ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಸಾಂಕ್ರಾಮಿಕ ರೋಗಗಳ ಅಧ್ಯಯನ ಪೀಡಿಯಾಕಾನ್ -2023ಕ್ಕೆ ಚಾಲನೆ

ಆರೋಗ್ಯಕ್ಕೆ ಸೋಂಕು ಅತ್ಯಂತ ಅಪಾಯಕಾರಿ, ಈ ಕುರಿತು ಚಿಕಿತ್ಸಾ ವಿಧಾನಗಳ ನಾವೀನ್ಯತೆ ಹಾಗೂ ಬದಲಾವಣೆಗಳ ಕುರಿತು ಸಮ್ಮೇಳನ ಬೆಳಕು ಚೆಲ್ಲಲಿದೆ ಎಂದು ಕೇಂದ್ರ  ಇಂಡಿಯನ್ ಅಸೋಸಿಯೇಷನ್ನಿನ ಪೀಡಿಯಾಟ್ರಿಕ್ ಅಧ್ಯಕ್ಷ ಡಾ.ಜಿ.ವಿ ಬಸವರಾಜ ಅಭಿಪ್ರಾಯಪಟ್ಟರು.

ಅವರು ನಾಟೆಕಲ್ ಕಣಚೂರು ಆರೋಗ್ಯ ವಿಜ್ಞಾನ ಹಾಗೂ ಆಸ್ಪತ್ರೆ ವಠಾರದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಷಿಯನ್ ದಕ್ಷಿಣ ಕನ್ನಡ , ಕಣಚೂರು ಆರೋಗ್ಯ ವಿಜ್ಞಾನಗಳ  ಸಂಯುಕ್ತಾಶ್ರಯದಲ್ಲಿ ಸಾಂಕ್ರಾಮಿಕ ರೋಗಗಳ ಅಧ್ಯಯನ ಪೀಡಿಯಾಕಾನ್ -೨೦೨೩ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಯು. ಕಣಚೂರು ಮೋನು ಮಾತನಾಡಿ, ಸಮ್ಮೇಳನದ ಮುಖೇನ  ದಿಗ್ಗಜ ವೈದ್ಯರಿಗೆ ದೊರೆತ ಅವಕಾಶ.ಪ್ರತಿಯೊಂದನ್ನು ಪ್ರಶ್ನಿಸಿ ಮುಂದುವರಿದವನಿಗೆ ಜೀವನದಲ್ಲಿ ಯಶಸ್ಸು ಖಂಡಿತ ಎಂದರು.

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷ ಡಾ| ಮೊಹಮ್ಮದ್ ಇಸ್ಮಾಯಿಲ್ ಹೆಚ್.  ಅಂತರಾಷ್ಟ್ರೀಯ ಪೀಡಿಯಾಟ್ರಿಕ್ ಅಸೋಸಿಯೇಷನ್ ಸಮಿತಿ ಸದಸ್ಯ ಡಾ. ಸಂತೋಷ್ ಸೋನ್ಸ್, ಐಎಪಿ ಐಡಿ ಚಾಪ್ಟರ್ ನ ಕೇಂದ್ರ ಸಮಿತಿ ಅಧ್ಯಕ್ಷ ಡಾ. ವಸಂತ್ ಕಲಾಟ್ಕರ್, ಐಎಪಿ ಕರ್ನಾಟಕ ಅಧ್ಯಕ್ಷ ಡಾ.ಶರಣಗೌಡ ಪಾಟೀಲ್, ಕರ್ನಾಟಕ ರಾಜ್ಯ  ಐಎಪಿ ಐಡಿ ಚಾಪ್ಟರ್  ಅಧ್ಯಕ್ಷೆ ಡಾ. ಶಾಂತಲಾ ಆರ್ ಕೌಜಲ್ಗಿ, ಕೇಂದ್ರ ಐಎಪಿ ಜನರಲ್ ಸೆಕ್ರಟರಿ  ಡಾ.ವಿನೀತ್ ಸಕ್ಸೇನಾಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಕೆ.ಜಿ ಕಿರಣ್ ಸೆಂಟ್ರಲ್ ಐಎಪಿ ಸೌತ್ ಝೋನ್ ಉಪಾಧ್ಯಕ್ಷ ಡಾ.ಜೀಸನ್ ಉನ್ನಿ, ಕರ್ನಾಟಕ ರಾಜ್ಯ ಐಎಪಿ ಐಡಿ ಚಾಪ್ಟರ್  ಕಾರ್ಯದರ್ಶಿ ಡಾ, ವಿನೋದ್ ಉಪ್ಲುಂಕರ್, ಡಾ.ರವಿಕಾಂತ್ ಯಸ್, ಡಾ.ಚೇತಕ್ ಕೆ.ಬಿ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ  ಹಿರಿಯ ತಜ್ಞರುಗಳಾದ ಡಾ.ಸುಬ್ಬರಾವ್ , ಡಾ.ಪವನ್ ಹೆಗ್ಡೆ, ಡಾ.ರತಿಕಾ ಶೆಣೈ, ಡಾ.ಎಡ್ವಿನ್ ಡಯಾಸ್  ಇವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಮಂಗಳೂರು ವಿ.ವಿಯಿಂದ ಗೌರವ ಡಾಕ್ಟರೇಟ್ ಪಡೆದ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕೆ ಕಣಚೂರು ಮೋನು  ಅವರನ್ನು ಸನ್ಮಾನಿಸಲಾಯಿತು.

ಆಫೀಸ್ ಬೇರೆರ್ ಗಳಾದ ಡಾ.ಶ್ರೀಕೃಷ್ಣ ಜಿ.ಎನ್ ಮತ್ತು ಡಾ.ಅಭಿಷೇಕ್  ಪಾಡ್ಕೆ ಅವರಿಗೆ ಪ್ರಶಸ್ತಿ ನೀಡಲಾಯಿತು.

ಡಾ| ಸಂಶಾದ್ ಅಹ್ಮದ್ ಖಾನ್  ಸ್ವಾಗತಿಸಿದರು.   ಡಾ.ಸ್ವಾತಿ ಗುಪ್ತ ಮತ್ತು ಡಾ.ಝೊಹ್ರಾ ತಾಜ್ ಕಾರ್ಯಕ್ರಮ ನಿರೂಪಿಸಿದರು.ಡಾ.ಸ್ವಾತಿ ರಾವ್ ವಂದಿಸಿದರು.

Related Posts

Leave a Reply

Your email address will not be published.