ಕಳತ್ತೂರು: ದ.ಸಂ.ಸ ಕಳತ್ತೂರು ಗ್ರಾಮ ಶಾಖೆ ಉದ್ಘಾಟನೆ
ಶ್ರೀ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಪ್ರೋ.ಕೃಷ್ಣಪ್ಪ ಸ್ಥಾಪಿತ ಕಳತ್ತೂರು ಶಾಖೆ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ ನೇರವೆರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೊರಕೆ, ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಸೃಷ್ಟಿಯಿಂದ ಪ್ರಾರಂಭವಾಗಿದ್ದಲ್ಲ,ಅದು ಮಾನವರಿಂದ ಆದದ್ದು, ಅದರ ವಿರುದ್ಧ ಅಂಬೇಡ್ಕರರು ನ್ಯಾಯೋಚಿತ ಹೋರಾಡಿ ಸಂವಿಧಾನವನ್ನು ರಚಿಸಿದರು ಅದನ್ನು ಉಳಿಸಿ ಪೋಷಿಸಿದರೆ ಮಾತ್ರ ದೇಶ ಸುಭದ್ರ, ಆಗಾಗಿ ನಾವೆಲ್ಲ ಸಂವಿಧಾನದ ಸಂರಕ್ಷಿಸಬೇಕೆಂದು ಹೇಳಿದರು.
ಕಾಪು ಕ್ಷೇತ್ರದ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ,ದಲಿತ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶ್ಯಸ್ಚ ನೀಡಿದಾಗ ಹಾಗೂ ಅಂಬೇಡ್ಕರರ ಚಿಂತನೆಯೊಂದಿಗೆ ಬದುಕಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕರು ಶ್ರೀಲಾಲಾಜಿ.ಆರ್.ಮೆಂಡನ್, ಕುತ್ಯಾರು ಗ್ರಾ.ಪಂ ಅಧ್ಯಕ್ಷರು ಶ್ರೀ ಜನಾರ್ಧನ ಆಚಾರ್ಯ ಮಾತನಾಡಿ ನೂತನ ಶಾಖೆಗೆ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಮೇಶ್ ಕೋಟ್ಯಾನ್ ಕೆಳರ್ಕಳಬೆಟ್ಟು ವಹಿಸಿದ್ದರು ಜಿಲ್ಲಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಉಡುಪಿ . ಮುಖ್ಯ ಅತಿಥಿಗಳಾಗಿ ಶ್ರೀ ರಂಗನಾಥ್ ಶೆಟ್ಟಿ ಬರಬೆಟ್ಟು, ಶ್ರೀಕೃಷ್ಣ ಬಜೆ, ಕುಕ್ಕೆಹಳ್ಳಿ ಜಿಲ್ಲಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಉಡುಪಿ , ಶ್ರೀ ಅಪ್ಪುರಾಜ್ ದಲಿತ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲಕರು ಉಡುಪಿ, ಶ್ರೀ ರವಿ ಪಲಿಮಾರ್ ಜಿಲ್ಲಾ ಸಂಘಟನಾ ಸಂಚಾಲಕರು ದ. ಸಂ.ಸ, ಶ್ರೀ ನಾರಾಯಣ ಗುರಿಕಾರರು ಕಳತ್ತೂರು, ಶ್ರೀ ಸಂದೀಪ್ ಕರ್ಕೇರ ಕಳತೂರು, ಕುತ್ಯಾರು ಗ್ರಾ.ಪಂ ಸದಸ್ಯರಾದ ಶ್ರೀ ಮತಿ ದಿವ್ಯ ಶೆಟ್ಟಿಗಾರ್, ಸ್ಟ್ಯಾನಿ ಕೋಡ್ದ, ಹಾಗೂ ಶ್ರೀಮತಿ ಲೀಲಾವತಿ, ಜಗದೀಶ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ರಾಘವೇಂದ್ರರವರು ಸ್ವಾಗತಿಸಿದರು, ಶ್ರೀ ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.