ಕಲ್ಲೋಣಿ – ದೇವರಕಾನ: ಸಚಿವ ಅಂಗಾರ ಆದೇಶದ ಮೇರೆಗೆ ಜಿಲ್ಲಾಪಂಚಾಯತ್ ಇಂಜೀನಿಯರ್ (PWD) ಮಣಿಕಂಠ ಅವರು ಕಲ್ಲೋಣಿ ದೇವರಕಾನ ರಸ್ತೆಯನ್ನು ವೀಕ್ಷಿಸಿದರು

ಸಚಿವ ಅಂಗಾರ ಅವರ ಆದೇಶದ ಮೇರೆಗೆ ಜಿಲ್ಲಾಪಂಚಾಯತ್ ಇಂಜೀನಿಯರ್ (PWD) ಮಣಿಕಂಠ ಅವರು ಕಲ್ಲೋಣಿ ದೇವರಕಾನ ರಸ್ತೆಯನ್ನು ವೀಕ್ಷಿಸಿ .ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದರು. ಸುಳ್ಯ ಬೆಳ್ಳಾರೆಯ ಮುಖ್ಯರಸ್ತೆ ಕಲ್ಲೋಣಿ ಎಂಬಲ್ಲಿ ಬಹಳ ವರ್ಷ ದಿಂದ ರಸ್ತೆ ಹದಗೆಟ್ಟು ಹೋದ ಕಾರಣದಿಂದ ಒಂದೂವರೆ ಕಿಲೋ ಮೀಟ ರ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಚಿವರ ಒಪ್ಪಿಗೆ ಪಡೆದು ಕಾಂಕ್ರಿಟೀಕರಣ ಮಾಡಲು ತೀರ್ಮಾನ ತೆಗೆದುಕೊಳ್ಳುವುದು. ಎಂದು ಬೆಳ್ಳಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಅವರು ಈ ಸಂದರ್ಭದಲ್ಲಿ ತಿಳಿಸಿದರು .ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಭವ್ಯ. ಪ್ರೇಮ್ ಸ್ಟುಡಿಯೋ ಬೆಳ್ಳಾರೆ.ಜಗನ್ನಾಥಗೌಡ ಚೀಮುಳ್ಳು ಆರ್. ಕೆ. ರಾಮಕೃಷ್ಣ ಭಟ್ ಬೆಳ್ಳಾರೆ .ಎಪಿಎಂಸಿ ಉಪಾಧ್ಯಕ್ಷ ನವೀನ್ ಸಾರಕೆರೆ ,ಕಿಲಾಡಿ ಭಾಸ್ಕರಗೌಡ , ಐವರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಬಾಲಕೃಷ್ಣ ಕಿಲಾಡಿ ,ಕಲ್ಲೋಣಿ ಮುತ್ತುಮಾರಿಯಮ್ಮ ದೇವಸ್ಥಾನದ ಕಮೀಟಿಯ ಸದಸ್ಯರು ಭಕ್ತರು .ಕೃಷ್ಣ, ದರ್ಖಾಸ್ತು , ಪ್ರಸಾದ್ ಕತ್ಲಡ್ಕ ಕರುಣಾಕರ ಗೌಡ ಬರೆಮೇಲು ತ್ರಿಶಕ್ತಿ ಸ್ವರೂಪಿಣಿ ದೇವಸ್ಥಾನ ಬರೆಮೇಲು , ದೇವಿದಾಸ ಕತ್ಲಡ್ಕ , ಬೆಳ್ಳಾರೆ ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು .ರೋಡಿನ ಅಗಲೀಕರಣ ಮಾಡುವುದಾಗಿ ಎಲ್ಲರ ಒಮ್ಮತದ ಅಭಿಪ್ರಾಯದಿಂದ ತೀರ್ಮಾನ ಕೈಗೊಳ್ಳಲಾಗಿದೆ.

