ಮುಡಿಪು: “ವಿದ್ಯಾರ್ಥಿ-ಪೋಷಕ ವಿಜಯ ಪಥ” ಪುಸ್ತಕ ಬಿಡುಗಡೆ

ದ.ಕ ಜಿಲ್ಲಾ ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಘಟಕದ ವತಿಯಿಂದ ಮುಡಿಪು ಸೂರಜ್ ಪಿ.ಯು ಕಾಲೇಜ್ ಆಶ್ರಯದಲ್ಲಿ ರೋಟರಿ ಮಂಗಳೂರು ಸೆಂಟ್ರಲ್ ಸಹಕಾರದೊಂದಿಗೆ “ವಿದ್ಯಾರ್ಥಿ -ಪೋಷಕ ವಿಜಯ ಪಥ” ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮ ಮುಡಿಪು ಪಿಯು ಕಾಲೇಜು ಸಭಾಂಗಣದಲ್ಲಿ  ನಡೆಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಕಾರ್ಯಕ್ರಮಕ್ಕೆದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿ ಜೀವನ ಅತ್ಯಮೂಲ್ಯ ಘಟ್ಟ, ಅದನ್ನು ಅತ್ಯಂತ ಸದ್ಬಳಕೆ ಮಾಡಬೇಕು, ಎಸ್.ಎಸ್.ಎಲ್.ಸಿಯನ್ನು ಲೈಫ್ ಟರ್ನಿಂಗ್ ಪೋಯಿಂಟ್ ಎಂದು ಹೇಳುತ್ತಾರೆ, ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿಆಚರಿಸಬೇಕು, ನಮ್ಮಲ್ಲಿ ದೃಡತೆ ಮತ್ತು ಆತ್ಮ ವಿಶ್ವಾಸ ಇದ್ದಾಗ ಮಾತ್ರ ಪರೀಕ್ಷೆಯನ್ನು ಎದುರಿಸಬಹುದು, ಪರೀಕ್ಷೆಗೆ ಯಾವುದೇ ಭಯ ಬೇಡ ಎಂದರು.

ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕ ಯು.ಟಿ.ಖಾದರ್ ಮಾತನಾಡಿ ಸ್ವಾಭಿಮಾನದ ಜೀವನ ನಡೆಸಬೇಕಾದರೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ಮುಡಿಪು ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ಎಸ್.ರೇವಣ್ ಕರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.

ಸಂಪನ್ಮೂಲ ವ್ಯಕ್ತಿ ಡಾ.ಟಿ ಕೃಷ್ಣ ಮೂರ್ತಿ ಉಜಿರೆ ವಿದ್ಯಾರ್ಥಿಗಳ ಯಶಸ್ಸಿನ ಸೂತ್ರಗಳು ಮತ್ತು ಮಾರ್ಗಗಳು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಡಾ.ಟಿ.ಕೃಷ್ಣಮೂರ್ತಿ ಉಜಿರೆ ಅವರು ಬರೆದ ವಿದ್ಯಾರ್ಥಿ ವಿಜಯ ಪಥ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಶಾಸಕ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್,  ಹಾಗೂ ರಘು ಇಡ್ಕಿದು ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ರೊ.ಜಿ.ಸಾಯಿಬಾಬ, ಕಾರ್ಯದರ್ಶಿ ಪ್ರದೀಪ್ ಕುಲಾಲ್, ಕನ್ನಡ ಸಾಹಿತ್ಯ  ಪರಿಷತ್ ಮಂಗಳೂರು ತಾಲೂಕು ಘಟಕದ  ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್, ಕೋಶಾಧಿಕಾರಿ ಸುಭ್ರಾಯ ಭಟ್, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಖಾಲಿದ್ ಉಜಿರೆ, ರಘು ಇಡ್ಕಿದು  ಮೊದಲಾದವರು ಉಪಸ್ಥಿತರಿದ್ದರು.

ಸೂರಜ್ ಶಿಕ್ಷಣ   ಸಂಸ್ಥೆಯ ಪ್ರಾಂಶುಪಾಲರಾದ ಡಾಲ್ಫಿ ಸಿಕ್ವೇರಾ ಪ್ರಾಸ್ತವಿಕವಾಗಿ ಮಾತನಾಡಿದರು, ಶಿಕ್ಷಕಿ ನಿಶಾ ರಾಣಿ ಸ್ವಾಗತಿಸಿದರು, ಶಿಕ್ಷಕಿ ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಅರುಣ್ ಕುಮಾರ್ ವಂದಿಸಿದರು.

Related Posts

Leave a Reply

Your email address will not be published.