ಕಾಲಭೈರವ ದೇವಸ್ಥಾನ ಬ್ರಹ್ಮಕಲಶೋತ್ಸವ : ಹೊರೆ ಕಾಣಿಕೆ ಕೇಂದ್ರ ಆರಂಭ

ಮಂಗಳೂರು: ಕದ್ರಿ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಫೆ. 3ರಿಂದ 6ರ ತನಕ ನಡೆಯಲಿದ್ದು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹೊರೆ ಕಾಣಿಕೆ ಸಂಗ್ರಹ ಕೇಂದ್ರವನ್ನು ಆರಂಭಿಸಲಾಗಿದೆ.ಕದ್ರಿ ದೇವಸ್ಥಾನದಲ್ಲಿ ಹೊರೆ ಕಾಣಿಕೆ ಕೇಂದ್ರವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ರಾವ್ ಹಾಗೂ ಮಂಗಳಾದೇವಿ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಉದ್ಘಾಟಿಸಿದರು.ಸುಧಾಕರ್ ರಾವ್ ಪೇಜಾವರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಯಚ್.ಕೆ. ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ಸತೀಶ್‍ಜೋಗಿ ಮಾಲೆಮಾರ್, ಪ್ರಧಾನ ಸಲಹೆಗಾರರಾದ ಡಾ. ಪಿ. ಕೇಶವನಾಥ್ , ಕಿರಣ್ ಕುಮಾರ್ ಜೋಗಿ, ಮಹಿಳಾ ಘಟಕದ ಅಧ್ಯಕ್ಷೆ ಸುನಂದ ಸುರೇಶ್, ಕಾರ್ಯದರ್ಶಿ ನಮಿತಾ ಜಯರಾಮ್, ಹೊರೆಕಾಣಿಕೆ ಉಗ್ರಾಣ ಸಮಿತಿಯ ಸಂಚಾಲಕ ವಿನಯಾನಂದ ಕಾನಡ್ಕ, ಹಣಕಾಸು ಸಮಿತಿಯ ಸಹ ಸಂಚಾಲಕ ವರದರಾಜ್ ಮೊದಲಾದವರಿದ್ದರು.