Home Posts tagged #bellare

ತೊಕ್ಕೊಟ್ಟು: ಐಸ್ ಕ್ರೀಮ್ ಪಾರ್ಲರ್ ವೈಟರ್ ಆತ್ಮಹತ್ಯೆ

ಉಳ್ಳಾಲ: ಐಸ್ ಕ್ರೀಮ್ ಪಾರ್ಲರ್ ಒಂದರ ವೈಟರ್ ಆಗಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಎಂಬಾತ ಪಿಲಾರ್ ನ ಗೋಡೌನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಡೌನ್ ನ ಅಂಗಳದಲ್ಲಿ ಸ್ಥಳೀಯ ಯುವಕರು ಬೆಳಿಗ್ಗೆ ಶಟಲ್ ಆಡುತ್ತಿದ್ದಾಗ ಕಿಟಕಿ ತೆರೆದು ಯೋಗೇಶ್ ನೋಡಿದ್ದರು. ಯುವಕರು ತೆರಳಿದ ಬಳಿಕ ಯೋಗೇಶ್ ಡೆತ್ ನೋಟ್ ಬರೆದು

ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಒಂದು ವರ್ಷದ ಹಿನ್ನಲೆ ಸ್ಮೃತಿ ದಿನ ಹಾಗೂ ರಕ್ತದಾನ ಶಿಬಿರ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಸ್ಮೃತಿ ದಿನ ಹಾಗೂ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರವನ್ನು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಧಾಕೃಷ್ಣ ರೈ, ಬೂಡಿಯಾರು, ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಗುರುದತ್ ನಾಯಕ್, ಕೃಷ್ಣ, ರಾಕೇಶ್ ರೈ ಕೆಡೆಂಜಿ

ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹ ರಕ್ಷಕ ಹೂವಪ್ಪ ವಿಧಿವಶ

ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹ ರಕ್ಷಕ ಕೇನ್ಯ ಗ್ರಾಮದ ಕಣ್ಕಲ್ ಹೂವಪ್ಪರು ಜು. 25ರಂದು ನರ ಸಂಬಂಧಿ ಕಾಯಿಲೆಯಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಅಂದಾಜು 55 ವರ್ಷ ವಯಸ್ಸಾಗಿತ್ತು. ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಹೂವಪ್ಪರ ನಿಧನಕ್ಕೆ ದ.ಕ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಡಾ ಮುರಲಿ ಮೋಹನ್ ಚೂಂತಾರು ಸಂತಾಪ ವ್ಯಕ್ತಪಡಿಸಿಹೂವಪ್ಪರು ನಿಷ್ಠಾವಂತ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದರೆಂದು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ-ಆರೋಪಿಗಳಿಗೆ ಜೂನ್30ರ ಒಳಗೆ ಶರಣಾಗಲು ಗಡುವು

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‍ಐಎ ಅಧಿಕಾರಿಗಳು ನಾಪತ್ತೆಯಾಗಿರುವ ಆರೋಪಿಗಳಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಸುಳ್ಯ ನಗರದ ಬೀದಿಗಳಲ್ಲಿ ಈ ಬಗ್ಗೆ ಧ್ವನಿವರ್ಧಕ ಬಳಸಿ ಪ್ರಕಟಣೆ ಹೊರಡಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂ. 30 ರೊಳಗೆ ಶರಣಾಗದೇ ಇದ್ದಲ್ಲಿ ಅವರ ಮನೆಯನ್ನು ಮುಟ್ಟುಗೋಲು ಮಾಡಲಾಗುವುದೆಂದು ಅನೌನ್ಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಎನ್‍ಐಎ ನ್ಯಾಯಾಲಯದ

ಪ್ರವೀಣ್ ನೆಟ್ಟಾರು ಮನೆಗೆ ಹರೀಶ್ ಪೂಂಜ ಭೇಟಿ

ಶಾಸಕ ಹರೀಶ್ ಪೂಂಜ ಅವರು ಹಿಂದೂ ಸಮಾಜದ ಅಚ್ಚಳಿಯದ ನಕ್ಷತ್ರ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಜಿಹಾದಿಗಳ ಸಂಚಿಗೆ ವೀರ ಮರಣವನ್ನಪ್ಪಿದ ಬಲಿದಾನಿ ಪ್ರವೀಣ್ ನೆಟ್ಟಾರ್ ಅವರ ನೂತನ ಮನೆಗೆ ಭೇಟಿ ನೀಡಿ ಅವರ ಪ್ರತಿಮೆಗೆ ನಮಸ್ಕರಿಸಿದರು. ಬಳಿಕ ಪ್ರವೀಣ್ ನೆಟ್ಟಾರು ಅವರು ಮಾತಾಪಿತರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದು ಕುಟುಂಬದ ಯೋಗಕ್ಷೇಮ ವಿಚಾರಿಸಿ ಪ್ರವೀಣ್ ನೆಟ್ಟಾರು ಅವರ ತ್ಯಾಗಕ್ಕೆ ಪ್ರಣಾಮ ಸಲ್ಲಿಸಿದರು.

ಕೆರೆಯ ಪಾಚಿ ತೆಗೆಯಲು ಹೋದ ಯುವಕ ಮೃತ್ಯು

ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34) ಎಂದು ಗುರುತಿಸಲಾಗಿದೆ. ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು ಹೋದ ಪಿರ್ಯಾದಿದಾರರ ಗೋಪಾಲಕೃಷ್ಣ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಈಜು ಬಾರದೇ

ಬೆಳ್ಳಾರೆಯಲ್ಲಿ ಬಿಜೆಪಿ ವತಿಯಿಂದ ರೋಡ್ ಶೋ

ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಬೆಳ್ಳಾರೆಯಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಯಿತು. ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಆರಂಭಗೊಂಡು ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ರೋಡ್ ಶೋ ನಢಯುತು. ಬಳಿಕ ಬಸ್ ನಿಲ್ದಾಣದ ಬಳಿಯಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಬಿಜೆಪಿ ದ.ಕ. ಜಿಲ್ಲಾ

ಬೆಳ್ಳಾರೆ ಪೊಲೀಸ್ ಠಾಣೆಗೆ ಪೊಲೀಸ್ ಮಹಾ ನಿರೀಕ್ಷಕ ಚಂದ್ರಗುಪ್ತ ಭೇಟಿ

ಸುಳ್ಯ: ಪಶ್ಚಿಮ ವಲಯ ಪೆÇಲೀಸ್ ಮಹಾ ನಿರೀಕ್ಷಕ ಚಂದ್ರಗುಪ್ತ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಚುನಾವಣೆ ಹಿನ್ನಲೆಯಲ್ಲಿ ವಿಟ್ಲ, ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ ಚಂದ್ರಗುಪ್ತ ಅವರು ಬಳಿಕ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ವೇಳೆ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಠಾಣೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ ಅವರು ಚುನಾವಣೆ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ದಕ್ಷಿಣ ಕನ್ನಡ ಜಿಲ್ಲಾ

ಬೆಳ್ಳಾರೆಯಲ್ಲಿ ನೂತನ ಅಯ್ಯಂಗಾರ ಬೇಕರಿ ಉದ್ಘಾಟನೆ

ಉತ್ತಮ ಗುಣಮಟ್ಟದ ಹಾಗೂ ಶುಚಿ ರುಚಿಯಾದ ವಿವಿಧ ರೀತಿಯ ತಿಂಡಿ ತಿನಿಸುಗಳ ಮಾರಾಟ ಮಳಿಗೆ “ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬೆಳ್ಳಾರೆಯಲ್ಲಿ ಶುಭರಂಭಗೊಂಡಿದೆ. ಶುಭ ಸಮಾರಂಭಗಳಿಗೆ ಬೇಕಾದ ಬೇಕರಿ ಉತ್ಪನ್ನ ಮತ್ತು ಸ್ವೀಟ್ಸ್ ಹೋಲ್ ಸೇಲ್ ದರದಲ್ಲಿ ಲಭ್ಯ. ಇಂದೇ ಸಂಪರ್ಕಿಸಿ. ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬಸ್ ನಿಲ್ದಾಣದ ಎದುರುಗಡೆ ಬೆಳ್ಳಾರೆ ಮೊಬೈಲ್: 9844829959, 7795381568. ಸಂಪರ್ಕಿಸಬಹುದು.

ಬೆಳ್ಳಾರೆ : ಪಜ್ಜೆ ಫೂಟ್ ವರ‍್ಸ್ ಪಾದರಕ್ಷೆ ಮಳಿಗೆ ಶುಭಾರಂಭ

ಪಜ್ಜೆ ಫೂಟ್ ವರ‍್ಸ್ ಸುಸಜ್ಜಿತ ಪಾದರಕ್ಷೆ ಮಳಿಗೆಯನ್ನು ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷರಾದ ರಾಜೇಶ್ ಶಾನುಭೋಗ್ ದೀಪ ಬೆಳಗಿಸುವ ಉದ್ಘಾಟಿಸಿದರು. ನಂತರ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಮಾಧವ ಗೌಡ ಬೆಳ್ಳಾರೆ ಅಧ್ಯಕ್ಷರು ವಾಣಿಜ್ಯ ವರ್ತಕರ ಸಂಘ ಬೆಳ್ಳಾರೆ ಹಾಗೂ ಶಾಹಿನ್ ಮಹಾಲಿನ ಮಾಲಕರದ ಅಬ್ದುಲ್ ಹಮೀದ್ ಹಾಗೂ ಪ್ರಗತಿ ಪಾಲುದಾರಾದ ಬಿ.ಎಂ ಮೊಹಮ್ಮದ್ ಹಾಗೂ ಆರ್. ಕೆ. ಭಟ್ ಕುರುo ಬುಡೇಳು,