್ರಿಯಲ್ಲಿರುವ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಸಂಜೆ ಗೋರಕ್ಷನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಅವರು ಉದ್ಘಾಟಿಸಿದರು.


ಪರಿಸರ ಉಳಿದರೆ ಜಗತ್ತು ಉಳಿದೀತು. ಸುಂದರ, ಸ್ವಚ್ಛ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಜಗತ್ತಿನಲ್ಲಿ ಯಾರೂ ಮೇಲು ಕೀಳಲ್ಲ, ಸರ್ವರೂ ಸಮಾನರು. ಬೇಧಬಾವ ಇರಬಾರದು. ನಿರ್ಮಲವಾದ ಮನಸ್ಸಿದ್ದವರು ದೇವರಿಗೆ ಸಮಾನ. ಆದ್ದರಿಂದ ನಮ್ಮ ಮನಸ್ಸನ್ನು ಸ್ವಚ್ಛವಾಗಿಡಬೇಕಿದೆ. ನಮ್ಮ ವರ್ತನೆ ಉತ್ತಮವಾಗಿದ್ದರೆ, ನಮ್ಮೊಂದಿಗೆ ವ್ಯವಹರಿಸುವವರ ವರ್ತನೆಯೂ ಉತ್ತಮವಾಗಿರುತ್ತದೆ. ಎಲ್ಲಿ ಭಯ ಇರುತ್ತದೋ ಅಲ್ಲಿ ಭಕ್ತಿಯೂ ಇರುತ್ತದೆ. ಈ ದಿಸೆಯಲ್ಲಿ ನಮ್ಮ ಯುವಜನತೆಗೆ ಮಾರ್ಗದರ್ಶನ ನೀಡಿ, ನಮ್ಮ ಧರ್ಮ, ಸಂಸ್ಕøತಿಯನ್ನು ಉಳಸಬೇಕಿದೆ ಎಂದರು.


ಮುಖ್ಯ ಅತಿಥಿ ವಿಶ್ವ ಹಿಂದೂ ಪರಿಷತ್ ಮುಂದಾಳು ಶರಣ್ ಪಂಪ್‍ವೆಲ್ ಮಾತನಾಡಿ, ಇದು ಸಾಧು ಸಂತರ ನೆಲೆವೀಡು. ಕಾಲಭೈರವ ಕ್ಷೇತ್ರದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವವನ್ನು ಯೋಗಿಗಳೊಂದಿಗೆ ನಾಥ ಪಂಥದ ಅನುಯಾಯಿಗಳಾದ ಜೋಗಿಗಳು ಮಾಡುತ್ತಿರುವುದು ಸುಯೋಗ. ಈ ದೇಶ, ಹಿಂದೂ ಧರ್ಮ ಉಳಿಯಲು ಮಠ ಮಂದಿರಗಳು, ದೇವಸ್ಥಾನ, ದೈವಸ್ಥಾನಗಳು, ಸಾಧು ಸಂತರು ಕಾರಣ ಎಂದರು.


ಹಿಂದೂ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಹಿಂದೂ ಬಾಂಧವರು ಒಗ್ಗಟ್ಟಾಗಬೇಕಿದೆ. ಹಿಂದೂ ಧರ್ಮದ ಮೇಲೆ ಬೇರೆ ಬೇರೆ ರೂಪದಲ್ಲಿ ದಾಳಿಯಾಗುತ್ತಲೇ ಇದೆ. ನಮ್ಮ ಮಕ್ಕಳಿಗೆ ವಾಸ್ತವತೆಯ ಅರಿವು ಮೂಡಿಸುವ ಕೆಲಸವಾಗಬೇಕು. ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿ ಅವರ ಬದುಕು, ಭವಿಷ್ಯವನ್ನು ಹಾಳು ಮಾಡುತ್ತಿರುವವರ ಬಗ್ಗೆ ಎಚ್ಚರದಿಂದಿರಬೇಕು. ಈ ಬಗ್ಗೆ ಹೆತ್ತವರು ವಿಶೇಷ ಮುತುವರ್ಜಿ ವಹಿಸಬೇಕೆಂದು ಹೇಳಿದರು.


ಇನ್ನೊಬ್ಬ ಮುಖ್ಯ ಅತಿಥಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಕೊಡಿಯಾಲಗುತ್ತುವಿಗೂ ಕದ್ರಿ ಜೋಗಿ ಮಠದ ಅರಸು ಪೀಠಕ್ಕೂ ಇರುವ ಅವಿನಾಭವ ಸಂಬಂಧವನ್ನು ವಿವರಿಸಿ ಈ ಕ್ಷೇತ್ರ ಆದ್ಯಾತ್ಮಿಕ ಕೇಂದ್ರವಾಗಿ ಬೆಳೆಯಬೇಕಿದೆ ಎಂದರು.
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಮನೋಹರ ಶೆಟ್ಟಿ, ಉದ್ಯಮಿಗಳಾದ ಬಿ. ಕರುಣಾಕರನ್, ಕಿಶೋರ್ ದಂಡಕೇರಿ, ರತ್ನಾಕರ ಜೈನ್, ಎಂ. ರವೀಂದ್ರ ಶೇಟ್, ಟಿ. ಎ. ಅಶೋಕನ್ ಮೇಗಿನಮನೆ ಉಮೇಶ್ ರೈ, ಅತಿಥಿಗಳಾಗಿದ್ದರು.


ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಜೋಗಿ ಮಾಲೆಮಾರ್, ಸುಧಾಕರ ರಾವ್ ಪೇಜವಾರ, ಸುಮನ್ ಕದ್ರಿ, ಮಹಿಳಾ ಘಟಕದ ಆದ್ಯಕ್ಷೆ ಸುನಂದಾ ಸುರೇಶ್ ಬಿಜೈ, ಉಪಾಧ್ಯಕ್ಷೆ ಅಮಿತಾ ಸಂಜೀವ, ಡಾ. ರಾಜೇಶ್ ಕದ್ರಿ, ಜೋಗಿ ಸಮಾಜ ಸುಧಾರಕ ಸಂಘದ ಉಪ ಸಮಿತಿಐ ದಯಾನಂದ್ ಎಂ. ಪುತ್ತೂರು, ನವನಾಥ್ ವಿಟ್ಲ, ಹರೀಶ್ ಮುಡಿಪು, ಗೋಪಾಲ್ ಮಂಜೇಶ್ವರ್, ಮಂಜುನಾಥ, ಬಾಲಕೃಷ್ಣ ಪುರುಷ, ಸುನಂದ ಸನತ್ ಕದ್ರಿ, ರಾಜೇಶ್ ಕೊಂಚಾಡಿ, ವಾಸುದೇವ ರಾವ್, ಗೋಪಾಲ್ ಕುಡುಪು, ಮೋನಪ್ಪ ಪುರುಷ, ವರದರಾಜ್, ಹರೀಶ್ ಕುಮಾರ್ ಮೊದಲಾದವರಿದ್ದರು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಹರೀಶ್ ಜೋಗಿ ಶಕ್ತಿನಗರ ವಂದಿಸಿದರು. ಡಾ. ಚಂದ್ರಶೇಖರ ಜೋಗಿ ಕಾರ್ಯಕ್ರಮ ನಿರ್ವಹಿಸಿದರು.ಇದಕ್ಕೂ ಮೊದಲು ಯೋಗೇಶ್ವರ ಮಠಾಧಿಪತಿ ಶ್ರೀ 1008 ಶ್ರೀ ರಾಜಯೋಗಿ ನಿರ್ಮಲ್‍ನಾಥ್‍ಜೀ ಮಹಾರಾಜ್‍ರವರ ವೈಭವದ ಶೋಭಾಯಾತ್ರೆ ಪೂರ್ಣಕುಂಭದೊಂದಿಗೆ ಮಠದಿಂದ ಹೊರಟು ಪದವು, ನಂತೂರು, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ, ಸಕ್ರ್ಯೂಟ್ ಹೌಸ್ ಆಗಿ ಮಠಕ್ಕೆ ಹಿಂತಿರುಗಿ ಸಂಪನ್ನಗೊಂಡಿತು. ವಿವಿಧ ಸಾಂಸ್ಕøತಕ ಕಾರ್ಯಕ್ರಮಗಳು ನಡೆಯಿತು.

Related Posts

Leave a Reply

Your email address will not be published.